

ಮುಂಬೈ: ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಗೆ ಪ್ರಯಾಣಿಸಲೂ ಪಾಕಿಸ್ತಾನ ತಂಡಕ್ಕೆ ಅಲ್ಲಿನ ಸರ್ಕಾರ ಅನುಮತಿ ನೀಡಿದೆ. ಈ ಬಾರಿಯ ಟೂರ್ನಿ ಭಾರತದ ಆತಿಥ್ಯದಲ್ಲಿ ನಡೆಯಲಿದ್ದು, ಪಾಕ್ ತಂಡದ ಭಾಗವಹಿಸುವಿಕೆ ಬಗ್ಗೆ ಹಲವು ತಿಂಗಳುಗಳಿಂದ ಅನಿಶ್ಚಿತತ್ತೆ ತಲೆದೂರಿತ್ತು.
ಈ ಕುರಿತು ಟ್ವೀಟ್ ಮಾಡಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ರಾಜಕೀಯದೊಂದಿಗೆ ಕ್ರೀಡೆಯನ್ನೂ ಬೆರೆಸಬಾರದೆಂದೂ ನಾವೂ ನಿರಂತರವಾಗಿ ಹೇಳಿಕೊಂಡು ಬಂದಿದ್ದೇವೆ. ಆದ್ದರಿಂದ ಮುಂಬರುವ ವಿಶ್ವಕಪ್ನಲ್ಲಿ ಪಾಲ್ಗೊಳ್ಳಲೂ ನಮ್ಮ ತಂಡವನ್ನೂ ಭಾರತ್ಕಕೆ ಕಳುಹಿಸಲೂ ನಿರ್ಧರಿಸಿದ್ದೇವೆ.
ಅಂತರಾಷ್ಟ್ರೀಯ ಕ್ರೀಡೆಗೆ ಸಂಬಂಧಿಸಿದ ವಿಚಾರವೂ ಭಾರತದೊಂದಿಗಿನ ದ್ವಿಪಕ್ಷೀಯ ಸ್ಥಿತಿಯೂ ಅಡ್ಡಿಯಾಗಬಾರದೂ. ಭಾರತ ಪ್ರವಾಸದ ವೇಳೆ ಪಾಕ್ ಆಟಗಾರರ ಭದ್ರತೆಯ ಬಗ್ಗೆ ಕಳವಳವನ್ನೂ ಹೊಂದಿದ್ದೇವೆ. ಈ ಬಗ್ಗೆ ಐಸಿಸಿ ಹಾಗೂ ಭಾರತ ಸರ್ಕಾರಕ್ಕೆ ತಿಳಿಸಲಾಗುವುದೂ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಟ್ವೀಟ್ ಮಾಡಿದೆ.