ಆಸೀಸ್​ ವಿರುದ್ಧ ಭಾರತಕ್ಕೆ ಸೋಲು ಖಚಿತ! ಆದ್ರೆ... ಸೆಮಿಫೈನಲ್​ ಪಂದ್ಯಕ್ಕೂ ಮುನ್ನವೇ ಮೈಕೆಲ್ ವಾನ್ ಭವಿಷ್ಯ | Champions Trophy 2025

ವಿಜಯವಾಣಿ - 2025-03-03T130811.403
Published on

Champions Trophy: ಪ್ರಸಕ್ತ ದುಬೈ ಮತ್ತು ಪಾಕಿಸ್ತಾನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದು ಸೆಮಿಫೈನಲ್​ಗೆ ಲಗ್ಗೆಯಿಟ್ಟಿರುವ ರೋಹಿತ್ ಶರ್ಮ ಪಡೆ, ತಮ್ಮ ನಾಲ್ಕನೇ ಪಂದ್ಯವನ್ನು ಬಲಿಷ್ಠ ತಂಡ ಎಂದೇ ಗುರುತಿಸಿಕೊಂಡಿರುವ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಈ ಪಂದ್ಯವೂ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಿಚ್​ ಕಂಡೀಷನ್​ ಹೇಗಿರಲಿದೆ? ಎಂಬ ಲೆಕ್ಕಾಚಾರಗಳು ಶುರುವಾಗಿವೆ.

ಬಾಂಗ್ಲಾದೇಶ, ಆತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ನಡೆದ ಮೂರು ಪಂದ್ಯಗಳನ್ನು ಸತತವಾಗಿ ಗೆದ್ದು ಬೀಗಿದ ಟೀಮ್ ಇಂಡಿಯಾ, ಸೆಮಿಫೈನಲ್ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ಜತೆ ಗೆಲುವಿಗಾಗಿ ಸೆಣಸಾಡಲಿದೆ. ಈ ಪಂದ್ಯಕ್ಕೂ ಮುನ್ನವೇ ಆಸೀಸ್​ಗೆ ಎಚ್ಚರಿಕೆ ನೀಡಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್, ರೋಹಿತ್ ಶರ್ಮ ಪಡೆಯನ್ನು ಮಣಿಸಿ, ನೇರವಾಗಿ ಫೈನಲ್​ ಪ್ರವೇಶಿಸಬೇಕು. ಫೈನಲ್‌ನಲ್ಲಿ ಸ್ಥಾನ ಪಡೆಯುವ ಸಾಮರ್ಥ್ಯ ಆಸ್ಟ್ರೇಲಿಯಾಕ್ಕೆ ಮಾತ್ರ ಇದೆ ಎಂದಿದ್ದಾರೆ. ಸದ್ಯ ವಾನ್​ ಹೇಳಿಕೆ ಪರೋಕ್ಷವಾಗಿ ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿದೆ.

ಮೊದಲ ಸೆಮಿಫೈನಲ್‌ನಲ್ಲಿ ಗ್ರೂಪ್ ಎ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ, ಇದೇ ಮಾರ್ಚ್ 4ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗ್ರೂಪ್ ಬಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಎರಡನೇ ಸೆಮಿಫೈನಲ್‌ನಲ್ಲಿ ಗ್ರೂಪ್ ಬಿ ಪಟ್ಟಿಯಲ್ಲಿರುವ ದಕ್ಷಿಣ ಆಫ್ರಿಕಾ ಮಾರ್ಚ್ 5ರಂದು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಗ್ರೂಪ್ ಎ ರನ್ನರ್ ಅಪ್ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

"ಭಾರತವನ್ನು ಮಣಿಸುವ ಸಾಮರ್ಥ್ಯವಿರುವ ತಂಡವು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುತ್ತದೆ. ಆ ಸಾಮರ್ಥ್ಯ ಆಸ್ಟ್ರೇಲಿಯಾಗೆ ಮಾತ್ರ ಇರೋದು. ಆದ್ರೆ, ದುಬೈ ಕಂಡೀಷನ್​ ಹೇಗಿರಲಿದೆ ಎಂಬುದು ಬಹಳ ಮುಖ್ಯ. ಸತತ ಮೂರು ಪಂದ್ಯಗಳನ್ನು ಒಂದೇ ಪಿಚ್​ನಲ್ಲಿ ಆಡಿರುವ ರೋಹಿತ್ ಶರ್ಮ ಪಡೆಗೆ ದುಬೈ ಅನುಕೂಲಕರವಾಗಬಹುದು" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net