More

    ಪಾಕ್​ ಸುಂದರಿಗೆ ಮಾರುಹೋಗಿ ರಕ್ಷಣಾ ವ್ಯವಸ್ಥೆಯ ಮಾಹಿತಿ ಸೋರಿಕೆ: ಡಿಆರ್​ಡಿಒ ವಿಜ್ಞಾನಿ ವಿರುದ್ಧ ಚಾರ್ಜ್​ಶೀಟ್

    ಪುಣೆ: ಝರಾ ದಾಸಗುಪ್ತ ಹೆಸರಿನ ಪಾಕಿಸ್ತಾನಿ ಗೂಢಾಚಾರಿಣಿಯ ಅಂದಕ್ಕೆ ಮಾರುಹೋದ ಡಿಆರ್​ಡಿಒ ವಿಜ್ಞಾನಿ ಪ್ರದೀಪ್​ ಕುರುಲ್ಕರ್​, ಆಕೆಯೊಂದಿಗೆ ಭಾರತೀಯ ಕ್ಷಿಪಣಿ​ ವ್ಯವಸ್ಥೆ ಸೇರಿದಂತೆ ಇತರೆ ವರ್ಗೀಕೃತ ರಕ್ಷಣಾ ಯೋಜನೆಗಳ ಬಗ್ಗೆ ಚಾಟಿಂಗ್​ ನಡೆಸಿದ್ದಾರೆ ಎಂಬ ಸಂಗತಿ ಚಾರ್ಚ್​ಶೀಟ್​ನಿಂದ ಬಯಲಾಗಿದೆ.

    ಕುರುಲ್ಕರ್​ ವಿರುದ್ಧ ಮಹಾರಾಷ್ಟ್ರದ ಭಯೋತ್ಪದನಾ ವಿರೋಧಿ ಪಡೆ (ಎಟಿಎಸ್​) ಚಾರ್ಜ್​ಶೀಟ್​ ದಾಖಲಿಸಿದೆ. ಕುರುಲ್ಕರ್​ ಅವರು ಪುಣೆಯಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ)ಯ ಪ್ರಯೋಗಾಲಯಗಳಲ್ಲಿ ಒಂದಾಗ ಪುಣೆಯ ಪ್ರಯೋಗಲಾಯದ ನಿರ್ದೇಶಕರಾಗಿದ್ದರು.

    ಇದನ್ನೂ ಓದಿ: ಬಾಲಕಿಯ ಹಾಡನ್ನು ವೈರಲ್​ ಮಾಡೋದಾಗಿ ನಂಬಿಸಿದ ಯೂಟ್ಯೂಬರ್​: ಲಾಡ್ಜ್​ನಲ್ಲಿ ನಡೆಯಿತು ಘೋರ ಕೃತ್ಯ

    ಕುರುಲ್ಕರ್​ ಅವರನ್ನು ಮೇ 3ರಂದು ಅಧಿಕೃತ ರಹಸ್ಯ ಕಾಯ್ದೆ ಅಡಿಯಲ್ಲಿ ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

    ಪ್ರದೀಪ್​ ಕುರುಲ್ಕರ್​ ಮತ್ತು ಝರಾ ದಾಸಗುಪ್ತ ಇಬ್ಬರು ವಾಟ್ಸ್​ಆ್ಯಪ್​ ಮೂಲಕ ಸಂಪರ್ಕ ಬೆಳೆಸಿದ್ದರು. ಇಬ್ಬರ ನಡುವೆ ವಾಯ್ಸ್​ ಕಾಲ್​ ಮತ್ತು ವಿಡಿಯೋ ಕಾಲ್​ ಸಾಮಾನ್ಯವಾಗಿತ್ತು ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

