

ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion) ಎಂದು ಕರೆಯುತ್ತೇವೆ.
ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಅದರಲ್ಲಿ ತೊಡಗುತ್ತಾರೆ. ನೆಟಿಗ್ಗವರು ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ. ತಮ್ಮನ್ನು ಮನರಂಜಿಸುವ ಮೋಜಿನ ಮಾರ್ಗವಾಗಿದೆ ಮತ್ತು ಸ್ನೇಹಿತರೊಂದಿಗೆ ತಮ್ಮ ಬುದ್ಧಿವಂತಿಕೆಯನ್ನು ಸಾಬೀತುಪಡಿಸುವ ಮಾರ್ಗವಾಗಿದೆ ಎಂದು ಭಾವಿಸುತ್ತಾರೆ. ಇದರ ಹೊರತಾಗಿ, ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಆಪ್ಟಿಕಲ್ ಇಲ್ಯೂಷನ್ಗಳು ಸಹ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.
ನಿಮ್ಮ ವೀಕ್ಷಣಾ ಕೌಶಲ್ಯವನ್ನು ಹೆಚ್ಚಿಸಲು ನೀವು ಬಯಸುವಿರಾ? ಹಾಗಾದರೆ, ಈ ಸವಾಲನ್ನು ಸ್ವೀಕರಿಸಿ….
ಭಾರತೀಯ ಅರಣ್ಯಾಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ನಲ್ಲಿ ಆನೆಗಳ ಹಿಂಡು ನೀರು ಕುಡಿಯುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಎಷ್ಟು ಆನೆಗಳಿವೆ? ಎಂದು ಪ್ರಶ್ನಿಸುವ ಮೂಲಕ ನೆಟ್ಟಿಗರಿಗೆ ಟಾಸ್ಕ್ ನೀಡಿದ್ದಾರೆ. ಅಂದಹಾಗೆ ಫೋಟೋದಲ್ಲಿ ಆನೆಗಳ ಹಿಂಡು ಕೊಳದ ಒಂದು ಬದಿಯಲ್ಲಿ ಸಾಲಾಗಿ ನಿಂತು ನೀರು ಕುಡಿಯುತ್ತಿವೆ. ಕೆಲವೊಂದು ಆನೆಗಳು ಫೋಟೋದಲ್ಲಿ ಮರೆಯಾಗಿದ್ದು, ಅಲ್ಲಿ ಎಷ್ಟು ಆನೆಗಳಿವೆ ಎಂಬುದು ಗುರುತಿಸುವುದು ಕಷ್ಟಕರವಾಗಿದೆ. ಫೋಟೋ ಸಿಕ್ಕಾಪಟ್ಟೆ ಗೊಂದಲ ಉಂಟು ಮಾಡುತ್ತದೆ.
ನೀವೇನಾದರೂ ಈ ಫೋಟೋದಲ್ಲಿ ಆನೆಗಳ ಸಂಖ್ಯೆ ಎಷ್ಟಿದೆ ಎಂಬುದನ್ನು ಸರಿಯಾಗಿ ಗುರುತಿಸಿದರೆ, ನಿಮ್ಮ ಕಣ್ಣಿನ ಸಾಮರ್ಥ್ಯಕ್ಕೆ ಫುಲ್ ಮಾರ್ಕ್ಸ್ ಕೊಟ್ಟುಬಿಡಿ. ಏಕೆಂದರೆ, ಶೇ. 95 ಮಂದಿ ಸರಿಯಾದ ಉತ್ತರ ನೀಡುವಲ್ಲಿ ವಿಫಲರಾಗಿದ್ದಾರೆ. ಒಂದು ವೇಳೆ ಎಷ್ಟು ಆನೆಗಳಿವೆ ಎಂಬುದನ್ನು ಗುರುತಿಸಲು ಸಾಧ್ಯವಾಗದೇ ಇದ್ದರೆ ಯೋಚಿಸ ಬೇಡಿ ಉತ್ತರ ಮುಂದಿದೆ ಓದಿ.
ಫೋಟೋದಲ್ಲಿ ಆನೆಗಳ ಸಂಖ್ಯೆ ಎಷ್ಟಿದೆ ಎಂಬುದಕ್ಕೆ ಸುಶಾಂತ್ ನಂದಾ ಅವರ ಉತ್ತರ ನೀಡಿದ್ದಾರೆ. ಮತ್ತೊಂದು ಟ್ವೀಟ್ ಮಾಡಿರುವ ಸುಶಾಂತ್ ನಂದಾ, ವೈಲ್ಡ್ಲೆನ್ಸ್ ಇಕೋ ಫೌಂಡೇಶನ್, ಈ ಅದ್ಭುತ ಸಿಂಕ್ರೊನೈಸ್ ಮಾಡಿದ ಫ್ರೇಮ್ ಅನ್ನು ತೆಗೆದುಕೊಳ್ಳಲು 20 ನಿಮಿಷಗಳಲ್ಲಿ ಸುಮಾರು 1400 ಫೋಟೋಗಳನ್ನು ತೆಗೆದುಕೊಂಡಿದೆ. ಸಾಕಷ್ಟು ಶ್ರಮವಹಿಸಿದ ಬಳಿಕ ಈ ಫೋಟೋದಲ್ಲಿ ವಿವಿಧ ವಯೋಮಾನದ ಮತ್ತು ಗಾತ್ರದ 7 ಆನೆಗಳಿವೆ ಎಂಬುದನ್ನು ಪತ್ತೆಹಚ್ಚಿದೆ. ನಿಜಕ್ಕೂ ಪತ್ತೆಹಚ್ಚುವುದು ತುಂಬಾ ಕಷ್ಟವಾಗಿದೆ. ಆದರೂ ಕೆಲವರು ಸರಿಯಾಗಿ ಗುರುತಿಸಿದ್ದಾರೆ. ನಿಜಕ್ಕೂ ಅವರ ಗ್ರೇಟ್ ಎಂದಿದ್ದಾರೆ. (ಏಜೆನ್ಸೀಸ್)