ಪಾಕಿಸ್ತಾನ 'ವಿಫಲ ರಾಷ್ಟ್ರ'; ಭಯೋತ್ಪಾದನೆಯ ವಿಷವನ್ನು ತುಂಬುತ್ತಿದೆ; ಅಸಾದುದ್ದೀನ್ ಓವೈಸಿ| Oyc

OYC
Published on

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರು ಸಾವನ್ನಪ್ಪಿದ ಭಯೋತ್ಪಾದಕ ದಾಳಿಯ ಬಗ್ಗೆ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಪಾಕಿಸ್ತಾನದ ಮೇಲೆ ಹೊಸ ದಾಳಿ ನಡೆಸಿದ್ದಾರೆ.

ಪಾಕಿಸ್ತಾನ "ವಿಫಲ ರಾಷ್ಟ್ರ" ಎಂದು ಕರೆದ ಓವೈಸಿ, ಭಯೋತ್ಪಾದನೆಯ ವಿಷವನ್ನು ತುಂಬುತ್ತಿದೆ ಎಂದು ಆರೋಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ನಂತರ ಕೋಮು ಉದ್ವಿಗ್ನತೆಯನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿರುವವರನ್ನು ಅವರು ಟೀಕಿಸಿದ್ದಾರೆ. ಪಾಕಿಸ್ತಾನದಲ್ಲಿ ಅಸಂಬದ್ಧವಾಗಿ ಮಾತನಾಡುವವರಿಗೆ ಇಸ್ಲಾಂ ಅರ್ಥ ವಾಗುವುದಿಲ್ಲ, ಈ ಭಯೋತ್ಪಾದನೆಯ ವಿಷವನ್ನು ಕೊನೆಗೊಳಿಸಲು ನಾವು ಅವರಿಗೆ ಸೂಕ್ತ ಪ್ರತಿಕ್ರಿಯೆ ನೀಡುವ ಸಮಯ ಎಂದು ಹೇಳಿದ್ದಾರೆ.

ಏಪ್ರಿಲ್ 22 ರಂದು ನಡೆದ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಯಾವುದೇ ಕೋಮು ಗಲಬೆ ಖಂಡಿಸಿದ ಅವರು, "ಈ ಸಮಯದಲ್ಲಿ ಹಿಂದೂಗಳು ಮತ್ತು ಮುಸ್ಲಿಮರನ್ನು ವಿಭಜಿಸಲು ಪ್ರಯತ್ನಿಸುತ್ತಿರುವವರು ಭಾರತವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ, ಅಂತಹ ಭಯೋತ್ಪಾದಕ ದಾಳಿಯ ನಂತರ ನೀವು ಹಿಂದೂ-ಮುಸ್ಲಿಂ ಮಾಡಿದರೆ, ಪಾಕಿಸ್ತಾನದಲ್ಲಿರುವ ಐಎಸ್‌ಐ ಮತ್ತು ಭಯೋತ್ಪಾದಕರು ಸಂತೋಷಪಡುತ್ತಾರೆ ಎಂಬುದನ್ನು ನೀವು ನೆನಪಿನಲ್ಲಿಡಬೇಕು ಎಂದಿದ್ದಾರೆ.

(ಏಜೆನ್ಸೀಸ್)

ಸರ್ವಪಕ್ಷ ಸಭೆಯಲ್ಲಿ, ಪ್ರತಿಪಕ್ಷಗಳು ಸರ್ಕಾರವನ್ನು ಕ್ರಮ ಕೈಗೊಳ್ಳುವಂತೆ ಪಹಲ್ಗಾಮ್ ದಾಳಿಯ ಬಲಿಪಶುಗಳ ಕುಟುಂಬಗಳಿಗೆ ನ್ಯಾಯ ನೀಡುವಂತೆ ಮತ್ತು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವಂತೆ ಕೇಳಿಕೊಂಡಿದ್ದಾರೆ. ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡರೂ ನಾವು ಅವರೊಂದಿಗೆ ಇದ್ದೇವೆ, ಆದರೆ ಅವರು ಯಾವಾಗ ಏನು ಮಾಡುತ್ತಾರೆ ಎಂಬುದನ್ನು ಹೇಳಬೇಕಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net