ಅಮೆರಿಕ ಅಧ್ಯಕ್ಷನನ್ನು ನೊಬೆಲ್​​ಗೆ ನಾಮನಿರ್ದೇಶನ ಮಾಡಿದ ಪಾಕ್​; ನನಗೆ ನೊಬೆಲ್​ ಕೊಡಲ್ಲ ಎಂದ ಟ್ರಂಪ್​ | Nobel

dk - 2025-06-21T134745.777
Published on

ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ನೊಬೆಲ್ ಪ್ರಶಸ್ತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಪಾಕಿಸ್ತಾನ ಕಳುಹಿಸಿದೆ. ಈ ವಿಚಾರಕ್ಕೆ ಮಾತನಾಡಿರುವ ಟ್ರಂಪ್​, ''ನಾನು ಏನೇ ಮಾಡಿದರೂ ನನಗೆ ನೊಬೆಲ್ ಸಿಗುವುದಿಲ್ಲ, ಏಕೆಂದರೆ ಅದು ಉದಾರವಾದಿಗಳಿಗೆ ಮಾತ್ರ ನೀಡಲಾಗುತ್ತದೆ'' ಎಂದು ತಮ್ಮ ನೋವುನ್ನು ಹೇಳಿಕೊಂಡಿದ್ದಾರೆ.

ಪಾಕ್​​ ಹೇಳಿದ್ದೇನು..?

ಇತ್ತೀಚಿನ ಭಾರತ-ಪಾಕ್ ಉದ್ವಿಗ್ನತೆಯ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ 'ನಿರ್ಣಾಯಕ ರಾಜತಾಂತ್ರಿಕ ಹಸ್ತಕ್ಷೇಪ' ಮಾಡಿದ ಕಾರಣ ಅವರ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಕಳುಹಿಸಿರುವುದಾಗಿ ಪಾಕಿಸ್ತಾನ ಸರ್ಕಾರ ತನ್ನ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಘೋಷಿಸಿದೆ.

ಟ್ರಂಪ್​​ ಹೇಳಿದ್ದೇನು..?

'ಕಾಂಗೋ-ರುವಾಂಡಾ, ಭಾರತ-ಪಾಕಿಸ್ತಾನ, ಸೆರ್ಬಿಯಾ-ಕೊಸೊವೊ, ಈಜಿಪ್ಟ್-ಇಥಿಯೋಪಿಯಾ, ಮಧ್ಯಪ್ರಾಚ್ಯದ ಅಬ್ರಹಾಂ ಒಪ್ಪಂದ... ನಾನು ಏನೇ ಮಾಡಿದರೂ ನನಗೆ ನೊಬೆಲ್ ಸಿಗುವುದಿಲ್ಲ' ಎಂದು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್​​ನಲ್ಲಿ ಬರೆದಿದ್ದಾರೆ.

ನೊಬೆಲ್​ ಹಿನ್ನೆಲೆ

ನೊಬೆಲ್ ಶಾಂತಿ ಪ್ರಶಸ್ತಿಯು ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ. ವಿಶ್ವ ಶಾಂತಿಗೆ ಅಸಾಧಾರಣ ಕೊಡುಗೆ ನೀಡುವ ಜನರು ಅಥವಾ ಸಂಸ್ಥೆಗಳಿಗೆ ಇದನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಸ್ವೀಡಿಷ್ ವಿಜ್ಞಾನಿ ಮತ್ತು ಡೈನಮೈಟ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಪ್ರಾರಂಭಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net