Oscar Awards: ಆಸ್ಕರ್​ ರೇಸ್​ಗೆ ಎಂಟ್ರಿ ಕೊಟ್ಟು ಎಕ್ಸಿಟ್​ ಆದ 10 ಭಾರತೀಯ ಚಿತ್ರಗಳಿವು! ಸಿನಿಪ್ರಿಯರಿಗೆ ಭಾರೀ ನಿರಾಸೆ

ವಿಜಯವಾಣಿ - 2025-03-03T134738.480
Published on

Oscar Awards: ಇಂದು (ಮಾ.03) ಬೆಳಗ್ಗೆ ಲಾಸ್​ ಏಂಜಲೀಸ್​ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆದ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಲವಾರು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಗಳ ಪಟ್ಟಿಯಲ್ಲಿ ‘ದಿ ಬ್ರೂಟಲಿಸ್ಟ್’ ಚಿತ್ರದ ಅದ್ಭುತ ಅಭಿನಯಕ್ಕಾಗಿ ನಟ ಆಡ್ರಿಯನ್ ಬ್ರಾಡಿ ಅವರು ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಸ್ವೀಕರಿಸಿದರೆ. ಅತ್ಯುತ್ತಮ ನಟಿ ವಿಭಾಗದಲ್ಲಿ ಮೈಕಿ ಮ್ಯಾಡಿಸನ್ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಭಾಜನರಾದರು.

ಈ ಸಾಲಿನಲ್ಲಿ ಬೆಸ್ಟ್​ ಲೈವ್​ ಆ್ಯಕ್ಷನ್​ ಕಿರುಚಿತ್ರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಬಾಲಿವುಡ್​ನ ‘ಅನುಜಾ’ ಚಿತ್ರ, 2025ರ ಆಸ್ಕರ್​ ಪ್ರಶಸ್ತಿಯನ್ನು ಕಳೆದುಕೊಂಡಿದ್ದು ಭಾರತೀಯರಲ್ಲಿ ತೀರ ನಿರಾಸೆ ಮೂಡಿತು. ಸ್ಟಾರ್​ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅನಿತಾ ಭಾಟಿಯಾ ನಿರ್ಮಾಣದಲ್ಲಿ ಮೂಡಿಬಂದ ಅನುಜಾ, ‘ಐ ಆಮ್ ನಾಟ್ ಎ ರೋಬೋಟ್’ ಸಿನಿಮಾ ವಿರುದ್ಧ ಸೋಲು ಕಂಡಿತು. ಇನ್ನು ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕಿ, ಅತ್ಯುತ್ತಮ ನಟಿ, ಚಿತ್ರಕಥೆ ಮತ್ತು ಸಂಕಲನ ಪ್ರಶಸ್ತಿ ಸೇರಿದಂತೆ ಒಟ್ಟು ಐದು ಪ್ರಶಸ್ತಿಗಳನ್ನು 'ಅನೋರಾ' ಚಿತ್ರವೊಂದೇ ಬಾಚಿಕೊಂಡಿದೆ. ಇದು ಚಿತ್ರಪ್ರೇಮಿಗಳ ಹುಬ್ಬೇರಿಸಿತು.

ಆಸ್ಕರ್​ ರೇಸ್​ನಲ್ಲಿ ಸ್ಪರ್ಧಿಸಿದ 10 ಭಾರತೀಯ ಚಿತ್ರಗಳಿವು

'ಸ್ವಾತಂತ್ರ್ಯ ವೀರ ಸಾವರ್ಕರ್', 'ಪುತುಲ್', 'ಆಡುಜೀವಿತಂ: ದಿ ಗೋಟ್​ ಲೈಫ್'​, 'ಆಲ್​ ವಿ ಇಮ್ಯಾಜಿನ್​ ಆಸ್​ ಲೈಟ್​', 'ಬ್ಯಾಂಡ್ ಆಫ್​ ಮಹಾರಾಜಾಸ್​', 'ಕಂಗುವ', 'ಅನುಜಾ', 'ಗರ್ಲ್ಸ್ ವಿಲ್ ಬಿ ಗರ್ಲ್ಸ್' ಮತ್ತು 'ಸಂತೋಷ್' ಚಿತ್ರಗಳು 2025ರ ಆಸ್ಕರ್​ ರೇಸ್​​ನಲ್ಲಿ ಸ್ಪರ್ಧಿಸಿತು. ಆದರೆ, ದುರಾದೃಷ್ಟ ಯಾವ ಚಿತ್ರಕ್ಕೂ ಆಸ್ಕರ್​ನ ಯಾವುದೇ ವಿಭಾಗಗಳಲ್ಲಿಯೂ​ ಪ್ರಶಸ್ತಿ ಲಭಿಸಿಲ್ಲ. ಇದು ಭಾರತೀಯ ಸಿನಿಪ್ರೇಕ್ಷಕರಲ್ಲಿ ಭಾರೀ ನಿರಾಸೆ ಮೂಡಿಸಿದೆ.

