Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ. ಕೆಲವೊಮ್ಮೆ ನೋವು ವಿಪರೀತವಾಗಿದ್ದೆರೆ, ಇನ್ನು ಕೆಲವೊಮ್ಮೆ ನೋವು ಸಾಧಾರಣವಾಗಿರುತ್ತದೆ. ಆದರೂ, ಕೆಲವರಿಗೆ ಸಣ್ಣ ನೋವನ್ನು ಸಹ ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ. ಹೀಗಾಗಿ ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಾರೆ. ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡ ತಕ್ಷಣ ನೋವು ಕಡಿಮೆಯಾಗುತ್ತದೆ. ಕೆಲವರು ನೋವಿನ ಜಾಗಕ್ಕೆ ಜೆಲ್‌ಗಳನ್ನು ಸಹ ಬಳಸುತ್ತಾರೆ. ಅದು ಕೂಡ ನೋವು ಕಡಿಮೆ ಮಾಡುತ್ತದೆ. ಆದರೆ ಈ ಎರಡರಲ್ಲಿ ಯಾವುದು ಉತ್ತಮ ಎಂಬುವನ್ನು ನಾವೀಗ ತಿಳಿದುಕೊಳ್ಳೋಣ.
ನೋವಿಗೆ ಕಾರಣವೇನು?
ಒಬ್ಬ ವ್ಯಕ್ತಿಯು ಸ್ನಾಯುಗಳಲ್ಲಿ ಅಥವಾ ಕೀಲುಗಳಲ್ಲಿ ನೋವು ಅನುಭವಿಸಿದರೆ, ಸಾಮಾನ್ಯವಾಗಿ ಅವರ ದೈಹಿಕ ಸ್ಥಿತಿಯನ್ನು ಅವಲಂಬಿಸಿ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆ ಪಡೆಯುವ ಮೊದಲು, ಯಾವ ರೀತಿಯ ನೋವು ಅನುಭವಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ನೋವನ್ನು ದೀರ್ಘಕಾಲದ ನೋವು, ನೋಕಿಸೆಪ್ಟಿವ್ ನೋವು, ನರ ನೋವು ಇತ್ಯಾದಿ ಎಂದು ವರ್ಗೀಕರಿಸಬಹುದು. ಇದರ ಹೊರತಾಗಿ, ಒತ್ತಡ, ಜ್ವರ, ಶೀತ, ನಿದ್ರೆಯ ಕೊರತೆ, ನಿರ್ಜಲೀಕರಣ ಹಾಗೂ ಗಾಯಗಳು ಸಹ ನೋವನ್ನು ಉಂಟುಮಾಡಬಹುದು.
ನೋವು ನಿವಾರಣೆ ಹೇಗೆ?
ನೋವು ಅಥವಾ ಗಾಯಗಳಿಗೆ ಅನೇಕ ಜನರು ಮನೆಮದ್ದುಗಳನ್ನು ಅವಲಂಬಿಸಿದ್ದಾರೆ. ನೋವಿನಿಂದಾಗಿ, ನಮ್ಮ ದೈನಂದಿನ ಕೆಲಸವು ಕಷ್ಟಕರವಾಗುತ್ತದೆ. ಅಂತಹ ನೋವುಗಳನ್ನು ನೋವು ನಿವಾರಕ ಮಾತ್ರೆಗಳು, ಜೆಲ್‌ಗಳು, ಮುಲಾಮುಗಳು ಮತ್ತು ಸ್ಪ್ರೇಗಳಿಂದಲೂ ನಿವಾರಿಸಬಹುದು.
ನೋವು ನಿವಾರಕಗಳ ಬಳಕೆ ಎಷ್ಟು ಸೂಕ್ತ?
