ಓಖಾದ ಕಡಲ ಗಡಿರೇಖೆ ಬಳಿ ಭಾರತದ ಎರಡು ಬೋಟ್​ಗಳ ಮೇಲೆ ಗುಂಡಿನ ದಾಳಿ ನಡೆಸಿದ ಪಾಕ್​ ನೌಕಾಪಡೆ ಸೈನಿಕರು

Fishrman
Published on

ಓಖಾ: ಗುಜರಾತ್​ನ ಓಖಾ ಕರಾವಳಿ ತೀರದ ಬಳಿ ಪಾಕಿಸ್ತಾನ ನೌಕಾಪಡೆ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಮೀನುಗಾರನೋರ್ವ ಗಾಯಗೊಂಡಿದ್ದಾನೆ.

ಅರೇಬಿಯನ್ ಸಮುದ್ರದ ಅಂತಾರಾಷ್ಟ್ರೀಯ ಕಡಲ ಗಡಿರೇಖೆ ಬಳಿ ಪಾಕ್​ ನೌಕಾ ಸಿಬ್ಬಂದಿ ಭಾರತದ ಎರಡು ಬೋಟ್​​ಗಳ ಮೇಲೆ ಭಾನುವಾರ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ದ್ವಾರಕಾ ಜಿಲ್ಲೆಯ ದೇವ್​ಭೂಮಿಯಲ್ಲಿರುವ ಓಖಾ ಮೀನುಗಾರಿಕೆ ಪಟ್ಟಣದಿಂದ ಹೊರಟ ಎರಡು ಭಾರತೀಯ ಮೀನುಗಾರರ ದೋಣಿಗಳು ಪಾಕ್​ಗೆ ಹೊಂದಿಕೊಂಡಿದ್ದ ಅಂತಾರಾಷ್ಟ್ರೀಯ ಕಡಲ ಗಡಿರೇಖೆಯನ್ನು ದಾಟಿದ್ದವು.

ಹಾಗಾಗಿ ಪಾಕಿಸ್ತಾನ ಗುಂಡಿನ ದಾಳಿ ನಡೆಸಿದೆ. ಇದರಲ್ಲಿ ಓರ್ವ ಮೀನುಗಾರ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಈ ಗುಂಡಿನ ದಾಳಿಯ ಬಳಿಕ ದೋಣಿಯಲ್ಲಿದ್ದ ಮೀನುಗಾರರು ಭಾರತೀಯ ಕೋಸ್ಟ್​ಗಾರ್ಡ್​ಗಳಿಗೆ ಕರೆ ಮಾಡಿ ತಾವು ಸಂಕಷ್ಟದಲ್ಲಿ ಸಿಲುಕಿದ್ದಾಗಿ ತಿಳಿಸಿದರು. ಭಾರತೀಯ ಕಡಲು ರಕ್ಷಣಾ ಪಡೆ ಸಿಬ್ಬಂದಿ ಕೂಡಲೇ ಪಾಕ್​ ಕೋಸ್ಟ್​ ಗಾರ್ಡ್​ಗಳಿಗೆ ಮಾಹಿತಿ ನೀಡಿದರು. ನಂತರ ಇಲ್ಲಿನ ಕೋಸ್ಟ್​ಗಾರ್ಡ್​ಗಳು ಹೋಗಿ ಮೀನುಗಾರರನ್ನು, ಅವರು ತೆಗೆದುಕೊಂಡು ಹೋಗಿದ್ದ ದೋಣಿಗಳನ್ನು ವಾಪಸ್​ ತಂದಿದ್ದಾರೆ.

ಲಾಕ್​ಡೌನ್​ ಇದ್ದರೂ ಮೀನುಗಾರಿಕೆಗೆ ಗುಜರಾತ್​ ಸರ್ಕಾರ ಶನಿವಾರ ಅನುಮತಿ ನೀಡಿತ್ತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net