ಭಯೋತ್ಪಾದಕನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಕರೆದ ಪಾಕ್ ಸೇನೆ | Pakistan Army

Pakistan Army
Published on

Pakistan Army: ಲಷ್ಕರ್​ ಉಗ್ರನನ್ನು ಮುಗ್ದ ಕುಟುಂಬದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಪಾಕಿಸ್ತಾನ ಸೇನೆಯೂ ಕರೆದಿದೆ. ಲಷ್ಕರ್​-ಎ-ತೊಯ್ಬಾದ ಭಯೋತ್ಪಾದಕನ ಅಂತ್ಯಕ್ರಿಯೆಯಲ್ಲಿ ಪಾಕ್​​ ಸೇನಾಧಿಕಾರಿಗಳು ಭಾಗಿಯಾಗಿರುವ ವಿಡಿಯೋ ವೈರಲ್​ ಆದ ನಂತರ, ಟೀಕೆಗಳನ್ನು ಕಡಿಮೆ ಮಾಡುವುದಕ್ಕಾಗಿ ಕಿಸ್ತಾನದ ಮಿಲಿಟರಿ ವಕ್ತಾರ ಡಿಜಿ ಐಎಸ್‌ಪಿಆರ್, ಆ ವ್ಯಕ್ತಿ "ಒಬ್ಬ ಮುಗ್ಧ ಕುಟುಂಬ ವ್ಯಕ್ತಿ" ಮತ್ತು "ಒಬ್ಬ ಧರ್ಮೋಪದೇಶಕ" ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ, ಆ ವ್ಯಕ್ತಿ ಸರಳ ಪಕ್ಷದ ಕಾರ್ಯಕರ್ತ ಎಂದು ಪ್ರತಿಪಾದಿಸಲು ISPR ಪಾಕಿಸ್ತಾನಿ ರಾಷ್ಟ್ರೀಯ ಗುರುತಿನ ಚೀಟಿಯನ್ನು ಕೂಡ ಪ್ರದರ್ಶಿಸಿದ್ದರು.

ಆಪರೇಷನ್ ಸಿಂಧೂರ್ ಕುರಿತು ಉನ್ನತ ಮಟ್ಟದ ಮಾಹಿತಿ ಪ್ರಸಾರದಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಭಾರತ ನಡೆಸಿದ ಗಡಿಯಾಚೆಗಿನ ದಾಳಿಯಲ್ಲಿ ಹತರಾದ ಭಯೋತ್ಪಾದಕರಿಗೆ ಅಂತ್ಯಕ್ರಿಯೆಯ ಪ್ರಾರ್ಥನೆ ಸಲ್ಲಿಸಲು ಅಮೆರಿಕದಿಂದ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ಮತ್ತು ಹಿರಿಯ ಎಲ್‌ಇಟಿ ಕಮಾಂಡರ್ ಹಫೀಜ್ ಅಬ್ದುಲ್ ರೌಫ್ ನೇತೃತ್ವ ವಹಿಸುತ್ತಿರುವ ಫೋಟೋವನ್ನು ಬಹಿರಂಗಪಡಿಸಿದರು.

"ಭಯೋತ್ಪಾದಕರಿಗೆ ಸರ್ಕಾರಿ ಅಂತ್ಯಕ್ರಿಯೆಗಳನ್ನು ನೀಡುವುದು ಪಾಕಿಸ್ತಾನದಲ್ಲಿ ಒಂದು ಪದ್ಧತಿಯಾಗಿರಬಹುದು" ಭಯೋತ್ಪಾದಕ ಗುಂಪುಗಳಿಗೆ ಪಾಕಿಸ್ತಾನದ ನಿರಂತರ ಪ್ರೋತ್ಸಾಹವನ್ನು ಪ್ರಶ್ನಿಸಲು ಮಿಸ್ರಿ ಆ ಫೋಟೋವನ್ನು ಹೈಲೈಟ್ ಮಾಡಿದ್ದರು.

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನ ಭಾಗಿಯಾಗಿರುವುದನ್ನು ನಿರಾಕರಿಸುತ್ತಲೇ ಬಂದಿರುವುದರಿಂದ ಈ ಬೆಳವಣಿಗೆ ಸಂಭವಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net