

ಕರಾಚಿ: ಕಾಡಿನಲ್ಲಿರುವ ಪ್ರಾಣಿಗಳು ಕೂಡ ಪ್ರಾಣಿಗಳ ರಾಜನನ್ನು ನೋಡಲು ಹರಸಾಹಸ ಪಡುತ್ತವೆ. ಆದರೆ ಈ ಊರಿನಲ್ಲಿ ಕಾಡಿನ ರಾಜನಾಗಿರುವ ಸಿಂಹ ಹಗಲು ಹೊತ್ತಿನಲ್ಲಿ ನಗರದ ಜನನಿಬಿಡ ರಸ್ತೆಗಳಲ್ಲಿ ರಾಜಗಾಂಭೀರ್ಯದಿಂದ ವಾಹನಗಳ ಮಧ್ಯೆ ಅತ್ತಿಂದಿತ್ತ ಓಡಾಡುವ ದೃಶ್ಯ ಸಂಜೆ ಪಾಕಿಸ್ತಾನದ ಕರಾಚಿಯಲ್ಲಿ ಈ ಕಂಡು ಬಂದಿದೆ.
ಪಾಕಿಸ್ತಾನದ ಕರಾಚಿಯ ಶರಿಯಾ ಫೈಸಲ್ ನಗರದ ಜನನಿಬಿಡ ರಸ್ತೆಗಳಲ್ಲಿ ಮಂಗಳವಾರ ಸಂಜೆ ಸಿಂಹವೊಂದು ಅನಿರೀಕ್ಷಿತವಾಗಿ ಕಾಣಿಸಿಕೊಂಡಿದೆ. ಸಿಂಹವೊಂದು ರಸ್ತೆಯ ಪಕ್ಕದ ಕಾಲುದಾರಿಯಲ್ಲಿ ಅಡ್ಡಾಡುತ್ತಿತ್ತು. ಕೆಲವು ದಾರಿಹೋಕರು ಸಿಂಹವನ್ನು ಗಮನಿಸದೆ ಅದರ ಪಕ್ಕದಲ್ಲಿ ನಡೆಯುತ್ತಿದ್ದರು. ಸ್ವಲ್ಪ ಸಮಯದ ನಂತರ ಕೆಲವರು ಗಮನಿಸಿ ಸಿಂಹವನ್ನು ನೋಡಲು ಗುಂಪುಗಳಲ್ಲಿ ಜಮಾಯಿಸಿದರು.
ಮಾಹಿತಿ ಪಡೆದ ಪೊಲೀಸರು ಸಿಂಹವನ್ನು ಸೆರೆಹಿಡಿಯಲು ಸ್ಥಳಕ್ಕೆ ಧಾವಿಸಿದರು. ಸಿಂಹವನ್ನು ವಾಹನದಲ್ಲಿ ಸಾಗಿಸುವಾಗ ಆಕಸ್ಮಿಕವಾಗಿ ರಸ್ತೆಗೆ ಪ್ರವೇಶಿಸಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಒಂದು ಗಂಟೆ ಕಾಲ ಶ್ರಮವಹಿಸಿ ಸಿಂಹವನ್ನು ರಕ್ಷಿಸಲಾಯಿತು. ಅದನ್ನು ಸಾಗಿಸುತ್ತಿದ್ದ ವಾಹನದ ಚಾಲಕನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.