ಭಾರತದಲ್ಲಿ ಹುಟ್ಟಿರುವುದು ನಮ್ಮ ಶ್ರೇಷ್ಠತೆ

hbr (3)
Published on

ಹೆಬ್ರಿ: ಭಾರತದಲ್ಲಿ ಹುಟ್ಟಿರುವುದೇ ನಮ್ಮ ಶ್ರೇಷ್ಠತೆ. ಈ ದೇಶಕ್ಕೆ ಭವ್ಯ ರಾಜಕೀಯ ಪರಂಪರೆ ಇದೆ. ಕೌಟಿಲ್ಯ, ಲಾಲ್ ಬಹದ್ದೂರ್ ಶಾಸಿ, ಅಬ್ದುಲ್ ಕಲಾಂರಂತಹ ರಾಜಕೀಯ ಧುರೀಣರು ಎಲ್ಲರಿಗೂ ವಾದರಿ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಸುರೇಶ್ ಮರಕಾಲ ಹೇಳಿದರು.

ಹೆಬ್ರಿ ಅಮೃತ ಭಾರತಿ ವಿದ್ಯಾಕೇಂದ್ರದಲ್ಲಿ ಬುಧವಾರ ನಡೆದ ವಿದ್ಯಾರ್ಥಿ ಪರಿಷತ್ತಿನ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ್ ಶೆಣೈ ಪ್ರತಿಜ್ಞಾ ವಿಧಿ ನೆರವೇರಿಸಿ, ಸವಾಜದ ಮುಂದಿನ ಗುರುತರ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಪ್ರಧಾನಿ ನರೇಂದ್ರ ಮೋದಿಯಂತೆ ದಕ್ಷ ಆಡಳಿತ ವಿದ್ಯಾರ್ಥಿಗಳು ನಡೆಸಬೇಕು ಎಂದರು.

ಅಮೃತ ಭಾರತಿ ಟ್ರಸ್ಟ್ ಟ್ರಸ್ಟಿಗಳಾದ ಬಾಲಕೃಷ್ಣ ಮಲ್ಯ, ಸತೀಶ್ ಪೈ, ಶೈಲೇಶ್ ಕಿಣಿ, ಪ್ರಾಂಶುಪಾಲ ಅರುಣ್, ಮುಖ್ಯಶಿಕ್ಷಕಿಯರಾದ ಅನಿತಾ, ಶಕುಂತಲಾ ಉಪಸ್ಥಿತರಿದ್ದರು. ಅಸ್ಮಿತ ಸ್ವಾಗತಿಸಿದರು. ಧಾತ್ರಿ ಕಾರ್ಯಕ್ರಮ ನಿರೂಪಿಸಿದರು. ಭವಿಷ್ಯಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net