More

    ನಿಮ್ಮ ಕಣ್ಣಿಗೊಂದು ಸವಾಲ್​: ಈ ಚಿತ್ರದಲ್ಲಿರುವುದೇನು? ಬೀಚ್​ ಅಂದುಕೊಂಡರೆ ನಿಮ್ಮ ಊಹೆ ತಪ್ಪು!

    ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವ ಹಾಗೂ ಗೊಂದಲ ಮೂಡಿಸುವ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರನ್ನು ‘ದಿಗ್ಭ್ರಮೆ’ ಮತ್ತು ‘ಗೊಂದಲ’ಕ್ಕೀಡುಮಾಡಿದೆ.

    ಫೋಟೋದಲ್ಲಿ ಏನಿದೆ?: ಚಿತ್ರದ ಮೊದಲ ನೋಟದಲ್ಲಿ ನಮಗೆ ಸಮುದ್ರ ತೀರದಂತೆ ಗೋಚರವಾಗುತ್ತದೆ. ಸಂಜೆ ಸಮಯದಲ್ಲಿ ಸೆರೆಹಿಡಿಯಲಾದ ತೀರ ಪ್ರದೇಶದ ಚಿತ್ರ ಎಂಬಂತೆ ಕಾಣುತ್ತದೆ. ಆದರೆ, ಚಿತ್ರವನ್ನು ತುಂಬಾ ಹತ್ತಿರದಿಂದ ನೋಡಿದಾಗ ನಿಜಕ್ಕೂ ಆ ಚಿತ್ರದಲ್ಲಿರುವುದು ಏನೆಂಬುದು ತಿಳಿಯುತ್ತದೆ.

    ವಾಸ್ತವವಾಗಿ ಆ ಚಿತ್ರದಲ್ಲಿರುವುದು ಸಮುದ್ರವಂತೂ ಅಲ್ಲ. ಹಾನಿಯಾಗಿರುವ ಮತ್ತು ರಿಪೇರಿಯ ಅವಶ್ಯಕತೆ ಇರುವ ಕಾರಿನ ಬಾಗಿಲ ಚಿತ್ರ ಎಂಬುದು ತಿಳಿಯುತ್ತದೆ. ಆದರೆ, ನೋಡಲು ಮಾತ್ರ ಥೇಟ್​ ತೀರ ಪ್ರದೇಶದಂತಿರುವುದು ಅಚ್ಚರಿಯೇ ಸರಿ.

    ಇನ್ನು ಈ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಫೋಟೋ ನೋಡಿ ನಿಜಕ್ಕೂ ಗೊಂದಲ್ಲಕ್ಕೀಡಾದೆವು. ಮೊದಲು ಸಮುದ್ರ ತೀರವೆಂದೇ ಭಾವಿಸಿದೆವು ಎಂದಿದ್ದಾರೆ. ಫೋಟೋ ನೋಡಿದ ನಿಮಗೂ ಅದೇ ಅನುಭವವಾಗಿದ್ದರೆ, ಕಾಮೆಂಟ್​ ಮಾಡಿ ತಿಳಿಸಿ. (ಏಜೆನ್ಸೀಸ್​)

    ದೇವಾಲಯದ ಆವರಣ ಶುಚಿಗೊಳಿಸಲು ಹೋಗಿ ಎಡವಟ್ಟು: ಹಳೆಬೀಡಿನ ಐತಿಹಾಸಿಕ ವಿಗ್ರಹಗಳಿಗೆ ಹಾನಿ

    VIDEO| ಇದ್ದರೆ ಇಂತಹ ನಿಜವಾದ ಪ್ರೇಮಿ ಇರಬೇಕು: ಕಣ್ಣೀರು ತರಿಸುತ್ತೇ ಈ ಲವ್ ಸ್ಟೋರಿ!

    ಪ್ರೇಮಿಗಳ ದಿನದಂದು ಸತಿಪತಿಗಳಾದ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ತಾರಾ ಜೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts