More

    ಹೆಚ್ಚಿತು ಭಾರತದ ‘ತೇಜಸ್ಸು’! ಸ್ವದೇಶೀ ನಿರ್ಮಿತ ಯುದ್ಧ ವಿಮಾನಗಳಿಗೆ ವಿದೇಶದಲ್ಲಿ ಭಾರೀ ಬೇಡಿಕೆ…

    ಬೆಂಗಳೂರು: ಏಷ್ಯಾದ ಅತೀ ದೊಡ್ಡ ಏರೋ ಶೋ ಬೆಂಗಳೂರಿನಲ್ಲಿ ನಡೆಯುತ್ತಿದ್ದು ಈಗಾಗಲೇ ಭಾರತ ನಿರ್ಮಿತ ಯುದ್ಧ ವಿಮಾನಗಳಿಗೆ ಬೇಡಿಕೆ ಶುರುವಾಗಿದೆ! ಹೌದು. ಇದೀಗ ತೇಜಸ್​ ಯುದ್ಧ ವಿಮಾನವನ್ನು ಖರೀದಿಸಲು ಅರ್ಜೆಂಟೀನಾ, ಮಲೇಷ್ಯಾ ಈಜಿಪ್ಟ್​ ಮುಂತಾದ ದೇಶಗಳು ಸರತಿ ಸಾಲಿನಲ್ಲಿ ನಿಲ್ಲಲು ತಯಾರಾಗಿವೆ.

    ಎಲ್​ಸಿಎ ತೇಜಸ್​ ಹಗುರ ಯುದ್ಧ ವಿಮಾನವಾಗಿದ್ದು ಇದನ್ನು ಬಳಸಿಕೊಂಡು ಅತೀ ವೇಗವಾಗಿ ಶತ್ರು ದೇಶದ ಒಳಕ್ಕೆ ನುಗ್ಗಿ ದಾಳಿ ಮಾಡಿ ಅಷ್ಟೇ ವೇಗದಲ್ಲಿ ಹಿಂತಿರುಗಿ ಬರಬಹುದು. ಅಂತಹ ಯುದ್ಧ ವಿಮಾನವನ್ನೇ ಹುಡುಕಾಡುತ್ತಿರುವ ಮಲೇಷ್ಯಾ, ಈಜಿಪ್ಟ್​ ಮುಂತಾದ ದೇಶಗಳು ಭಾರತದ ಬಳಿಗೆ ಆಗಮಿಸಿವೆ. ಈಗ ಮಲೇಷ್ಯಾದಿಂದ ತೇಜಸ್​ ಯುದ್ಧ ವಿಮಾನಕ್ಕೆ ಬೇಡಿಕೆ ಬಂದಿದ್ದು ಕಾಂಟ್ರಾಕ್ಟ್ ಸಿಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಎಚ್​ಎಎಲ್ ಎಂಡಿ ಸಿಎಂಡಿ ಅನಂತಕೃಷ್ಣನ್, ‘ಅರ್ಜಂಟೈನಾ, ಈಜಿಫ್ಟ್ ಜೊತೆಗೂ ಮಾತುಕತೆ ನಡೆಯುತ್ತಿದ್ದು ಅವರ ಇಂಜಿನಿಯರ್ ನಮ್ಮಲ್ಲಿಗೆ ಬಂದು ಚರ್ಚಿಸಿದ್ದಾರೆ. ಸಾಕಷ್ಟು ಆರ್ಡರ್ ಸಿಗುವ ನಿರೀಕ್ಷೆ ಇದೆ. ಎಚ್​ಎಎಲ್ ಉಪಕರಣಗಳಿಗೆ ಡಿಮ್ಯಾಂಡ್ ಹೆಚ್ಚುತ್ತಿದೆ. ಅರ್ಜಂಟೈನಾದಿಂದ 15 LCA ಏರ್ ಕ್ರಾಫ್ಟ್ ಗೆ ಬೇಡಿಕೆ ಬಂದಿದೆ’ ಎಂದು ಹೇಳಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts