More

    ವಿರಾಟ್​​ ವಿಶ್ವದ ಶ್ರೇಷ್ಠ ಬ್ಯಾಟ್ಸ್​ಮನ್​ ಆಗಿದ್ದೇಗೆ? ಇದೇ ನೋಡಿ ‘ಕಿಂಗ್ ಕೊಹ್ಲಿ’ ಸಾಧನೆ ಗುಟ್ಟು

    ಬೆಂಗಳೂರು: ಕ್ರಿಕೆಟ್ ಲೋಕದಲ್ಲೇ ಐತಿಹಾಸಿಕ ಸಾಧನೆ ಮಾಡಿದವರ ಪೈಕಿ ಟೀಂ ಇಂಡಿಯಾದ ‘ರನ್​ ಮಷಿನ್’ ವಿರಾಟ್ ಕೊಹ್ಲಿ ಪ್ರಮುಖರು. ಇಂದು ಭಾರತೀಯ ಕ್ರಿಕೆಟ್ ತಂಡ ಕಂಡ ಶ್ರೇಷ್ಠ ಬ್ಯಾಟರ್​ ವಿರಾಟ್​, ಕ್ರಿಕೆಟ್ ಇತಿಹಾಸದಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದು, ಈ ಹಿಂದೆ ನಿರ್ಮಿಸಲಾಗಿದ್ದ ದಿಗ್ಗಜರ ರೆಕಾರ್ಡ್​ಗಳನ್ನು ಸರಿಗಟ್ಟಿ, ಮುನ್ನುಗ್ಗುತ್ತಿದ್ದಾರೆ. ಈ ಸಾಧನೆ ಇತರೆ ದೇಶದ ಕ್ರಿಕೆಟಿಗರ ಹುಬ್ಬೇರುವಂತೆ ಮಾಡಿದೆ. ಬಹುಶಃ ಇದೇ ಕಾರಣಕ್ಕೆ ಅಭಿಮಾನಿಗಳು ವಿರಾಟ್​ರನ್ನು ‘ಕಿಂಗ್ ಕೊಹ್ಲಿ’ ಎಂದು ಕರೆಯುತ್ತಾರೆ.

    ಇದನ್ನೂ ಓದಿ: ಬಾಂಗ್ಲಾ ವಿರುದ್ಧ ಅಂತಿಮ ಟಿ20 ಪಂದ್ಯದಲ್ಲೂ ಜಯ: ಹರ್ಮಾನ್‌ಪ್ರೀತ್ ಕೌರ್ ಪಡೆ ಸರಣಿ ಕ್ವೀನ್‌ಸ್ವೀಪ್

    ವಿರಾಟ್​ ಅದ್ಭುತ ಬ್ಯಾಟ್ಸ್​ಮನ್​ ಎನ್ನುವುದಕ್ಕೆ ಪ್ರಸ್ತುತ ನಡೆಯುತ್ತಿರುವ ಐಪಿಎಲ್​ನ 17ನೇ ಆವೃತ್ತಿ ಕೂಡ ಸಾಕ್ಷಿ. ಈ ಲೀಗ್​ನಲ್ಲಿ ಕೊಹ್ಲಿ ಅತ್ಯಧಿಕ ರನ್​ಗಳನ್ನು ಕಲೆಹಾಕುವ ಮೂಲಕ ಟಾಪ್​ ರನ್​ ಸ್ಕೋರರ್ಸ್​ ಪಟ್ಟಿಯಲ್ಲಿ ಮೊದಲಿಗರಾಗಿ ಮಿಂಚುತ್ತಿದ್ದಾರೆ. ನಿನ್ನೆ (ಮೇ.09) ನಡೆದ ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಕೂಡ ಅಬ್ಬರದ ಬ್ಯಾಟಿಂಗ್ ಮಾಡಿ 96 ರನ್​ ಸಿಡಿಸಿದ ರನ್​ ಮಷಿನ್​, ಶತಕದಿಂದ ವಂಚಿತರಾದರು. ಟಿ20, ಏಕದಿನ ಅಥವಾ ಟೆಸ್ಟ್ ಯಾವುದೇ​ ಫಾರ್ಮೆಟ್​​ ಆಗಿರಲಿ, ತಮ್ಮ ಬ್ಯಾಟಿಂಗ್ ವೈಖರಿ ಪ್ರದರ್ಶಿಸುವಲ್ಲಿ ಮಾತ್ರ ವಿರಾಟ್​ ಎಂದಿಗೂ ವಿಫಲರಾಗಿಲ್ಲ. ಇದು ಕೂಡ ಅವರ ದಾಖಲೆಯ ಒಂದು ಸೀಕ್ರೆಟ್​.

