ಜಗತ್ತಿಗೆ ಪಾಕ್ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ: ವಿಶ್ವಸಂಸ್ಥೆಯಲ್ಲಿ ನೆರೆಯ ರಾಷ್ಟ್ರದ ವಿರುದ್ಧ ಭಾರತ ವಾಗ್ದಾಳಿ | Pakistan

Kshitij Tyagi
Published on

Pakistan: ಪಾಕ್​ ಪಿಒಕೆಯ ಖೈಬರ್ ಪಖ್ತುಂಖ್ವಾದಲ್ಲಿ ತನ್ನದೇ ಜನರ ಮೇಲೆ ಬಾಂಬ್ ದಾಳಿ ಮಾಡಿದ್ದಕ್ಕಾಗಿ ಭಾರತ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (UNHRC) ಪಾಕಿಸ್ತಾನವನ್ನು ಮಂಗಳವಾರ (ಸೆಪ್ಟೆಂಬರ್,23) ತರಾಟೆಗೆ ತೆಗೆದುಕೊಂಡಿದೆ.

ಯುಎನ್​​​ ಮಾನವ ಹಕ್ಕುಗಳ ಮಂಡಳಿಯ 60 ನೇ ಅಧಿವೇಶನದಲ್ಲಿ ಮಾತನಾಡಿದ ಭಾರತೀಯ ರಾಜತಾಂತ್ರಿಕ ಕ್ಷಿತಿಜ್ ತ್ಯಾಗಿ, ಪಾಕ್ ತನ್ನ ಜನರ ಜೀವನವನ್ನುಯ ಸದೃಢಗೊಳಿಸಬೇಕು. ಅಲ್ಲದೆ, ಕಿರುಕುಳದಿಂದ ಕಲೆ ಹಾಕಿದ ಮಾನವ ಹಕ್ಕುಗಳ ದಾಖಲೆಯನ್ನು ಹೊಂದಿರುವ ತನ್ನದೇ ಆದ ಆರ್ಥಿಕತೆಯನ್ನು ರಕ್ಷಿಸುವತ್ತ ಗಮನಹರಿಸಬೇಕು ಎಂದು ಪಾಕ್​ ವಿರುದ್ಧ ಕಿಡಿಕಾರಿದ್ದಾರೆ.

ಪಾಕ್​​ ನಿಯೋಗವು ಭಾರತದ ವಿರುದ್ಧ ಆಧಾರರಹಿತ ಮತ್ತು ಪ್ರಚೋದನಕಾರಿ ಹೇಳಿಕೆಗಳೊಂದಿಗೆ ಈ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಲೇ ಇದೆ ಎಂದು ತ್ಯಾಗಿ ತಿಳಿಸಿದ್ದಾರೆ.

ಪಾಕ್​​ ನಮ್ಮ ಪ್ರದೇಶವನ್ನು ಅಪೇಕ್ಷಿಸುವ ಬದಲು,ತಮ್ಮ ಅಕ್ರಮ ಆಕ್ರಮಣದಲ್ಲಿರುವ ಭಾರತೀಯ ಪ್ರದೇಶವನ್ನು ಖಾಲಿ ಮಾಡಿ, ಜನರ ಜೀವ ಜತೆಗೆ ಆರ್ಥಿಕತೆಯನ್ನು, ಮಿಲಿಟರಿ ಪ್ರಾಬಲ್ಯದಿಂದ ಮುಚ್ಚಿಹೋಗಿರುವ ಕಿರುಕುಳದಿಂದ ಕಲೆ ಹಾಕಿದ ಮಾನವ ಹಕ್ಕುಗಳ ದಾಖಲೆಯನ್ನು ರಕ್ಷಿಸುವತ್ತ ಪಾಕ್​​ ಗಮನಹರಿಸುವುದು ಒಳ್ಳೆಯದು.

ಬಹುಶಃ ಪಾಕ್ ಭಯೋತ್ಪಾದನೆಯನ್ನು ರಫ್ತು ಮಾಡುವುದರಿಂದ, ವಿಶ್ವಸಂಸ್ಥೆ ನಿಷೇಧಿಸಿದ ಭಯೋತ್ಪಾದಕರಿಗೆ ಆಶ್ರಯ ನೀಡುವುದರಿಂದ, ತಮ್ಮದೇ ಆದ ಜನರ ಮೇಲೆ ಬಾಂಬ್ ದಾಳಿ ಮಾಡುವುದರಿಂದ ಸಮಯವನ್ನು ಕಂಡುಕೊಂಡ ನಂತರ ಯುಎನ್​ನಲ್ಲಿ ಮಾತನಾಡಬಹುದು ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪಿಒಕೆಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ತಿರಾ ಕಣಿವೆಯ ಮಾಟ್ರೆ ದಾರಾ ಗ್ರಾಮದಲ್ಲಿ ಪಾಕಿಸ್ತಾನಿ ವಾಯುಪಡೆಯು ತನ್ನದೇ ಜನರ ಮೇಲೆ ಬಾಂಬ್ ದಾಳಿ ಮಾಡಿದ ನಂತರ ಭಾರತ ಖಂಡಿಸಿದೆ. ಈ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ನಾಗರಿಕರು ಸಾವನ್ನಪ್ಪಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net