

Pahalgam: ಪೆಹಲ್ಗಾಮ್ನಲ್ಲಿ 26 ನಾಗರಿಕರನ್ನ ಕೊಂದ ಭಯೋತ್ಪಾದಕರು ಅಲ್ಲಿಯೇ ಅಂದು ಗುಂಡು ಹಾರಿಸಿ ಸಂಭ್ರಮಾಚರಣೆ ಮಾಡಿದ್ದರು. ಅಲ್ಲದೇ,ಗಾಳಿಯಲ್ಲಿ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದನ್ನು ನಾನು ನೋಡಿದ್ದೇನೆ ಎಂದು ಅಲ್ಲಿನ ಪ್ರತ್ಯಕ್ಷದರ್ಶಿಯೊಬ್ಬರು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ತಿಳಿಸಿದ್ದಾನೆ ಎಂದು ಬುಧವಾರ(ಜು.16) ವರದಿಯಾಗಿದೆ.
ಇದನ್ನೂ ಓದಿ:ಭಕ್ತರಿಗಾಗಿ 400 ಕೊಠಡಿಗಳ ಯಾತ್ರಿ ನಿವಾಸ
ಇನ್ನು ಘಟನೆ ನಡೆದ ಸುಮಾರು ಎರಡುವರೆ ತಿಂಗಳ ಬಳಿಕ ಇದೀಗ ಪ್ರಕರಣ ಬೆಳಕಿಗೆ ಬಂದಿದೆ. ಏ.22ರಂದು 26 ನಾಗರಿಕರನ್ನು ಕೊಂದ ಬಳಿಕ ಭಯೋತ್ಪಾದಕರು, ಗಾಳಿಯಲ್ಲಿ ನಾಲ್ಕು ಸುತ್ತು ಗುಂಡು ಹಾರಿಸುವುದನ್ನು ನೋಡಿರುವುದಾಗಿ ತನಿಖಾಧಿಕಾರಿಗಳಿಗೆ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ದಾಳಿಯ ಕೆಲವೇ ಕ್ಷಣಗಳಲ್ಲಿ ಭಯೋತ್ಪಾದಕರಿಗೆ ಈ ವ್ಯಕ್ತಿ ಎದುರಾದ ಎಂದು ಹೇಳಲಾಗಿದೆ. ಪ್ರತ್ಯಕ್ಷದರ್ಶಿಯ ಹೇಳಿಕೆಯಿಂದ ತನಿಖೆಯಲ್ಲಿ ಒಂದು ಪ್ರಗತಿ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ಪ್ರತ್ಯಕ್ಷದರ್ಶಿಯ ಪ್ರಕಾರ, ಭಯೋತ್ಪಾದಕರಿಗೆ ಬೆಂಬಲ ನೀಡಿದ್ದಕ್ಕಾಗಿ NIA ಬಂಧಿಸಿದ ಇಬ್ಬರು ಸ್ಥಳೀಯರು, ದಾಳಿಯ ಸಮಯದಲ್ಲಿ ಕಣಿವೆಯಲ್ಲಿದ್ದರು ಎನ್ನಲಾಗಿದೆ. ಅಲ್ಲದೆ, ಈ ವ್ಯಕ್ತಿಗಳು ಸ್ಥಳದಲ್ಲಿದ್ದ ಮೂವರು ಭಯೋತ್ಪಾದಕರ ಸಹಾಯಕರಾಗಿದ್ದರು ಎಂದು ವರದಿ ಉಲ್ಲೇಖಸಿದೆ.
ಇದನ್ನೂ ಓದಿ:ಸಿಲಿಂಡರ್ ಸ್ಫೋಟವಾಗಿ ವಸ್ತುಗಳು ಭಸ್ಮ
ಭಯೋತ್ಪಾದಕರಲ್ಲಿ ಲಷ್ಕರ್-ಎ-ತೊಯ್ಬಾದ ಕಮಾಂಡರ್ ಸುಲೈಮಾನ್ ಕೂಡ ಸೇರಿದ್ದಾನೆ. ಈತ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಇತರ ಮೂರು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಮೊಸ್ಟ್ ವಾಂಟೆಡ್ ಉಗ್ರನಾಗಿದ್ದಾನೆ.( ಏಜೆನ್ಸೀಸ್)