

ಬಂಟ್ವಾಳ: ಮೈಟ್ ಟೆಕ್ನಿಕಲ್ ಹಾಗೂ ಪ್ರೊಫೆಶನಲ್ ಕಾಲೇಜು ನೇತೃತ್ವದಲ್ಲಿ ಅಂತರ್ ಶಾಲಾ ಕಾಲೇಜು ಚಿತ್ರಕಲಾ ಸ್ಪರ್ಧೆ ಬಿ.ಸಿ. ರೋಡ್ನಲ್ಲಿ ನಡೆಯಿತು.
ಚಿತ್ರಕಲಾವಿದ ದಿನೇಶ್ ಹೊಳ್ಳ ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ಕಲಿಕೆಯ ಜತೆಗೆ ಚಿತ್ರಕಲೆಯೂ ಕರಗತವಾದರೆ ಜೀವನದಲ್ಲಿ ಪರಿಪೂರ್ಣತೆ ದೊರೆಯಲು ಸಾಧ್ಯ ಎಂದರು.
ಪ್ರಾಂಶುಪಾಲರಾದ ರಾಕೇಶ್ ಮತ್ತು ನಿಶ್ಮಿತ ರಾಕೇಶ್, ಮುಖ್ಯಶಿಕ್ಷಕ ಅಶ್ರಫ್, ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕಿ ಚಾಂದಿನಿ ಮತ್ತು ನಾಯಕ ಮಿಥುನ್ ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಸುಷ್ಮಾ ನಿರೂಪಿಸಿದರು. ಪ್ರೀಮಲ್ ಪ್ರಸ್ತಾವಿಸಿದರು. ಸ್ವಾತಿ ಅತಿಥಿ ಪರಿಚಯ ಮಾಡಿದರು. ನಿಶ್ಮಿತ ವಂದಿಸಿದರು.
ಎರಡು ವಿಭಾಗಗಳಲ್ಲಿ ನಡೆಸಲಾದ ಈ ಸ್ಪರ್ಧೆಯಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವೈ.ಎನ್. ತಾರನಾಥ ಆಚಾರ್ಯ ಮತ್ತು ಸತೀಶ್ ಪಂಜ ತೀರ್ಪುಗಾರರಾಗಿದ್ದರು. ಶಿಕ್ಷಕಿ ಗೀತಾ ಕಾರ್ಯಕ್ರಮ ನಿರೂಪಿಸಿದರು. ಸ್ವಾತಿ ವಂದಿಸಿದರು.