More

    ಈ ಫೋಟೋದಲ್ಲಿರುವ ಹೆಬ್ಬಾವನ್ನು ಪತ್ತೆಹಚ್ಚುವಿರಾ? ಶೇ.99 ಮಂದಿಯ ಕೈಯಲ್ಲಿ ಆಗಿಲ್ಲ!

    ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ದೃಷ್ಟಿ ಭ್ರಮೆ ಎಂದರೇನು?

    ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

    ಇದನ್ನೂ ಓದಿ: ನಿನ್ನಾಕಿ ಹೃದಯದಲ್ಲಿರಲಿ…ಗಾಡಿ ನಂಬರ್​ ಪ್ಲೇಟ್ ಮೇಲಲ್ಲ! ಬೈಕ್​ ಸವಾರನಿಗೆ ಸಂಚಾರಿ ಪೊಲೀಸರ ಶಾಕ್​

    ಮೋಜಿನ ಮಾರ್ಗ

    ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಅದರಲ್ಲಿ ತೊಡಗುತ್ತಾರೆ. ನೆಟ್ಟಿಗರು ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ. ತಮ್ಮನ್ನು ಮನರಂಜಿಸುವ ಮೋಜಿನ ಮಾರ್ಗವಾಗಿದೆ ಮತ್ತು ಸ್ನೇಹಿತರೊಂದಿಗೆ ತಮ್ಮ ಬುದ್ಧಿವಂತಿಕೆಯನ್ನು ಸಾಬೀತುಪಡಿಸುವ ಮಾರ್ಗವಾಗಿದೆ ಎಂದು ಭಾವಿಸುತ್ತಾರೆ. ಇದರ ಹೊರತಾಗಿ, ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಆಪ್ಟಿಕಲ್ ಇಲ್ಯೂಷನ್​ಗಳು ಸಹ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

    ನಿಮ್ಮ ವೀಕ್ಷಣಾ ಕೌಶಲ್ಯವನ್ನು ಹೆಚ್ಚಿಸಲು ನೀವು ಬಯಸುವಿರಾ? ಹಾಗಾದರೆ, ಈ ಸವಾಲನ್ನು ಸ್ವೀಕರಿಸಿ….

    Huge Python 2

    ಸದ್ಯ ವೈರಲ್​​​ ಆಗಿರುವ ಫೋಟೋದಲ್ಲಿ ಗಿಡಗಳು ಒಂದಕ್ಕೊಂದು ಅಂಟಿಕೊಂಡಂತೆ ಇರುವ ಹಸಿರಿನ ಭಾಗವನ್ನು ನೀವು ನೋಡಬಹುದು. ಅವುಗಳ ನಡುವೆ ಒಂದು ಹೆಬ್ಬಾವು ಸೇರಿಕೊಂಡಿದೆ. ಅದು ಎಲ್ಲಿದೆ ಎಂಬುವನ್ನು ಪತ್ತೆಹಚ್ಚಬೇಕು. ಆದರೆ, ಪತ್ತೆಹಚ್ಚುವುದು ಸುಲಭವಲ್ಲ. ಏಕೆಂದರೆ, ಅಷ್ಟು ಸುಲಭವಾಗಿ ಹೆಬ್ಬಾವು ಕಾಣುವುದಿಲ್ಲ. ಹಸಿರಿನ ನಡುವೆ ಅಡಗಿ ಕುಳಿತಿದೆ. ಬಣ್ಣದ ಸಾಮ್ಯತೆ ಇರುವುದರಿಂದ ನೋಡುಗರಲ್ಲಿ ಗೊಂದಲ ಸೃಷ್ಟಿಸುತ್ತದೆ. ಆದರೆ, ಸೂಕ್ಷ್ಮವಾಗಿ ಗಮನಿಸಿದರೆ ಹೆಬ್ಬಾವು ಎಲ್ಲಿದೆ ಎಂಬುದನ್ನು ಪತ್ತೆಹಚ್ಚಬಹುದು. ನಿಮಗೆ 10 ಸೆಕೆಂಡ್​ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಫೋಟೋದಲ್ಲಿರುವ ಹೆಬ್ಬಾವನ್ನು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ ಶುರು.

    ಇದನ್ನೂ ಓದಿ: ವಿಪಕ್ಷ ನಾಯಕನ ಸ್ಥಾನಕ್ಕೂ ರೇಟ್ ಫಿಕ್ಸ್? ಸಚಿವ ಎಂ.ಬಿ. ಪಾಟೀಲ ಪ್ರತಿಕ್ರಿಯೆ; ಪರೋಕ್ಷವಾಗಿ ಯತ್ನಾಳಗೆ ಟಾಂಗ್

    10 ಸೆಕೆಂಡ್​ ಸಮಯದಲ್ಲಿ ನೀವು ಫೋಟೋದಲ್ಲಿರುವ ಹೆಬ್ಬಾವನ್ನು ಪತ್ತೆಹಚ್ಚಿದ್ದರೆ, ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್​ ಮಾರ್ಕ್ಸ್​ ಕೊಟ್ಟುಬಿಡಿ. ಒಂದು ವೇಳೆ ಹೆಬ್ಬಾವನ್ನು ಗುರುತಿಸಲು ಸಾಧ್ಯವಾಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ. (ಏಜೆನ್ಸೀಸ್​)

    Huge Python 3

    ಈ ಫೋಟೋದಲ್ಲಿರುವ ಶ್ವಾನವನ್ನು 15 ಸೆಕೆಂಡ್​ನಲ್ಲಿ ಗುರುತಿಸುವಿರಾ? ಶೇ.90 ಮಂದಿಯ ಕೈಯಲ್ಲಿ ಆಗಿಲ್ಲ!

    ಕಣ್ಣಿಗೊಂದು ಸವಾಲು: ತೀಕ್ಷ್ಣ ದೃಷ್ಟಿ ಹೊಂದಿರುವವರು ಮಾತ್ರ ಈ ಫೋಟೋದಲ್ಲಿರೋ ಜಿಂಕೆ ಗುರುತಿಸಲು ಸಾಧ್ಯ!

    ನಿಮ್ಮ ಕಣ್ಣಿಗೊಂದು ಸವಾಲು! ಸಾಧ್ಯವಾದ್ರೆ ಈ ಚಿತ್ರದಲ್ಲಿ ಅಡಗಿರುವ ಚಿರತೆಯನ್ನು ಪತ್ತೆ ಹಚ್ಚಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts