

ಇಸ್ಲಾಮಾಬಾದ್: ಪಾಕಿಸ್ತಾನಿ ನಟ, ಗಾಯಕ ಮತ್ತು ಗೀತರಚನೆಕಾರ ಮೊಹ್ಸಿನ್ ಅಬ್ಬಾಸ್ ಹೈದರ್ ಕೋಲ್ಕತ್ತಾದ ಅತ್ಯಾಚಾರ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ್ದು, ವಿಶ್ವದ ಎಲ್ಲ ಮಹಿಳೆಯರಿಗೆ ಕ್ಷಮೆಯಾಚಿಸಿದ್ದಾರೆ. ಆದರೆ ಈತ ತನ್ನ ಪತ್ನಿಗೆ ಈ ಹಿಂದೆ ಕಿರುಕುಳ ನೀಡಿದ್ದು, ನೆಟ್ಟಿಗರು ಮೊದಲು ನಿಮ್ಮ ಪತ್ನಿಗೆ ಕ್ಷಮೆಯಾಚಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲ್ಕತ್ತಾ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಬಾಲಿವುಡ್ ನಟರಾದ ಆಲಿಯಾ ಭಟ್, ಹೃತಿಕ್ ರೋಷನ್, ಕಂಗನಾ ರನೌತ್ ಮತ್ತು ಕರೀನಾ ಕಪೂರ್ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದ್ದು, ಪಾಕಿಸ್ತಾನಿ ನಟ ಮೊಹ್ಸಿನ್ ಕೂಡ ಆಘಾತ ವ್ಯಕ್ತಪಡಿಸಿದ್ದಾರೆ. ಈತ ಜಗತ್ತಿನ ಎಲ್ಲ ಮಹಿಳೆಯರಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸುವುದಾಗಿ ತನ್ನ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
ಪ್ರಕರಣದ ಬಗ್ಗೆ ಬಾಲಿವುಡ್ ನಟರು ಏನು ಹೇಳಿದ್ದಾರೆ ಎಂಬುದರ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆತ ತನ್ನ ಪೋಸ್ಟ್‌ಗೆ 'ರೇಪಿಸ್ಟ್‌ಗೆ ನೇಣು ಹಾಕು' ಮತ್ತು 'ಸಂತ್ರಸ್ತೆಗೆ ನ್ಯಾಯ ಕೊಡಿ' ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಸೇರಿಸಿದ್ದಾರೆ.
ಇದಕ್ಕೆ ಇನ್‌ಸ್ಟಾಗ್ರಾಮ್ ಬಳಕೆದಾರರು ಭಾರತ ಮತ್ತು ಪಾಕಿಸ್ತಾನಿ ಮಹಿಳೆಯರು ದೌರ್ಜನ್ಯಕ್ಕೆ ಬಲಿಯಾಗುತ್ತಾರೆ, ಏಕೆಂದರೆ ತಪ್ಪಿತಸ್ತರಿಗೆ ಶಿಕ್ಷೆಯಾಗುವುದಿಲ್ಲ ಎಂದು ಒಬ್ಬ ಬಳಕೆದಾರ ಹೇಳಿದ್ದರೆ, ಮತ್ತೊಬ್ಬರು ನೀವು ನಿಮ್ಮ ಹೆಂಡತಿಯನ್ನು ನಿಂದಿಸಿಲ್ಲವೇ? ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ ಕೂಡ "ನಿಮ್ಮ ಹೆಂಡತಿಗೆ ಕ್ಷಮೆಯಾಚಿಸಿ" ಎಂದು ಬರೆದಿದ್ದಾರೆ.
ಕೆಲವು ವರ್ಷಗಳ ಹಿಂದೆ ಕೌಟುಂಬಿಕ ಹಿಂಸಾಚಾರದ ಆರೋಪದ ಮೂಲಕ ಮೊಹ್ಸಿನ್ ಸುದ್ದಿಯಲ್ಲಿದ್ದರು. 2019 ರಲ್ಲಿ ಅವರ ಮಾಜಿ ಪತ್ನಿ ಫಾತಿಮಾ ಸೊಹೈಲ್ ಗಾಯಗೊಂಡ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ತಾನು ಗರ್ಭಿಣಿಯಾಗಿದ್ದಾಗ ನಟನ ಕೈಯಿಂದ ಕೌಟುಂಬಿಕ ಹಿಂಸಾಚಾರವನ್ನು ಎದುರಿಸಿದ್ದೇನೆ. ಆತ ತನಗೆ ಮೋಸ ಮಾಡುತ್ತಿದ್ದಾನೆ ಎಂದು ಆಕೆ ಆರೋಪಿಸಿದ್ದರು.