ಚೆಂಡಿನಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಫೀಲ್ಡರ್ಸ್, ಟ್ರೋಲ್​ ಮಾಡಿದ ರಮೀಜ್​ ರಾಜಾ..!

england fielder for web
Published on

ಸೌಥಾಂಪ್ಟನ್​: ಇಂಗ್ಲೆಂಡ್​ ಬೌಲರ್​ಗಳು ಸೌಥಾಂಪ್ಟನ್​ನಲ್ಲಿ ಗುರುವಾರ ಆರಂಭಗೊಂಡ 2ನೇ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನ ತಂಡಕ್ಕೆ ಆರಂಭ ಆಘಾತ ನೀಡಿದ್ದರೂ ಫೀಲ್ಡರ್​ಗಳು ಮಾತ್ರ ಟ್ರೋಲ್​ಗೆ ಒಳಗಾಗಿದ್ದಾರೆ. ದ ರೋಸ್​ ಬೌಲ್​ ಸ್ಟೇಡಿಯಂನಲ್ಲಿ ಆರಂಭಗೊಂಡ ಪಂದ್ಯದಲ್ಲಿ ಇನಿಂಗ್ಸ್​ನ 3ನೇ ಓವರ್​ನಲ್ಲೇ ಜೇಮ್ಸ್​ ಆಂಡರ್​ಸನ್​ ಪಾಕ್​ನ ಶಾನ್​ ಮಸೂದ್​ ವಿಕೆಟ್​ ಕಬಳಿಸಿ ಆಘಾತ ನೀಡಿದರು. ಮಸೂದ್​ ನಿರ್ಗಮನದ ಬೆನ್ನಲ್ಲೇ ಅಬಿದ್​ ಎರಡು ಬಾರಿ ಜೀವದಾನ ಪಡೆದರು. ಇದು ಇಂಗ್ಲೆಂಡ್​ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿತ್ತು. ಜತೆಗೆ ವೀಕ್ಷಕ ವಿವರಣೆ ನೀಡುತ್ತಿದ್ದ ಪಾಕಿಸ್ತಾನದ ಮಾಜಿ ನಾಯಕ ರಮೀಜ್ ರಾಜಾ, ಇಂಗ್ಲೆಂಡ್ ಫೀಲ್ಡರ್ ಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ಟ್ವೀಟ್​ ಮಾಡುವ ಮೂಲಕ ಟ್ರೋಲ್​ ಮಾಡಿದ್ದಾರೆ.

ಇಂಗ್ಲೆಂಡ್​ ಬೌಲರ್​ಗಳು ಮಾರಕ ದಾಳಿ ಮೂಲಕ ಗಮನಸೆಳೆದರೂ ಫೀಲ್ಡಿರ್​ಗಳು ಮಾತ್ರ ಕೆಟ್ಟ ಫೀಲ್ಡಿಂಗ್​ ಮೂಲಕ ಟ್ರೋಲ್​ ಆದರು. ಶಾನ್​ ಮಸೂದ್​ ನಿರ್ಗಮನದ ಬೆನ್ನಲ್ಲೇ ಇನಿಂಗ್ಸ್​ನ 4ನೇ ಓವರ್​ನಲ್ಲಿ ಸ್ಟುವರ್ಟ್ ಬ್ರಾಡ್​ ಎಸೆತದಲ್ಲಿ ನೀಡಿದ ಕ್ಯಾಚ್​ ಅನ್ನು ಸ್ಲಿಪ್​ನಲ್ಲಿ ಡೊಮಿನಿಕ್​ ಸಿಬ್ಲೆ ಕ್ಯಾಚ್​ ಕೈಚೆಲ್ಲಿದರು. ಬಳಿಕ ಕ್ರಿಸ್​ ವೋಕ್ಸ್​ 14ನೇ ಓವರ್​ನಲ್ಲಿ ರೋರಿ ಬರ್ನ್ಸ್​ 2ನೇ ಬಾರಿಗೆ ಅಬಿದ್​ಗೆ ಜೀವದಾನ ನೀಡಿದರು. ಸುಲಭ ಕ್ಯಾಚ್​ಗಳನ್ನು ಬಿಡುವ ಮೂಲಕ ಇಂಗ್ಲೆಂಡ್​ ಬೌಲರ್​ಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ರಾಜಾ ಮಾಡಿದ್ದ ಟ್ವೀಟ್​ ಭಾರಿ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net