More

    ಏಕದಿನ ವಿಶ್ವಕಪ್ 2023| ನೆದರ್ಲೆಂಡ್ಸ್ ವಿರುದ್ಧ 81 ರನ್​ಗಳಿಂದ ಗೆದ್ದ ಪಾಕಿಸ್ತಾನ

    ಹೈದರಾಬಾದ್: ಇಲ್ಲಿನ ರಾಜೀವ್​ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನೆದರ್​ಲೆಂಡ್ಸ್​ ತಂಡದ ವಿರುದ್ಧ ಪಾಕಿಸ್ತಾನ 81ರನ್​ಗಳ ಭರ್ಜರಿ ಜಯ ಗಳಿಸಿದೆ.

    ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ಮೊಹಮ್ಮದ್​ ರಿಜ್ವಾನ್ (68 ರನ್, 75 ಎಸೆತ, 8 ಬೌಂಡರಿ), ಸೌದ್​ ಶಕೀಲ್ (68 ರನ್, 52 ಎಸೆತ, 9 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ಫಲವಾಗಿ 49 ಓವರ್​ಗಳಲ್ಲಿ 286 ರನ್​ಗಳಿ ಆಲೌಟ್​ ಆಯಿತು.

    287 ರನ್​ಗಳ ಗುರಿ ಬೆನ್ನತ್ತಿದ್ದ ನೆದರ್​ಲೆಂಡ್ಸ್​ ತಂಡವು ಪಾಕ್‌ ಬೌಲಿಂಗ್‌ ದಾಳಿ ವಿರುದ್ಧ ರನ್‌ ಪೇರಿಸಲು ಪರದಾಡಿತು. ಅಂತಿಮವಾಗಿ ಪಾಕ್‌ ತಂಡವು 81 ರನ್‌ಗಳಿಂದ ಗೆದ್ದು ಬೀಗಿದೆ. ಆ ಮೂಲಕ ಭಾರತದಲ್ಲಿ ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

    ಪಾಕಿಸ್ತಾನ ಪರ ಹ್ಯಾರಿಸ್ ರೌಫ್​ (9-0-43-3), ಶಾದಾಬ್​ ಖಾನ್ (8-0-45-1), ಹಸನ್ ಅಲಿ (7-1-33-2), ಮೊಹಮ್ಮದ್​ ನವಾಜ್ (7-0-31-1), ಶಹೀನ್​ ಅಫ್ರಿದಿ (7-0-37-1), ಇಫ್ತಿಕಾರ್​ ಅಹ್ಮದ್ (3-0-16-1) ಪಾಕಿಸ್ತಾನದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts