ಹೆಬ್ರಿ: ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಬಾಲಕಿಯರ ತಂಡ ಬಜಗೋಳಿಯಲ್ಲಿ ನಡೆದ ಪ್ರಾಥಮಿಕ ಶಾಲಾ ವಿಭಾಗದ ಅಂಡರ್ 14 ವರ್ಷದ ಬಾಲಕಿಯರ ವಿಭಾಗದ ಉಡುಪಿ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದಿದೆ.
ಪಡುಕುಡೂರು ಶಾಲಾ ತಂಡದ ಕಾರ್ಕಳ ಕೆಎಂಇಎಸ್ ಶಾಲೆ ದಿತ್ಯಾ ಎ.ಶೆಟ್ಟಿ ಉತ್ತಮ ಆಲ್ ರೌಂಡರ್ ಆಗಿ ಮೂಡಿಬಂದಿದ್ದು ಅವರೊಂದಿಗೆ ಪಡುಕುಡೂರು ಶಾಲಾ ದೀಕ್ಷಾ, ಸುಚಿತಾ, ಪ್ರಣೀತಾ, ಸಾನ್ವಿಕಾ ಹಾಸನದಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಉಡುಪಿ ಸೇಂಟ್ ಜೋನ್ಸ್ ಶಾಲೆ ತಂಡದೊಂದಿಗೆ ಪ್ರತಿನಿಧಿಸಲಿದ್ದಾರೆ ಎಂದು ಮುಖ್ಯಶಿಕ್ಷಕ ಹರೀಶ ಪೂಜಾರಿ ಎಸ್. ತಿಳಿಸಿದರು. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಶಿಕ್ಷಕವೃಂದ, ಶಾಲಾಭಿವೃದ್ಧಿ ಸಮಿತಿ ಸರ್ವ ಸದಸ್ಯರು, ಹಳೇ ವಿದ್ಯಾರ್ಥಿ ಸಂಘದ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.