

ಅಯೋಧ್ಯ: ಸನಾತನ ಧರ್ಮದ ಕುರಿತು ಹೇಳಿಕೆ ನೀಡಿ ತೀವ್ರ ವಿವಾದಕ್ಕೀಡಾಗಿರುವ ತಮಿಳುನಾಡಿ ಮುಖ್ಯಮಂತ್ರಿ ಸ್ಟಾಲಿನ್ ಅವರ ಪುತ್ರ, ಸಚಿವ ಉದಯನಿಧಿ ಬಲಪಂಥೀಯ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಹೊಸ ವಿಚಾರ ಒಂದರಲ್ಲಿ ಉದಯನಿಧಿ ಅವರ ತಲೆ ಕಡಿದು ತಂದವರಿಗೆ 10 ಕೋಟಿ ರೂಪಾಯಿ ಬಹುಮಾನವನ್ನು ನೀಡುವುದಾಗಿ ಸಂತರೊಬ್ಬರು ಘೋಷಿಸಿದ್ದಾರೆ.
ಅಯೋಧ್ಯೆಯ ಪರಮಹಂಸ ಆಚಾರ್ಯ ಉದಯನಿಧಿ ತಲೆ ಕಡಿದು ತಂದವರಿಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಸಾಂಕೇತಿಕವಾಗಿ ಉದಯನಿಧಿ ಶಿರಚ್ಛೇದ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸನಾತನ ಧರ್ಮಕ್ಕೆ ಲಕ್ಷಾಂತರ ವರ್ಷಗಳ ಇತಿಹಾಸವಿದ್ದು, ತನ್ನದೇ ಆದ ಅಸ್ತಿತ್ವವನ್ನು ಹೊಂದಿದೆ. ಭೂಮಿಯ ಮೇಲೆ ಯಾವುದಾದರು ಒಂದು ಧರ್ಮವಿದ್ದರೆ ಅದು ಸನಾತನ ಧರ್ಮ. ಇದಕ್ಕೆ ಯಾವುದೇ ಆದಿ ಹಾಗೂ ಅಂತ್ಯವಿಲ್ಲ. ಸನಾತನ ಧರ್ಮವನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಅವರೇ ನಾಶವಾಗಿ ಬಿಡುತ್ತಾರೆ.
ಸನಾತನ ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಉದಯನಿಧಿ ಹೇಳಿಕೆ ರಾಷ್ಟ್ರದ ಜನರಿಗೆ ನೋವುಂಟು ಮಾಡಿದ್ದು, ಅವರ ತಲೆಯನ್ನು ಕಡಿದು ತಂದವರಿಗೆ 10 ಕೋಟಿ ರೂಪಾಯಿಯನ್ನು ಬಹುಮಾನವನ್ನಾಗಿ ನೀಡಲಾಗುವುದು. ಒಂದು ವೇಳೆ ಯಾರು ಆ ಕೆಲಸ ಮಾಡದಿದ್ದರೆ ನಾನೇ ಅವರ ತಲೆಯನ್ನು ಕಡಿಯುತ್ತೇನೆ.
ಉದಯನಿಧಿ ಅವರಿಗೆ ಧೈರ್ಯವಿದ್ದರೆ ಸನಾತನ ಧರ್ಮದ ಬಗ್ಗ ಮಾತನಾಡಿದ ಹಾಗೆ ಬೇರೆ ಧರ್ಮಗಳ ಬಗ್ಗ ಮಾತನಾಡಲಿ. ಒಂದು ವೇಳೆ ಅವರು ಸನಾತನ ಹೊರತುಪಡಿಸಿ ಬೇರೆ ಸಮುದಾಯದ ಬಗ್ಗೆ ಮಾತನಾಡಿದ್ದರೆ ಇಷ್ಟೊತ್ತಿಗೆ ಅವರ ಕಥೆ ಬೇರೆಯೇ ಆಗಿರುತ್ತಿತ್ತು. ಸನಾತನ ಧರ್ಮ ಪಾಲಿಸುವವರು ಅಹಿಂಸವಾದಿಗಳಾಗಿದ್ದು, ಆಪತ್ತು ಬಂದಾಗ ರಾಕ್ಷಸರ ತಲೆ ಕಡಿಯುವುದಕ್ಕೂ ಸಿದ್ದರಿರುತ್ತೇವೆ. ುದಯನಿಧಿ ಸ್ಟಾಲಿನ್ ಒಬ್ಬ ರಾಕ್ಷಸ ನನ್ನ ಕೈಯಿಂದಲ್ಲೇ ಅವನು ಸಾಯುತ್ತಾನೆ ಎಂದು ಅಯೋಧ್ಯೆಯ ಪರಮಹಂಸ ಆಚಾರ್ಯ ಹೇಳಿದ್ದಾರೆ.