ಆಸ್ಕರ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

ಅತ್ಯುತ್ತಮ ನಟ - ಆಡ್ರಿಯನ್ ಬ್ರಾಡಿ (ದಿ ಬ್ರೂಟಲಿಸ್ಟ್)

ಅತ್ಯುತ್ತಮ ಪೋಷಕ ನಟ - ಕೀರನ್ ಕೈಲ್ ಕುಲ್ಕಿನ್ (ದಿ ರಿಯಲ್ ಪೇನ್)

ಅತ್ಯುತ್ತಮ ನಟಿ - ಮೈಕಿ ಮ್ಯಾಡಿಸನ್ (ಅನೋರಾ)

ಅತ್ಯುತ್ತಮ ಪೋಷಕ ನಟಿ - ಜೋವಾ ಸಲ್ಡಾನಾ (ಎಮಿಲಿಯಾ ಪೆರೆಜ್)

ಅತ್ಯುತ್ತಮ ನಿರ್ದೇಶಕ - ಅನೋರಾ (ಸೀನ್ ಬೇಕರ್)

ಅತ್ಯುತ್ತಮ ಚಿತ್ರ - ಅನೋರಾ (ಸೀನ್ ಬೇಕರ್)

ಅತ್ಯುತ್ತಮ ರೂಪಾಂತರಿತ ಚಿತ್ರಕಥೆ - ಕಾನ್ಕ್ಲೇವ್ (ಪೀಟರ್ ಸ್ಟ್ರಾಘನ್)

ಅತ್ಯುತ್ತಮ ವೇಷಭೂಷಣ ವಿನ್ಯಾಸ - ವಿಕೆಡ್ (ಪಾಲ್ ಟೇಜ್‌ವೆಲ್)

ಅತ್ಯುತ್ತಮ ಮೇಕಪ್, ಕೇಶವಿನ್ಯಾಸ - ದಿ ಸಬ್‌ಸ್ಟೆನ್ಸ್

ಅತ್ಯುತ್ತಮ ಸಂಕಲನ - ಅನೋರಾ (ಸೀನ್ ಬೇಕರ್)

ಅತ್ಯುತ್ತಮ ಛಾಯಾಗ್ರಹಣ - ದಿ ಬ್ರೂಟಲಿಸ್ಟ್ (ಲಾಲ್ ಕ್ರಾಲಿ)

ಅತ್ಯುತ್ತಮ ಸೌಂಡ್​ - ಡ್ಯೂನ್ 2

ಅತ್ಯುತ್ತಮ ಮೂಲ ಸಂಗೀತ - ದಿ ಬ್ರೂಟಲಿಸ್ಟ್ (ಡೇನಿಯಲ್ ಬ್ಲಂಬರ್ಗ್)

ಅತ್ಯುತ್ತಮ ಮೂಲ ಹಾಡು - ಎಲ್ ಮಾಲ್ (ಎಮಿಲಿಯಾ ಪೆರೆಜ್)

ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ - ದಿ ಓನ್ಲಿ ಗರ್ಲ್ ಇನ್ ದಿ ಆರ್ಕೆಸ್ಟ್ರಾ

ಅತ್ಯುತ್ತಮ ಸಾಕ್ಷ್ಯಚಿತ್ರ - ನೋ ಅದರ್ ಲ್ಯಾಂಡ್

ಅತ್ಯುತ್ತಮ ವಿಷ್ಯೂವಲ್​​ ಎಫೆಕ್ಟ್ಸ್​ - ಡ್ಯೂನ್ 2

ಅಂತರರಾಷ್ಟ್ರೀಯ ಚಲನಚಿತ್ರ - ಐಯಾಮ್ ಸ್ಟಿಲ್ ಹಿಯರ್ (ವಾಲ್ಟರ್ ಸಲ್ಲೆಸ್)

ಅತ್ಯುತ್ತಮ ಅನಿಮೇಟೆಡ್ ಸಿನಿಮಾ - ಫ್ಲೋ

ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ - ಇನ್ ದಿ ಶ್ಯಾಡೋ ಆಫ್ ದಿ ಸೈಪ್ರೆಸ್

ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ - ಐಯಾಮ್ ನಾಟ್ ಎ ರೋಬೋಟ್

ಅತ್ಯುತ್ತಮ ನಿರ್ಮಾಣ ವಿನ್ಯಾಸ - ವಿಕೆಡ್,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net