

ಲಾಹೋರ್: ಭಾರತ ವಿರುದ್ಧ ವಿಶ್ವಕಪ್ನಲ್ಲಿ ಕಂಡ ಹೀನಾಯ ಸೋಲಿನಿಂದಾಗಿ ಪಾಕಿಸ್ತಾನ ತಂಡ ಕಂಗೆಟ್ಟಿದೆ. ಅತ್ತ ಪಾಕ್ ತಂಡದ ಅಭಿಮಾನಿಗಳೂ ಸೋಲಿನಿಂದ ವಿಚಲಿತರಾಗಿದ್ದಾರೆ. ಇದರ ನಡುವೆ ಭಾರತ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳಲು ಪಾಕ್ ನಟಿಯೊಬ್ಬಳು ವಿಚಿತ್ರ ಹಾದಿ ಹಿಡಿದಿದ್ದಾಳೆ!
ಭಾರತ ವಿರುದ್ಧ ಸೇಡು ತೀರಿಸಿಕೊಳ್ಳಲು ಬಾಂಗ್ಲಾದೇಶ ತಂಡದ ಮೊರೆ ಹೋಗಿರುವ ಪಾಕ್ ನಟಿ ಸೆಹರ್ ಶಿನ್ವಾರಿ, ಭಾರತ ತಂಡವನ್ನು ಸೋಲಿಸಿದರೆ ಬಾಂಗ್ಲಾದೇಶ ತಂಡದ ಆಟಗಾರರೊಂದಿಗೆ ಡಿನ್ನರ್ ಡೇಟ್ಗೆ ಬರಲು ಸಿದ್ಧಳಿರುವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾಳೆ.
"ಇನ್ಶಾಅಲ್ಲಾ, ನನ್ನ ಬಂಗಾಲಿ ಬಂದು ಮುಂದಿನ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲಿ. ನಾನಾಗ ಢಾಕಾಗೆ ತೆರಳಿ ಬಂಗಾಲಿ ಹುಡುಗರೊಂದಿಗೆ ಡಿನ್ನರ್ ಡೇಟ್ಗೆ ತೆರಳುವೆ' ಎಂದು ಶಿನ್ವಾರಿ ಎಕ್ಸ್ನಲ್ಲಿ ಬರೆದುಕೊಂಡಿದ್ದಾಳೆ. ಈ ನಡುವೆ ಭಾರತ ತಂಡ ವಿಶ್ವಕಪ್ನಲ್ಲಿ ಸೆಮಿಫೈನಲ್ನಲ್ಲೇ ಹೊರಬೀಳಲಿದೆ ಎಂದು ಭವಿಷ್ಯ ನುಡಿದಿರುವ ಶಿನ್ವಾರಿ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಫೈನಲ್ನಲ್ಲಿ ಆಡಲಿವೆ ಎಂದಿದ್ದಾಳೆ. ಅಲ್ಲದೆ, ಪಾಕ್ ತಂಡ ವಿಶ್ವಕಪ್ ಎತ್ತಿಹಿಡಿಯುವ ಕನಸನ್ನೂ ಹಂಚಿಕೊಂಡಿದ್ದಾಳೆ.
ಸೆಹರ್ ಶಿನ್ವಾರಿ ಈ ಮುನ್ನ ಭಾರತ ವಿರುದ್ಧದ ಪಂದ್ಯಕ್ಕೆ ಮುನ್ನ ಪಾಕ್ ತಂಡ ಗೆಲುವು ದಾಖಲಿಸಿದರೆ, ಭಾರತ ಮತ್ತು ಬಿಜೆಪಿ ಬಗ್ಗೆ ಇನ್ನೆಂದೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವುದಿಲ್ಲ ಎಂದು ಬರೆದುಕೊಂಡಿದ್ದಳು. ಆದರೆ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದರೂ ಆಕೆ ತನ್ನ ಮಾತು ಉಳಿಸಿಕೊಂಡಿಲ್ಲ ಎಂಬುದು ಗಮನಾರ್ಹ.