ಒತ್ತಡ ಮತ್ತು ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ, ಎಲ್ಲರೂ ತಮ್ಮ ನೋವನ್ನು ಆದಷ್ಟು ಬೇಗ ತೊಡೆದುಹಾಕುವ ಆತುರದಲ್ಲಿದ್ದಾರೆ. ನೋವಿನಿಂದ ತ್ವರಿತ ಪರಿಹಾರಕ್ಕಾಗಿ, ನೋವು ನಿವಾರಕಗಳನ್ನುಬಳಸುತ್ತಾರೆ. ಇದು ನೋವನ್ನು ಬಹಳ ಬೇಗನೆ ಕಡಿಮೆ ಮಾಡುತ್ತದೆ. ಆದರೆ, ಇದು ಕೆಲವು ಅಡ್ಡಪರಿಣಾಮಗಳನ್ನೂ ಹೊಂದಿದೆ. ಆದ್ದರಿಂದ, ಮಾತ್ರೆಗಳನ್ನು ಸೇವಿಸುವಾಗ ಅಥವಾ ಜೆಲ್ ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಏಕೆಂದರೆ, ಅಂತಹ ನೋವು ನಿವಾರಕ ಮಾತ್ರೆಗಳು ವಾಂತಿ, ಎದೆಯುರಿ, ಹುಣ್ಣು ಇತ್ಯಾದಿಗಳಿಗೆ ಕಾರಣವಾಗಬಹುದು. ಕೆಲವೊಮ್ಮೆ ಇದು ಮೂತ್ರಪಿಂಡಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಅಂತಹ ಮಾತ್ರೆಗಳ ಬದಲಿಗೆ, ನೋವು ನಿವಾರಕ ಜೆಲ್‌ಗಳನ್ನು ಬಳಸುವುದು ಉತ್ತಮ. ಇದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ.
ಮಾತ್ರೆಗಳಿಗಿಂತ ನೋವು ನಿವಾರಕ ಜೆಲ್ ಉತ್ತಮವೇ?
ನೋವು ನಿವಾರಕ ಜೆಲ್ ದೇಹಕ್ಕೆ ಹಾನಿ ಮಾಡುವುದಿಲ್ಲ. ನೋವು ನಿವಾರಕ ಮಾತ್ರೆಗಳು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ನಾಶಮಾಡುತ್ತವೆ. ಅವು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತವೆ. ಆದರೆ, ಜೆಲ್‌ಗಳು ಹಾಗಲ್ಲ. ಅವು ನೋವು ಇರುವ ಪ್ರದೇಶವನ್ನು ಮಾತ್ರ ಆವರಿಸುತ್ತವೆ. ಅವು ದೇಹದ ಉಳಿದ ಭಾಗಗಳಿಗೆ ಹಾನಿ ಮಾಡುವುದಿಲ್ಲ. ದೀರ್ಘಕಾಲದವರೆಗೆ ನೋವು ನಿವಾರಕ ಜೆಲ್‌ಗಳನ್ನು ಬಳಸಿದರೂ ದೇಹಕ್ಕೆ ಯಾವುದೇ ಹಾನಿ ಮಾಡುವುದಿಲ್ಲ, ಆದರೆ, ಮಾತ್ರೆಗಳನ್ನು ದೀರ್ಘಕಾಲದವರೆಗೆ ತೆಗೆದುಕೊಳ್ಳುವುದರಿಂದ ದೇಹದ ಆಂತರಿಕ ಅಂಗಗಳಿಗೆ ಹಾನಿಯಾಗುತ್ತದೆ. ನೋವು ನಿವಾರಕ ಜೆಲ್‌ಗಳು ನೋವು ನಿವಾರಕ ಮಾತ್ರೆಗಳಿಗಿಂತ ಹೆಚ್ಚು ವೇಗವಾಗಿ ನೋವನ್ನು ಕಡಿಮೆ ಮಾಡುತ್ತವೆ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಮಹಾ ಕುಂಭಮೇಳದಲ್ಲಿ ವಿಶೇಷ ಗಮನಸೆಳೆದ ಸಾಧ್ವಿ: ಮಾಡೆಲ್ ಆಗಿದ್ದ ಸುಂದರಿ ಸನ್ಯಾಸಿನಿ ಆಗಿದ್ದೇಕೆ? Harsha Richarya
ಕೋಳಿ ಅಂಕ ಸ್ಪರ್ಧೆಯಲ್ಲಿ ಸುಮ್ಮನೇ ಮೌನವಾಗಿ ನಿಂತು 1.25 ಕೋಟಿ ರೂ. ಗೆದ್ದ ಹುಂಜ! Cock Fighting