

Champions Tropy:ಪಾಕಿಸ್ತಾನದಲ್ಲಿ ನಡೆಯುತ್ತಿರುವ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಇದೇ ಫೆ.19ರಂದು ಆರಂಭವಾದ ಉದ್ಘಾಟನಾ ಪಂದ್ಯಕ್ಕೆ ಸಿದ್ಧವಾಗಿದ್ದ ಕರಾಚಿ ರಾಷ್ಟ್ರೀಯ ಕ್ರಿಡಾಂಗಣದ ಅವ್ಯವ್ಯಸ್ಥೆಯ ಬಗ್ಗೆ ಅಲ್ಲಿನ ನಟರೊಬ್ಬರು ಕಿಡಿಕಾರಿದ್ದಾರೆ.
ಹೌದು, ಪಾಕಿಸ್ತಾನ-ನ್ಯೂಜಿಲ್ಯಾಂಡ್ ಮೊದಲ ಪಂದ್ಯದಕ್ಕೆ ಕಡಿಮೆ ಪ್ರೇಕ್ಷಕರ ಹಾಜರಾತಿ ಬಗ್ಗೆ ನಡೆಯುತ್ತಿರುವ ಟೀಕೆಗಳ ಮಧ್ಯೆ ಪಾಕಿಸ್ತಾನದ ಸಿನಿಮಾ ನಟ, ಚಿತ್ರ ನಿರ್ಮಾಪಕ ಅದ್ನಾನ್ ಸಿದ್ದಿಕಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಕ್ರೀಡಾಂಗಣದ ಅವ್ಯವಸ್ಥೆಯ ಬಗ್ಗೆ ಬೇಸರ ಹೊರ ಹಾಕಿದ್ದಾರೆ.
''ಕ್ರೀಡಾಂಗದ ವಿಐಪಿ ಪ್ರದೇಶದಿಂದ ಮೈದಾನದ ನೋಟವು ದೂರವಾಗಿದೆ ಅಲ್ಲದೆ, ಕ್ರೀಡೆಯನ್ನು ನೋಡಲು ಕೆಲ ವಸ್ತುಗಳು ಆಡಚರಣೆಯಾಗಿದೆ ಎಂದು ದೂರಿದ್ದಾರೆ.'' ವೀಡಿಯೊದಲ್ಲಿ, ನಟನು ರೇಲಿಂಗ್‌ಗಳಿಂದ(ಪೆವಿಲಿಯನ್ ನಿರ್ಮಾಣದ ಕಂಬಗಳು) ನೋಟವನ್ನು ನಿರ್ಬಂಧಿಸಲಾಗಿದೆ ಎಂದು ಹೇಳುತ್ತಿರುವ ಕಾಣುತ್ತದೆ. ಅಲ್ಲದೆ, ತನ್ನ ಆಸನ ಮತ್ತು ಪಿಚ್ ನಡುವಿನ ಅಂತರವನ್ನು ಪರಿಗಣಿಸಿದರೆ, ತಾನು ದುಬೈನಿಂದ ಆಟವನ್ನು ವೀಕ್ಷಿಸುತ್ತಿದ್ದೇನೆ ಎಂದು ಭಾವಿಸಿದೆ ಎಂದು ಬೇಸರ ವ್ಯಕ್ತಪಡಿಸುವುದರ ಜತೆ ಅಲ್ಲಿನ ಅವ್ಯವಸ್ಥೆಯ ಬಗ್ಗೆ ಕಿಡಿಕಾರಿದ್ದಾರೆ.
ಬುಧವಾರ(ಫೆ.19) ನಡೆದ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ನ ಟಾಮ್ ಲ್ಯಾಥಮ್ ಮತ್ತು ವಿಲ್ ಯಂಗ್ ಅವರ ಅದ್ಭುತ ಶತಕಗಳ ನೆರವಿನಿಂದ ನ್ಯೂಜಿಲೆಂಡ್ ತಂಡ ಪಾಕಿಸ್ತಾನವನ್ನು 60 ರನ್‌ಗಳಿಂದ ಸೋಲಿಸಿತು.(ಏಜೆನ್ಸೀಸ್)