ಕ್ರೀಡಾ ದಿನಕ್ಕೆ ವಿಷ್​ ಮಾಡುವಲ್ಲಿ ಎಡವಿದ ಪಿ.ಟಿ.ಉಷಾ; ನೆಟ್ಟಿಗರಿಂದ ತೀವ್ರ ಟೀಕೆ..

P T Usha
Published on

ಬೆಂಗಳೂರು: ವಿವಿಧ ಕ್ಷೇತ್ರಗಳ ಗಣ್ಯರು ಸೋಷಿಯಲ್ ಮೀಡಿಯಾದಲ್ಲಿ ಖಾತೆ ತೆರೆದು ಸಕ್ರಿಯರಾಗಿ ಇರುವುದು ಹೊಸದೇನಲ್ಲ. ಅಂಥ ಗಣ್ಯರ ಖಾತೆಗಳನ್ನು ಅವರೇ ಸ್ವತಃ ಇಲ್ಲವೇ ಅವರ ತಂಡದ ಸದಸ್ಯರು ನಿಭಾಯಿಸುತ್ತಿರುತ್ತಾರೆ. ಇನ್ನು ಕೆಲವರ ವಿಚಾರದಲ್ಲಿ ಅವರು ಮತ್ತು ತಂಡ ಇಬ್ಬರ ಕಡೆಯಿಂದಲೂ ಅದನ್ನು ಹ್ಯಾಂಡಲ್ ಮಾಡಲಾಗುತ್ತಿರುತ್ತದೆ. ಒಟ್ಟಾರೆಯಾಗಿ, ಆ ಖಾತೆಗಳಲ್ಲಿ ಯಾರೇ ಪೋಸ್ಟ್ ಮಾಡಿದರೂ ಅದು ಆ ಗಣ್ಯರ ಪೋಸ್ಟ್​ ಎಂದೇ ಪರಿಗಣಿಸಲ್ಪಡುತ್ತದೆ.

ಖ್ಯಾತ ಓಟಗಾತಿ, ಒಲಿಂಪಿಯನ್​, ರಾಜ್ಯಸಭಾ ಸದಸ್ಯೆ, ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆಯೂ ಆಗಿರುವ ಪಿ.ಟಿ.ಉಷಾ ರಾಷ್ಟ್ರೀಯ ಕ್ರೀಡಾ ದಿನವಾದ ನಿನ್ನೆ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯ ಕೋರಿದ್ದರು. ಆದರೆ ಇಲ್ಲಿ ಒಂದು ಎಡವಟ್ಟಾದ್ದರಿಂದ ಅವರು ಟೀಕೆಗೆ ಒಳಗಾಗಿದ್ದಾರೆ.

ದೇಶದ ಮೊಟ್ಟಮೊದಲ ಕ್ರೀಡಾ ದಿಗ್ಗಜ ಹಾಗೂ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್​ಚಂದ್ ಅವರ ಜನ್ಮದಿನವಾದ ಆ. 29ರ ದಿನವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸುವ ಮೂಲಕ ಪ್ರತಿ ವರ್ಷ ಅವರಿಗೆ ವಿಶೇಷವಾದ ಗೌರವವನ್ನು ಸಲ್ಲಿಸಲಾಗುತ್ತದೆ. ಆದರೆ ಪಿ.ಟಿ.ಉಷಾ ಕ್ರೀಡಾ ದಿನದ ಶುಭಾಶಯ ಕೋರುವಾಗ ಧ್ಯಾನ್​ಚಂದ್ ಫೋಟೋ ಹಾಕದಿರುವುದಲ್ಲದೆ, ತಮ್ಮದೇ ಫೋಟೋ ದೊಡ್ಡದಾಗಿ ಹಾಕಿಕೊಂಡಿದ್ದರು. ಈ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ಹಲವರು ಪಿ.ಟಿ.ಉಷಾ ಅವರ ಈ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net