

ನವದೆಹಲಿ: ಭಾರತದ ಸಮುದ್ರ ಭಾಗದಲ್ಲಿ ಸಾಗರ ಗಸ್ತಿಗೆ ಅನುಕೂಲವಾಗುವಂತಹ P-8A ಪೋಸೈಡನ್ ಮಾದರಿಯ ನಾಲ್ಕು P-8I ಕಿಲ್ಲರ್ ಏರ್ಕ್ರಾಫ್ಟ್ಗಳು ಮುಂದಿನ ವರ್ಷ ಭಾರತಕ್ಕೆ ಬರಲಿವೆ. ಅದರ ಕಾರ್ಯಕ್ಷಮತೆ ನೋಡಿಕೊಂಡು ಮುಂದೆ ಆರು ಅಂತಹ ಏರ್ಕ್ರಾಫ್ಟ್ ಖರೀದಿಸುವ ಚಿಂತನೆ ನಡೆಸಲಿದೆ ಭಾರತೀಯ ನೌಕಾಪಡೆ.
ಈ ವಿಮಾನದಲ್ಲಿ ಹರ್ಪೂನ್ ಬ್ಲಾಕ್ II ವಾಯುವಿನಲ್ಲೇ ಉಡಾಯಿಸುವ ಕ್ಷಿಪಣಿಗಳು, ಲಘುಭಾರದ ಟಾರ್ಪಿಡೋಗಳು(ನೀರಿನೊಳಗೆ ನುಗ್ಗಬಲ್ಲ ಕ್ಷಿಪಣಿಗಳು) ಕೂಡ ಸೇರಿಕೊಂಡಿವೆ. ಆ್ಯಂಟಿ ಶಿಪ್ ಮಿಸೈಲ್ಗಳನ್ನೂ ಉಡಾಯಿಸುವ ಸಾಮರ್ಥ್ಯ ಇವಕ್ಕೆ ಇವೆ.
ಹಿಂದು ಮಹಾಸಾಗರದ ಭಾಗದಲ್ಲಿ ಭಾರತದ ಬಲವೃದ್ಧಿಗೆ ಇದು ನೆರವಾಗಲಿದ್ದು, ನಿಗಾ ಮತ್ತು ಇಲೆಕ್ಟ್ರಾನಿಕ್ ಜಾಮಿಂಗ್ ಸಾಮರ್ಥ್ಯವೂ ಹೆಚ್ಚಾಗಲಿದೆ. ಅಮೆರಿಕದಿಂದ ಬರಲಿರುವ P-8I ಏರ್ಕ್ರಾಫ್ಟ್ಗಳು ಮಲ್ಟಿ ಮಿಷನ್ ಕಾರ್ಯಸಾಧಕವಾದವುಗಳಾಗಿದ್ದು, ಬೋಯಿಂಗ್ ಜತೆಗೆ ಇನ್ನೂ ಆರು ವಿಮಾನ ಖರೀದಿ ಬಗ್ಗೆ 2021ರಲ್ಲಿ ಮಾತುಕತೆ ನಡೆಯಲಿದೆ.
ಈ ವಿಮಾನದ ರೇಂಜ್ 2,200 ಕಿ.ಮೀ. ಆಗಿದ್ದು, ಗರಿಷ್ಠ ವೇಗ ಗಂಟೆಗೆ 490 ನಾಟ್ಸ್(789 ಕಿ.ಮೀ). ಚೀನಾ ಈಗಾಗಲೇ ಭಾರತದ ಸುತ್ತ ಪರ್ಲ್ ಆಫ್ ಸ್ಟಿಂಗ್ ರೀತಿಯಲ್ಲಿ ನೆರೆ ದೇಶಗಳ ಬಂದರುಗಳಲ್ಲಿ ತನ್ನ ನೆಲೆ ಸ್ಥಾಪಿಸಿರುವುದರಿಂದ ಭಾರತಕ್ಕೆ ನೌಕಾಪಡೆ ಬಲವೃದ್ಧಿಸುವುದು ಅತೀ ಅವಶ್ಯವಾಗಿದೆ. (ಏಜೆನ್ಸೀಸ್)