More

    ನಿಮ್ಮ ಕಣ್ಣಿಗೊಂದು ಸವಾಲು: ಸಾಧ್ಯವಾದ್ರೆ ಈ ಫೋಟೋದಲ್ಲಿರೋ ನೀರಿನ ಬಾಟಲ್​ ಗುರುತಿಸಿ

    ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (ಆಪ್ಟಿಕಲ್​ ಇಲ್ಯೂಶನ್​) ಎಂದು ಕರೆಯುತ್ತೇವೆ.

    ಇದನ್ನೂ ಓದಿ: ಪರೀಕ್ಷೆ ಸಮಯದಲ್ಲೂ ನೆಮ್ಮದಿ ಹೇಗೆ!?; ಇಲ್ಲಿದೆ ಮಕ್ಕಳಿಗೆ ಸಲಹೆ-ಸೂಚನೆ

    ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಅದರಲ್ಲಿ ತೊಡಗುತ್ತಾರೆ. ನೆಟ್ಟಿಗರು ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ. ತಮ್ಮನ್ನು ಮನರಂಜಿಸುವ ಮೋಜಿನ ಮಾರ್ಗವಾಗಿದೆ ಮತ್ತು ಸ್ನೇಹಿತರೊಂದಿಗೆ ತಮ್ಮ ಬುದ್ಧಿವಂತಿಕೆಯನ್ನು ಸಾಬೀತುಪಡಿಸುವ ಮಾರ್ಗವಾಗಿದೆ ಎಂದು ಭಾವಿಸುತ್ತಾರೆ. ಇದರ ಹೊರತಾಗಿ, ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಆಪ್ಟಿಕಲ್ ಇಲ್ಯೂಷನ್​ಗಳು ಸಹ ಪ್ರಯೋಜನಕಾರಿ ಎಂದು ಸಾಬೀತಾಗಿದೆ.

    ನಿಮ್ಮ ವೀಕ್ಷಣಾ ಕೌಶಲ್ಯವನ್ನು ಹೆಚ್ಚಿಸಲು ನೀವು ಬಯಸುವಿರಾ? ಹಾಗಾದರೆ, ಈ ಸವಾಲನ್ನು ಸ್ವೀಕರಿಸಿ….

    Spot the bottle in Macaw 1

    ಸದ್ಯ ವೈರಲ್​ ಆಗಿರುವ ಫೋಟೋದಲ್ಲಿ ಮಕಾವ್ (ಅಮೆರಿಕದ ಒಂದು ಜಾತಿಯ ಗಿಣಿ) ಪಕ್ಷಿಯು ಕೆಳಗೆ ನೇತಾಡುತ್ತಿರುವಂತೆ ಗೋಚರವಾಗುತ್ತದೆ. ಫೋಟೋದ ಒಂದು ಭಾಗದಲ್ಲಿ ಒಂದು ನೀರಿನ ಬಾಟಲ್​ ಇದೆ. ಆದರೆ, ಅದನ್ನು ಪತ್ತೆಹಚ್ಚುವುದು ಸುಲಭದ ಮಾತಲ್ಲ. ಪಕ್ಷಿಯ ಬಣ್ಣದ ಜೊತೆ ನೀರಿನ ಬಾಟಲ್ ಬಣ್ಣ ಬೆರೆತು ಹೋಗಿದ್ದು, ಪತ್ತೆ ಹಚ್ಚುವುದು ಕಷ್ಟಕರ ಎನಿಸುತ್ತದೆ. ಆದರೆ, ಸೂಕ್ಷ್ಮವಾಗಿ ನೋಡಿದರೆ ಬಾಟಲ್​ ಪತ್ತೆ ಹಚ್ಚಬಹುದು. ನಿಮಗೆ 10 ಸೆಕೆಂಡ್​ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಆ ಬಾಟಲ್​ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ ಶುರು.

    ಇದನ್ನೂ ಓದಿ: ನಾಳೆ ದ್ವಿತೀಯ ಪಿಯು ಪರೀಕ್ಷೆ ಆರಂಭ; 35 ಪರೀಕ್ಷಾ ಕೇಂದ್ರದಲ್ಲಿ ಸಕಲ ಸಿದ್ಧತೆ

    10 ಸೆಕೆಂಡ್​ ಸಮಯದಲ್ಲಿ ನೀವು ನೀರಿನ ಬಾಟಲ್​ ಅನ್ನು ಫೋಟೋದಲ್ಲಿ ಗುರುತಿಸಿದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್​ ಮಾರ್ಕ್ಸ್​ ಕೊಟ್ಟುಬಿಡಿ. ಒಂದು ವೇಳೆ ನೀರಿನ ಬಾಟಲ್​ ಗುರುತಿಸಲು ಸಾಧ್ಯವಾಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ. (ಏಜೆನ್ಸೀಸ್​)

    Spot the bottle in Macaw 2

    ನಿಮ್ಮ ಕಣ್ಣಿಗೊಂದು ಸವಾಲು: ಜೀನಿಯಸ್​ ಮಾತ್ರ ಈ ಫೋಟೋದಲ್ಲಿರುವ ಜಿಂಕೆಯನ್ನು ಪತ್ತೆಹಚ್ಚಲು ಸಾಧ್ಯ!

    ಕಣ್ಣಿಗೊಂದು ಸವಾಲು: ತೀಕ್ಷ್ಣ ದೃಷ್ಟಿ ಹೊಂದಿರುವವರು ಮಾತ್ರ ಈ ಫೋಟೋದಲ್ಲಿರೋ ಜಿಂಕೆ ಗುರುತಿಸಲು ಸಾಧ್ಯ!

    ನಿಮ್ಮ ಕಣ್ಣಿಗೊಂದು ಸವಾಲು: ಈ ಫೋಟೋದಲ್ಲಿ ಕುರಿಗಳ ಹಿಂಡಿನ ಮಧ್ಯೆ ಇರುವ ತೋಳವನ್ನು ಪತ್ತೆ ಹಚ್ಚುವಿರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts