

Afghan-Pakistan : ಇತ್ತೀಚಿಗೆ ಕಾಬೂಲ್ನಲ್ಲಿ ಪಾಕಿಸ್ತಾನಿ ವೈಮಾನಿಕ ದಾಳಿಯ ನಂತರ, ಶನಿವಾರ ತಡರಾತ್ರಿ ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ಭಾನುವಾರ ವರದಿಯಾಗಿದೆ.
ತಾಲಿಬಾನ್ ಪಡೆಗಳು ಮೂರು ಪಾಕಿಸ್ತಾನಿ ಗಡಿ ಪೋಸ್ಟ್ಗಳನ್ನು ವಶಪಡಿಸಿಕೊಂಡಿವೆ ಎಂದು ಹೇಳಿಕೊಂಡಿವೆ. ಪಾಕಿಸ್ತಾನಿ ಭದ್ರತಾ ಅಧಿಕಾರಿಗಳು ತಮ್ಮ ಸೇನೆಯು ಹಲವಾರು ಆಫ್ಘನ್ ಪೋಸ್ಟ್ಗಳನ್ನು ನಾಶಪಡಿಸಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ.
ಪಾಕಿಸ್ತಾನಿ ಭದ್ರತಾ ಅಧಿಕಾರಿಗಳು ಹಂಚಿಕೊಂಡ ವೀಡಿಯೊ ದೃಶ್ಯಾವಳಿಗಳು ಅಫ್ಘಾನಿಸ್ತಾನದ ಕಡೆಗೆ ಬಂದೂಕು ಮತ್ತು ಫಿರಂಗಿಗಳಿಂದ ಗುಂಡು ಹಾರಿಸುವುದನ್ನು ತೋರಿಸಿವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಪಾಕಿಸ್ತಾನಿ ವೈಮಾನಿಕ ದಾಳಿಗಳಿಗೆ ಪ್ರತೀಕಾರ
ಪಾಕಿಸ್ತಾನವು ಅಫ್ಘಾನ್ ವಾಯುಪ್ರದೇಶವನ್ನು ಉಲ್ಲಂಘಿಸಿದ್ದಕ್ಕೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಫ್ಘಾನಿಸ್ತಾನ ರಕ್ಷಣಾ ಸಚಿವಾಲಯದ ವಕ್ತಾರ ಎನಾಯತುಲ್ಲಾ ಖೋವಾರಾಜ್ಮಿ ಹೇಳಿದ್ದಾರೆ. ಸ್ಥಳೀಯ ಸಮಯ ಮಧ್ಯರಾತ್ರಿಯಲ್ಲಿ ದಾಳಿ ಕೊನೆಗೊಂಡಿತು ಎಂದು ಅವರು ಹೇಳಿದರು.(ಏಜೆನ್ಸೀಸ್)