

ಉತ್ತರಪ್ರದೇಶ: ಪಬ್ಜಿ ಆನ್ಲೈನ್ ಗೇಮ್ ಮೂಲಕ ಹುಟ್ಟಿಕೊಂಡ ಪ್ರೀತಿಯನ್ನು ಅರಸಿ, ಪಾಕಿಸ್ತಾನದಿಂದ ಭಾರತಕ್ಕೆ ಬಂದ ಮಹಿಳೆ ಸೀಮಾ ಹೈದರ್, ಇದೀಗ ಸಾಕಷ್ಟು ವಿರೋಧಗಳ ಮಧ್ಯೆ ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ತಮ್ಮದೊಂದು ಮನವಿಯನ್ನು ಮುಂದಿಟ್ಟಿದ್ದಾರೆ.
ಮಹಿಳೆ ಉತ್ತರಪ್ರದೇಶದ ಸಚಿನ್ ಎಂಬ ಯುವಕನ ಮೇಲಿನ ಪ್ರೀತಿಗಾಗಿ ಪಾಕಿಸ್ತಾನದಿಂದ ತನ್ನ ನಾಲ್ಕು ಮಕ್ಕಳೊಂದಿಗೆ ನೇಪಾಳದ ಮೂಲಕ ಭಾರತಕ್ಕೆ ನುಸುಳಿ ಬಂದರು. ತದನಂತರ ಸೀಮಾ ಹೈದರ್ ಮೇಲೆ ಸಾಕಷ್ಟು ಅನುಮಾನಗಳು ಕೇಳಿಬಂದಿದ್ದು, ಆಕೆ ಪಾಕಿಸ್ತಾನದ ಸ್ಪೈ ಎಂದು ಶಂಕಿಸಲಾಗಿತ್ತು. ಆದ್ರೆ, ಇದಕ್ಕೆ ಉತ್ತರಿಸಿರುವ ಮಹಿಳೆ, ನಾನು ಯಾವ ಗೂಢಚಾರಿಣಿಯಲ್ಲ ಎಂದು ಹೇಳಿದರು.
ಶೀಘ್ರದಲ್ಲೇ ಸತ್ಯ ಹೊರಬರಲಿದೆ ಎಂದು ಒತ್ತಿ ಹೇಳಿದ ಸೀಮಾ ಹೈದರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತನ್ನನ್ನು ಭಾರತದಿಂದ ವಾಪಸ್ ಪಾಕಿಸ್ತಾನಕ್ಕೆ ಕಳುಹಿಸದಂತೆ ಮನವಿ ಮಾಡಿದ್ದಾರೆ,(ಏಜೆನ್ಸೀಸ್).