    ಅನೇಕ ಸ್ಪೋಟಕ ಬ್ಯಾಟ್ಸ್​ಮನ್​ಗಳ ಪೈಕಿ ವಿರಾಟ್​ ಏಕೆ ವಿಶೇಷ ಹಾಗೂ ವಿಭಿನ್ನ ಎನ್ನುವುದಕ್ಕೆ ಅವರ ಬ್ಯಾಟಿಂಗ್ ವೈಖರಿಯೇ ಸಾಕ್ಷಿ. ಇಲ್ಲಿಯವರೆಗೂ ಕೊಹ್ಲಿ ಆಡಿರುವ ಶೈಲಿಯನ್ನು ಗಮನಿಸಿದರೆ, ಅವರು ಇತರೆ ಬ್ಯಾಟರ್​ಗಳಂತೆ ಹೆಚ್ಚು ಸಿಕ್ಸ್​ ಅಥವಾ ಶಕ್ತಿಮೀರಿ ಬಾರಿಸುವುದಿಲ್ಲ. ಕ್ರಿಕೆಟ್ ಲೋಕದಲ್ಲಿ ನೋಡಲು ಬೇಕಾದ ಟೆಕ್ನಿಕಲ್ ಮತ್ತು ಕ್ರಿಕೆಟಿಂಗ್ ಶಾರ್ಟ್ಸ್​ಗಳನ್ನೇ ವಿರಾಟ್ ಅತೀ​ ಹೆಚ್ಚಾಗಿ ಹಾಗೂ ಅತ್ಯಂತ ಸರಳವಾಗಿ ಆಡ್ತಾರೆ. ಇದು ಗಮನಾರ್ಹ ಸಂಗತಿ.

    ಇದನ್ನೂ ಓದಿ: ನಾವು ಪದೇ ಪದೇ ತಪ್ಪುಗಳನ್ನು ಮಾಡುತ್ತಿದ್ದೇವೆ; ಗೆಲುವಿನ ಬಳಿಕ ನಾಯಕ ಫಾಫ್​ ಡು ಪ್ಲೆಸಿಸ್​ ಹೀಗಂದಿದ್ಯಾಕೆ

    ಅತ್ಯಾಕರ್ಷಕವಾಗಿ ಮೈದಾನದಲ್ಲಿ ಕ್ರಿಕೆಟ್​ ಸ್ಕಿಲ್ಸ್​ಗಳನ್ನು ಪ್ರದರ್ಶಿಸುವ ವಿರಾಟ್​, ಎದುರಾಳಿಗಳ ಬೆವರಿಳಿಸುವಲ್ಲಿ ಮೊದಲಿಗರು. ಯಾವ ತಂಡದ ಎದುರೇ ಇರಲಿ, ಯಾವ ಫಾರ್ಮೆಟ್​ ಇರಲಿ, ರನ್​ಗಳ ಸುರಿಮಳೆ ಹರಿಸುವಲ್ಲಿ ಕೊಹ್ಲಿ ಹೆಚ್ಚು ವಿಫಲರಾಗಿಲ್ಲ. ಆ ಪಂದ್ಯಗಳಲ್ಲಿ ಒಂದು ಅರ್ಧ ಶತಕ ಗಳಿಸಿರುತ್ತಾರೆ ಅಥವಾ ಶತಕ ವಂಚಿತರಾಗಿರುತ್ತಾರೆ. ಬಹುಶಃ ಇದೇ ಕಾರಣಕ್ಕೆ ಕ್ರಿಕೆಟ್ ಅಭಿಮಾನಿಗಳು ಅವರನ್ನು ರನ್​ ಮಷಿನ್​ ಎಂದು ಕರೆದು, ತಮ್ಮ ಪ್ರೀತಿ, ಅಭಿಮಾನವನ್ನು ಮೆರೆಯುತ್ತಾರೆ.

    ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ರನ್​ ಸಿಡಿಸುವ ಮೂಲಕ ಹಿಂದಿನ ದಾಖಲೆಗಳನ್ನು ಹಿಂದಿಕ್ಕಿ, ತನ್ನದೇ ಹೊಸ ರೆಕಾರ್ಡ್​​ಗಳನ್ನು ಸೆಟ್​​ ಮಾಡುತ್ತಿರುವ ಕೊಹ್ಲಿ ಆಟಕ್ಕೆ ಫಿಧಾ ಆಗಿರುವ ಫ್ಯಾನ್ಸ್​, ವಿರಾಟ್​ರನ್ನು ಕಿಂಗ್ ಕೊಹ್ಲಿ ಎಂದು ಹೆಮ್ಮೆಯಿಂದ ಮೆರೆಸುತ್ತಿದ್ದಾರೆ. ವಿರಾಟ್​ ದಾಖಲೆಗಳು ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗಿದೆ. ಇನ್ನು ಇತ್ತೀಚೆಗಷ್ಟೆ ತಮ್ಮ ಗೆಳೆಯನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್, “ವಿರಾಟ್ ಈ ಜನರೇಷನ್​ನ ಅತ್ಯುತ್ತಮ ಬ್ಯಾಟ್ಸ್​ಮನ್​ ಹಾಗೂ ವಿಶ್ವಕಪ್ ಪದಕ ಗೆಲ್ಲಲು ಎಲ್ಲರಿಗಿಂತ ಹೆಚ್ಚು ಅರ್ಹ” ಎಂದು ಶ್ಲಾಘಿಸಿದ್ದಾರೆ.

    ಧೋನಿ ಸಹ ಪಾಠ ಕಲಿಸಲು ಸಾಧ್ಯವಿಲ್ಲ… ಶಾಕಿಂಗ್ ಹೇಳಿಕೆ ನೀಡಿದ ಹಾರ್ದಿಕ್ ಪಾಂಡ್ಯ!

    ನಿಮಗೆ ಏನೂ ಗೊತ್ತಿಲ್ಲ… RCB ಪ್ಲೇಆಫ್ ಕನಸು ಇನ್ನೂ ಜೀವಂತ: ವಿಲ್​ ಜ್ಯಾಕ್ಸ್​ ಬಿಚ್ಚಿಟ್ರು ಶಾಕಿಂಗ್ ಸಂಗತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts