More

    ನಿನ್ನಾಕಿ ಹೃದಯದಲ್ಲಿರಲಿ…ಗಾಡಿ ನಂಬರ್​ ಪ್ಲೇಟ್ ಮೇಲಲ್ಲ! ಬೈಕ್​ ಸವಾರನಿಗೆ ಸಂಚಾರಿ ಪೊಲೀಸರ ಶಾಕ್​

    ಧಾರವಾಡ: ವಾಹನಗಳ ನಂಬರ್​ ಪ್ಲೇಟ್​ ಮೇಲೆ ಏನನ್ನೂ ಬರೆಯಬಾರದು ಎಂಬ ನಿಯಮವಿದೆ. ಆದರೆ, ನಿಯಮಗಳು ಇರುವುದೇ ಅವುಗಳನ್ನು ಮುರಿಯಲು ಎಂದು ಕೆಲವರು ಉದ್ಧಟತನ ಪ್ರದರ್ಶಿಸುತ್ತಾರೆ. ನಂಬರ್​ ಪ್ಲೇಟ್​ ಮೇಲೆ, ತಂದೆ-ತಾಯಿ ಪ್ರೀತಿಯ ಸಾಲುಗಳು, ಪ್ರೀತಿಯ ಸಂದೇಶ ಹಾಗೂ ದೇವರ ಕೃಪೆ ಸೇರಿದಂತೆ ವಿವಿಧ ಬಗೆಯಲ್ಲಿ ಬರೆಸಿಕೊಂಡಿರುತ್ತಾರೆ.

    ನಂಬರ್​ ಪ್ಲೇಟ್​ ಮೇಲೆ ಏನಾದರೂ ಬರೆಸಿದರೆ ಅದನ್ನು ಡಿಫೆಕ್ಟಿವ್ ನಂಬರ್​ ಪ್ಲೇಟ್ ಎಂದು ಪರಿಗಣಿಸಲಾಗುತ್ತದೆ. ಇದು ಕಾನೂನುಬಾಹಿರವಾಗಿದ್ದು, ಭಾರೀ ದಂಡ ತೆರಬೇಕಾಗುತ್ತದೆ. ಈ ಬಗ್ಗೆ ಪೊಲೀಸರು ಸಾಕಷ್ಟು ತಿಳುವಳಿಕೆ ಮೂಡಿಸಿದರೂ ಕೆಲವರು ಈಗಲೂ ನಂಬರ್​ ಪ್ಲೇಟ್​ ಮೇಲೆ ಏನೇನೋ ಬರೆಸಿಕೊಂಡು ಓಡಾಡುತ್ತಿದ್ದಾರೆ. ಇದೀಗ ಹುಬ್ಬಳ್ಳಿಯ ವಾಹನ ಸವಾರನೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ದಂಡ ತೆತ್ತಿದ್ದಾನೆ. ಅಲ್ಲದೆ, ಹುಬ್ಬಳ್ಳಿ ಧಾರವಾಡ ನಗರ ಪೊಲೀಸರು ಬೈಕ್​ ಸವಾರನಿಗೆ ಬುದ್ಧಿ ಹೇಳಿದ್ದಾರೆ.

    ಇದನ್ನೂ ಓದಿ: ಪಾಕ್​ ಸುಂದರಿಗೆ ಮಾರುಹೋಗಿ ರಕ್ಷಣಾ ವ್ಯವಸ್ಥೆಯ ಮಾಹಿತಿ ಸೋರಿಕೆ: ಡಿಆರ್​ಡಿಒ ವಿಜ್ಞಾನಿ ವಿರುದ್ಧ ಚಾರ್ಜ್​ಶೀಟ್

    ನನ್ನಾಕಿ ಹೃದಯದಲ್ಲಿರಲಿ

    ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಹುಬ್ಬಳ್ಳಿ ಧಾರವಾಡ ನಗರ ಪೊಲೀಸರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬೈಕ್​ನಲ್ಲಿ ಬರೆದಿರುವ ಸಾಲುಗಳೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೆ, ಒಂದೇ ಸಂದೇಶವನ್ನು ರವಾನಿಸಿದ್ದಾರೆ. ಅದೇನೆಂದರೆ, ನಿನ್ನಾಕಿ (ನನ್ನಾಕಿ) ಹೃದಯದಲ್ಲಿರಲಿ…ಗಾಡಿ ನಂಬರ್​ ಪ್ಲೇಟ್ ಮೇಲಲ್ಲ ಎಂದು ಪಂಚಿಂಗ್​ ಡೈಲಾಗ್​ ಮೂಲಕ ತಿಳುವಳಿಕೆ ಮೂಡಿಸಿದ್ದಾರೆ. ಇದೀಗ ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ಡಿಫೆಕ್ಟಿವ್ ನಂಬರ್ ಪ್ಲೇಟ್ ಹಾಕಿ ಸಂಚರಿಸುತ್ತಿದ್ದ ಬೈಕ್ ಅನ್ನು ಇಂದು ಧಾರವಾಡ ಸಂಚಾರ ಪೊಲೀಸರು ವಶಪಡಿಸಿಕೊಂಡು ಕೋರ್ಟ್ ನೋಟಿಸ್ ಜಾರಿ ಮಾಡಿ, ಕಾನೂನು ಕ್ರಮ ಜರುಗಿಸಿದ್ದು, ಬೈಕ್​​ಗೆ ನಂಬರ್ ಪ್ಲೇಟ್ ಹಾಕಿಸಿ ಸವಾರನಿಗೆ ಕಾನೂನು ತಿಳುವಳಿಕೆ ಹೇಳಲಾಗಿರುತ್ತದೆ ಎಂದು ಫೇಸ್​ಬುಕ್​ನಲ್ಲಿ ಬರೆಯಲಾಗಿದೆ. (ದಿಗ್ವಿಜಯ ನ್ಯೂಸ್​)

    ಫೇಲಾದ SSLC ವಿದ್ಯಾರ್ಥಿಗಳ ಆಶಾಕಿರಣ ಇನ್ಸ್​ಪೆಕ್ಟರ್​ ರಾಜೇಶ್​ರನ್ನು ಮೆಚ್ಚಿದ ಮಾಜಿ ಸಚಿವ ಸುರೇಶ್ ಕುಮಾರ್​

    ಇನ್ಮುಂದೆ ಒಂದು ಒವರ್​ನಲ್ಲಿ ಎರಡು ಬೌನ್ಸರ್, ಹೊಸ ನಿಯಮ ಪ್ರಕಟಿಸಿದ ಬಿಸಿಸಿಐ

    ಆದಿಪುರುಷ ಚಿತ್ರದಲ್ಲಾಗಿರುವ ತಪ್ಪನ್ನು ಒಪ್ಪಿಕೊಂಡ ಬರಹಗಾರ: ಕ್ಷಮೆಯಾಚಿಸಿದರೂ ಕರಗದ ನೆಟ್ಟಿಗರ ಕೋಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts