ನಾನು ಮಧ್ಯದ ಬೆರಳು ತೋರಿಸಿದ್ದು ಕೊಹ್ಲಿ ಅಭಿಮಾನಿಗಳಿಗೆ ಅಲ್ಲ: ಗೌತಮ್​ ಗಂಭೀರ್​

Gautam Gambhir
Published on

ಕೊಲಂಬೋ: ವಿರಾಟ್​ ಕೊಹ್ಲಿ ಹೆಸರು ಹೇಳುತ್ತಿರುವ ಅಭಿಮಾನಿಗಳತ್ತ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್​ ಗಂಭಿರ್​ ಮಧ್ಯದ ಬೆರಳನ್ನು ತೋರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಇತ್ತ ವೈರಲ್​ ವಿಡಿಯೋ ಕುರಿತು ಸ್ಪಷ್ಟನೆ ನೀಡಿರುವ ಗೌತಮ್​ ಗಂಭೀರ್​ ನಾನು ಹಾಗೆ ಮಾಡಿದ್ದು, ಕೊಹ್ಲಿ ಅಭಿಮಾನಿಗಳಿಗಲ್ಲ. ಗುಂಪಿನಲ್ಲಿದ್ದ ಕೆಲವರು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗುತ್ತಿದ್ದರು ಅವರಿಗೆ ಹಾಗೆ ತೋರಿಸಿದ್ದೇನೆ ಎಂದು ವಿವರಣೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ಅಲ್ಲಿ ನಿಜವಾಗಿಯೂ ಏನಾಯಿತು ಎಂದರೆ ಭಾರತ ವಿರೋಧಿ ಘೋಷಣೆಗಳನ್ನು ಗುಂಪೊಂದು ಕೂಗುತ್ತಿತ್ತು. ಹಿಂದುಸ್ತಾನ್​ ಮುರ್ದಾಬಾದ್​ ಎಂದು ಕೂಗುತ್ತಿದ್ದರು ಇದನ್ನು ಕೇಳಿದ ತಕ್ಷಣ ನಾನು ಅವರಿಗೆ ಆ ರೀತಿ ಪ್ರತಿಕ್ರಿಯಿಸಿದೆ.

ಕೆಲವು ವ್ಯಕ್ತಿಗಳು ದೇಶದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರೆ ನಾವು ಅದನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ನೀವು ಪಂದ್ಯವನ್ನು ವೀಕ್ಷಿಸಲು ಬಂದಾಗ ನಿಮ್ಮ ತಂಡವನ್ನು ಬೆಂಬಲಿಸಿ ಅದು ಬಿಟ್ಟು ರಾಜಕೀಯ ಮಾಡಲು ಬರಬೇಡಿ. ನಾನು ಈ ವಿಷಯವನ್ನು ಉಭಯ ದೇಶಗಳ ಕ್ರಿಕೆಟ್​ ಅಭಿಮಾನಿಗಳಿಗೆ ಹೇಳುತ್ತಿದ್ದೇನೆ. ಆಟವನ್ನು ಆನಂದಿಸಿ ಅದು ಬಿಟ್ಟು ರಾಜಕೀಯ ಮಾಡಬೇಡಿ ಎಂದಿದ್ದಾರೆ.

ಪಂದ್ಯ ನಡುವೆ ಮಧ್ಯದ ಬೆರಳು ತೋರಿದ್ದಕ್ಕಾಗಿ ಗಂಭೀರ್​ ನಡೆ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ವಿಡಿಯೋ ವೈರಲ್​ ಆದ ಬೆನ್ನಲ್ಲೇ ಗಂಭೀರ್​ ಸ್ಪಷ್ಟನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net