More

    ಈ ಫೋಟೋದಲ್ಲಿರೋ ಚಿರತೆ ಪತ್ತೆಹಚ್ಚುವಲ್ಲಿ ಶೇ. 90 ಮಂದಿ ಫೇಲ್​! ಸಾಧ್ಯವಾದ್ರೆ ನೀವು ಪತ್ತೆ ಹಚ್ಚಿ…

    ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

    ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಅದರಲ್ಲಿ ತೊಡಗುತ್ತಾರೆ. ನೆಟಿಗ್ಗವರು ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ. ತಮ್ಮನ್ನು ಮನರಂಜಿಸುವ ಮೋಜಿನ ಮಾರ್ಗವಾಗಿದೆ ಮತ್ತು ಸ್ನೇಹಿತರೊಂದಿಗೆ ತಮ್ಮ ಬುದ್ಧಿವಂತಿಕೆಯನ್ನು ಸಾಬೀತುಪಡಿಸುವ ಮಾರ್ಗವಾಗಿದೆ ಎಂದು ಭಾವಿಸುತ್ತಾರೆ. ಇದರ ಹೊರತಾಗಿ, ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಆಪ್ಟಿಕಲ್ ಇಲ್ಯೂಷನ್​ಗಳು ಸಹ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

    ನಿಮ್ಮ ವೀಕ್ಷಣಾ ಕೌಶಲ್ಯವನ್ನು ಹೆಚ್ಚಿಸಲು ನೀವು ಬಯಸುವಿರಾ? ಹಾಗಾದರೆ, ಈ ಸವಾಲನ್ನು ಸ್ವೀಕರಿಸಿ….

    ಈ ಫೋಟೋದಲ್ಲಿರೋ ಚಿರತೆ ಪತ್ತೆಹಚ್ಚುವಲ್ಲಿ ಶೇ. 90 ಮಂದಿ ಫೇಲ್​! ಸಾಧ್ಯವಾದ್ರೆ ನೀವು ಪತ್ತೆ ಹಚ್ಚಿ…

    ಸದ್ಯ ವೈರಲ್​ ಆಗಿರುವ ಫೋಟೋದಲ್ಲಿ ನೀವು ಅಲ್ಲಲ್ಲಿ ಹಿಮ ಬಿದ್ದಿರುವ ಬೆಟ್ಟದ ಒಂದು ಭಾಗವನ್ನು ನೋಡಬಹುದು. ಫೋಟೋದ ಒಂದು ಭಾಗದಲ್ಲಿ ಹಿಮ ಚಿರತೆ ಒಂದು ಮಲಗಿದೆ. ಆದರೆ, ಅದನ್ನು ಪತ್ತೆಹಚ್ಚುವುದು ಸುಲಭದ ಮಾತಲ್ಲ. ಏಕೆಂದರೆ, ಬೆಟ್ಟದ ಬಣ್ಣಕ್ಕೂ ಮತ್ತು ಚಿರತೆ ಬಣ್ಣಕ್ಕೂ ಸಾಮ್ಯತೆ ಇದೆ. ಒಂದನ್ನೊಂದು ಬೆರೆತು ಹೋಗಿವೆ. ನಿಮಗೆ 10 ಸೆಕೆಂಡ್​ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಆ ಹಿಮಚಿರತೆ ಫೋಟೋದ ಯಾವ ಭಾಗದಲ್ಲಿದೆ ಎಂಬುದನ್ನು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ ಶುರು.

    10 ಸೆಕೆಂಡ್​ ಸಮಯದಲ್ಲಿ ನೀವು ಫೋಟೋದಲ್ಲಿ ಹಿಮಚಿರತೆಯನ್ನು ಗುರುತಿಸಿದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್​ ಮಾರ್ಕ್ಸ್​ ಕೊಟ್ಟುಬಿಡಿ. ಒಂದು ವೇಳೆ ಹಿಮಚಿರತೆಯನ್ನು ಗುರುತಿಸಲು ಸಾಧ್ಯವಾಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ. (ಏಜೆನ್ಸೀಸ್​)

    ಈ ಫೋಟೋದಲ್ಲಿರೋ ಚಿರತೆ ಪತ್ತೆಹಚ್ಚುವಲ್ಲಿ ಶೇ. 90 ಮಂದಿ ಫೇಲ್​! ಸಾಧ್ಯವಾದ್ರೆ ನೀವು ಪತ್ತೆ ಹಚ್ಚಿ…

    ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡಲು ರೆಡಿಯಾದ ಸಂಸದೆ ಸುಮಲತಾ ಅಂಬರೀಷ್​ಗೆ ಬಿಗ್ ಶಾಕ್!

    ಉತ್ತರ ಪ್ರದೇಶ ಮೂಲದ ಯುವ ವೈದ್ಯೆ ಸಾವಿಗೆ ಶರಣು: ಪಾಗಲ್​ ಪ್ರೇಮಿ ಕೊಟ್ಟ ಕಾಟಕ್ಕೆ ಬೇಸತ್ತು ಬದುಕಿಗೆ ಅಂತ್ಯ

    ಹೈಕೋರ್ಟ್​ ಚಾಟಿ ಬೀಸಿದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ: 2 ವಾರದ ಒಳಗೆ ಸಮವಸ್ತ್ರ ವಿತರಣೆಗೆ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts