ಆಪರೇಷನ್ ಸಿಂಧೂರನಲ್ಲಿ ಹುತಾತ್ಮರಾದ 11 ಸೈನಿಕರ ಹೆಸರುಗಳನ್ನು ಬಿಡುಗಡೆ ಮಾಡಿದ ಪಾಕ್​​ | Operation Sindoor

Operation Sindoor
Published on

Operation Sindoor: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಉಗ್ರ ಪ್ರತೀಕಾರವಾಗಿ, ಭಾರತವು ಆಪರೇಷನ್ ಸಿಂಧೂರ ಪ್ರಾರಂಭಿಸಿ ಪಾಕಿಸ್ತಾನದ 9 ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿದೆ. ಭಾರತೀಯ ಸೇನೆಯ ಪ್ರಮುಖ ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಮಾಡಿಸಿದೆ, ಜೊತೆಗೆ ಇದರಲ್ಲಿ ಪಾಕಿಸ್ತಾನಿ ಸೈನಿಕರು ಕೂಡ ಹತ್ಯೆಯಾಗಿದ್ದಾರೆ. ಆರಂಭದಲ್ಲಿ ಮೌನವಾಗಿದ್ದ ಪಾಕಿಸ್ತಾನಿ ಸೇನೆಯು, ಈಗ ತನ್ನ ಸೈನಿಕರು ಭಾರತೀಯ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಒಪ್ಪಿಕೊಂಡಿದೆ. ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ದಾಳಿಯ ಪರಿಣಾಮವಾಗಿ ಸಾವನ್ನಪ್ಪಿದ 11 ಸೈನಿಕರ ಹೆಸರುಗಳನ್ನು ಸಹ ಬಿಡುಗಡೆ ಮಾಡಿ,  78 ಸೈನಿಕರು ಗಾಯಗೊಂಡಿದ್ದಾರೆ ಎಂದು ಹೇಳಿಕೊಂಡಿದೆ.

ದಾಳಿಯಲ್ಲಿ ಮೃತಪಟ್ಟ ಪಾಕಿಸ್ತಾನಿ ಸೈನಿಕರ ಹೆಸರುಗಳು:

1. ನಾಯಕ್ ಅಬ್ದುಲ್ ರೆಹಮಾನ್ (ಪಾಕಿಸ್ತಾನ ಸೇನೆ)

2. ಲ್ಯಾನ್ಸ್ ನಾಯಕ್ ದಿಲಾವರ್ ಖಾನ್ (ಪಾಕಿಸ್ತಾನ ಸೇನೆ)

3. ಲ್ಯಾನ್ಸ್ ನಾಯಕ್ ಇಕ್ರಮುಲ್ಲಾ (ಪಾಕಿಸ್ತಾನ ಸೇನೆ)

4. ನಾಯಕ್ ವಕಾರ್ ಖಾಲಿದ್ (ಪಾಕಿಸ್ತಾನ ಸೇನೆ)

5. ಸಿಪಾಯಿ ಮುಹಮ್ಮದ್ ಅದೀಲ್ ಅಕ್ಬರ್ (ಪಾಕಿಸ್ತಾನ ಸೇನೆ)

6. ಸಿಪಾಯಿ ನಿಸಾರ್ (ಪಾಕಿಸ್ತಾನ ಸೇನೆ)

7. ಸ್ಕ್ವಾಡ್ರನ್ ಲೀಡರ್ ಉಸ್ಮಾನ್ ಯೂಸುಫ್ (ಪಾಕಿಸ್ತಾನ ವಾಯುಪಡೆ)

8. ಮುಖ್ಯ ತಂತ್ರಜ್ಞ ಔರಂಗಜೇಬ್ (ಪಾಕಿಸ್ತಾನ ವಾಯುಪಡೆ)

9. ಹಿರಿಯ ತಂತ್ರಜ್ಞ ನಜೀಬ್ (ಪಾಕಿಸ್ತಾನ ವಾಯುಪಡೆ)

10. ಕಾರ್ಪೋರಲ್ ತಂತ್ರಜ್ಞ ಫಾರೂಕ್ (ಪಾಕಿಸ್ತಾನ ವಾಯುಪಡೆ)

11. ಹಿರಿಯ ತಂತ್ರಜ್ಞ ಮುಬಾಶಿರ್ (ಪಾಕಿಸ್ತಾನ ವಾಯುಪಡೆ)

ಮೇ 11 ರಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಭಾರತದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕ, ಭಾರತೀಯ ಸೇನೆಯ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರು, ಆಪರೇಷನ್ ಸಿಂಧೂರ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಿಒಜೆಕೆಯಲ್ಲಿನ ಒಂಬತ್ತು ಭಯೋತ್ಪಾದಕ ಕೇಂದ್ರಗಳ ಮೇಲೆ ನಡೆಸಿದ ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಬಲವಾದ ಪ್ರತೀಕಾರವಾಗಿ ಭಾರತ ಮೇ 7 ರಂದು ಆಪರೇಷನ್ ಸಿಂಧೂರ ಅನ್ನು ಪ್ರಾರಂಭಿಸಿದ ಭಾರತೀಯ ಸೇನೆ, ಪಾಕಿಸ್ತಾನದೊಳಗಿನ ಅನೇಕ ಭಯೋತ್ಪಾದಕ ನೆಲೆಗಳನ್ನು ನಾಶ ಮಾಡಿತು. ಇದಕ್ಕೆ ಪಾಕಿಸ್ತಾನವು ಮೇ 8, 9 ಮತ್ತು 10 ರಂದು ಪ್ರತಿದಾಳಿ ನಡೆಸಲು ಪ್ರಯತ್ನಿಸಿತು - ಆದರೆ ಭಾರತೀಯ ಸಶಸ್ತ್ರ ಪಡೆಗಳಿಂದ ಉಗ್ರರ ದಾಳಿಯನ್ನು ವಿಫಲಗೊಳಿಸಿತು. ನಂತರ ಡ್ರೋನ್ ಮತ್ತು ಕ್ಷಿಪಣಿ ಗುಂಡಿನ ದಾಳಿಯೂ ಪಾಕಿಸ್ತಾನದ ಮಿಲಿಟರಿ ಮೂಲಸೌಕರ್ಯಕ್ಕೆ ಹಾನಿಯನ್ನುಂಟುಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net