ಅಭಿಷೇಕ್​ಗೆ ಪಾಕ್​ನ ವೇಗಿ ಇಹ್ಸಾನುಲ್ಲಾ ಸವಾಲು: ನನ್ನ ಬೌಲಿಂಗ್​ನಲ್ಲಿ 3 ಎಸೆತ ಎದುರಿಸಲು ಸಾಧ್ಯವಿಲ್ಲ! | Ihsanullah

Untitled design - 2025-10-12T075649.723
Published on

Ihsanullah: ಇತ್ತೀಚಿಗೆ ಪಾಕಿಸ್ತಾನದ ವಿರುದ್ಧ ಫೈನಲ್​ ಪಂದ್ಯ ಗೆಲ್ಲುವ ಮೂಲಕ ಭಾರತ 2025ರ ಏಷ್ಯಾಕಪ್​ ಚಾಂಪಿಯನ್​ಶಿಪ್​ ಆಗಿ ಹೊರಹೊಮ್ಮಿತು. ಏಷ್ಯಾಕಪ್‌ನಲ್ಲಿ ಅಭಿಷೇಕ್ ಶರ್ಮ ಭಾರತದ ಪರ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿದ್ದರು, 7 ಪಂದ್ಯಗಳಲ್ಲಿ ಮೂರು ಬಾರಿ 50+ ರನ್ ಗಳಿಸಿ 200 ಸ್ಟ್ರೈಕ್ ರೇಟ್‌ನೊಂದಿಗೆ 314 ರನ್ ಗಳಿಸಿದರು.

ಅಲ್ಲದೆ, ಐಸಿಸಿ ಶ್ರೇಯಾಂಕದಲ್ಲಿ ಪ್ರಸ್ತುತ ವಿಶ್ವದ ನಂ. 1 ಬ್ಯಾಟ್ಸ್‌ಮನ್ ಆಗಿರುವ ಪಂಜಾಬ್‌ನ ಈ 25 ವರ್ಷದ ಈ ಆಟಗಾರ ಸೂರ್ಯಕುಮಾರ್ ಯಾದವ್ ತಂಡ ಕಪ್​ ಗೆಲ್ಲುವಲ್ಲಿ ಪ್ರಮುಖ ಕಾರಣಗಳಲ್ಲಿ ಒಬ್ಬರಾಗಿದ್ದಾರೆ.ಇದೀಗ ಅಭಿಷೇಕ್​ ಶರ್ಮ ಅವರಿಗೆ ಪಾಕ್​ನ ವೇಗಿ ಇಹ್ಸಾನುಲ್ಲಾ ಸವಾಲು ಹಾಕಿದ್ದಾರೆ.

ಅಭಿಷೇಕ್​ಗೆ ಪಾಕ್​ನ ವೇಗಿ ಇಹ್ಸಾನುಲ್ಲಾ ಸವಾಲು!

ಹೌದು, 2023ರ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ 152.65 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದ ಇಹ್ಸಾನುಲ್ಲಾ, ಈ ಬೌಲಿಂಗ್​ ಪ್ರದರ್ಶನವು ಅವರನ್ನು ಶ್ರೇಯಾಂಕಗಳಲ್ಲಿ ಮೇಲೇರುವಂತೆ ಮಾಡಿತು. ಗಾಯದಿಂದ ಹೊರಗುಳಿಯುವ ಮೊದಲು ಅವರು ಟಿ-20ಐ ಮತ್ತು ಒಂದು ಏಕದಿನ ಪಂದ್ಯವನ್ನು ಸಹ ಆಡಿದ್ದರು.

"ನಾನು ಭಾರತದ ವಿರುದ್ಧ ಆಡಲು ಅವಕಾಶ ಪಡೆದರೆ, ಅಭಿಷೇಕ್ ಶರ್ಮಾ ಅವರನ್ನು 3-6 ಎಸೆತಗಳಲ್ಲಿ ಔಟ್ ಮಾಡುತ್ತೇನೆ" ಎಂದು ಇಹ್ಸಾನುಲ್ಲಾ ವೀಡಿಯೊದಲ್ಲಿ ಹೇಳಿದ್ದಾರೆ.

ಇದೀಗ ಇಹ್ಸಾನುಲ್ಲಾ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಅಲ್ಲದೇ ಟ್ರೋಲ್​ಗೆ ಗುರಿಯಾಗಿದ್ದಾರೆ. ನೆಟ್ಟಿಗರು ತರಹೇವಾರಿ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net