    ಅಶ್ಲೀಲ ವಿಡಿಯೋ ಬಲೆ

    ಝರಾ ತಾನೊಬ್ಬ ಯುನೈಟೆಡ್​ ಕಿಂಗ್​ಡಮ್​ ಮೂಲದ ಸಾಫ್ಟ್​ವೇರ್​ ಇಂಜಿನಿಯರ್​ ಎಂದು ಹೇಳಿ, ಅಶ್ಲೀಲ ಸಂದೇಶ ಮತ್ತು ವಿಡಿಯೋಗಳನ್ನು ಕಳುಹಿಸುವ ಮೂಲಕ ಕುರುಲ್ಕರ್​ ಜತೆ ಸ್ನೇಹ ಬೆಳೆಸಿದ್ದಳು. ಆದರೆ, ತನಿಖೆಯ ಸಂದರ್ಭದಲ್ಲಿ ಆಕೆಯ ಐಪಿ ಅಡ್ರೆಸ್​ ಪಾಕಿಸ್ತಾನ ತೋರಿಸಿದ್ದು, ಆಕೆ ಪಾಕ್​ ಏಜೆಂಟ್​ ಎಂಬುದು ಗೊತ್ತಾಗಿದೆ. ಆಕೆಯನ್ನು ನಂಬಿದ್ದ ಕುರುಲ್ಕರ್​, ಬ್ರಹ್ಮೋಸ್​ ಲಾಂಚರ್​, ಡ್ರೋನ್​, ಯುಸಿವಿ, ಅಗ್ನಿ ಕ್ಷಿಪಣಿ ಲಾಂಚರ್​ ಮತ್ತು ಮಿಲಿಟರಿ ಬ್ರಿಡ್ಜಿಂಗ್​​ ಸಿಸ್ಟಮ್​ ಸೇರಿದಂತೆ ಅನೇಕ ಮಾಹಿತಿಗಳನ್ನು ಆಕೆಯೊಂದಿಗೆ ಹಂಚಿಕೊಂಡಿದ್ದಾರೆ.

    ಝರಾಳ ಅಂದಕ್ಕೆ ಮಾರುಹೋದ ಕುರುಲ್ಕರ್​, ಡಿಆರ್​ಡಿಒನ ವರ್ಗೀಕೃತ ಮತ್ತು ಸೂಕ್ಷ್ಮ ಮಾಹಿತಿಗಳನ್ನು ತಮ್ಮ ವೈಯಕ್ತಿಕ ಫೋನ್​ನಲ್ಲಿ ಸಂಗ್ರಹಿಸಿ, ಅದನ್ನು ಝರಾಳಿಗೆ ಶೇರ್​ ಮಾಡಿದ್ದಾರೆ ಎಂದು ಚಾರ್ಜ್​ಶೀಟ್​ನಲ್ಲಿ ತಿಳಿಸಲಾಗಿದೆ. ಇಬ್ಬರು 2022ರ ಜೂನ್​ನಿಂದ 2022ರ ಡಿಸೆಂಬರ್​ವರೆಗೆ ಸಂಪರ್ಕದಲ್ಲಿ ಇದ್ದರು ಎಂದು ಎಟಿಎಸ್​ ತಿಳಿಸಿದೆ.

    ಇದನ್ನೂ ಓದಿ: ಈ ದೇಶಗಳ ನಡುವೆ ಗಡಿ ಇರಬಾರದು; ಅಖಂಡ ಭಾರತದ ಪ್ರಸ್ತಾಪ ಮಾಡಿದ್ರಾ ಶ್ರೀಲಂಕಾ ಅಧ್ಯಕ್ಷ?

    ಪ್ರಾಥಮಿಕ ತನಿಖೆಯಲ್ಲಿ ಅನುಮಾನ

    ಡಿಆರ್​ಡಿಒ ಪ್ರಾಥಮಿಕ ತನಿಖೆ ಆರಂಭಿಸಿದಾಗಲೇ ಕುರುಲ್ಕರ್​ ಚಟುವಟಿಕೆ ಅನುಮಾನಾಸ್ಪದವಾಗಿತ್ತು. ಕಳೆದ ಫೆಬ್ರವರಿಯಲ್ಲಿ ಝರಾಳ ನಂಬರ್​ ಅನ್ನು ಕುರುಲ್ಕರ್​ ಬ್ಲಾಕ್​ ಮಾಡಿದ್ದರು. ಇದಾದ ಕೂಡಲೇ ಇನ್ನೊಂದು ಭಾರತೀಯ ಅಪರಿಚಿತ ನಂಬರ್​ನಿಂದಲೇ ವಾಟ್ಸ್​ಆ್ಯಪ್​ ಸಂದೇಶವನ್ನು ಕುರುಲ್ಕರ್​ ಸ್ವೀಕರಿಸಿದ್ದರು. ಅದರಲ್ಲಿ ನನ್ನ ನಂಬರ್​ ಅನ್ನು ಏಕೆ ಬ್ಲಾಕ್​ ಮಾಡಿದ್ದೀಯಾ? ಎಂದು ಝರಾ ಪ್ರಶ್ನೆ ಮಾಡಿದ್ದಳು.

    ಇಬ್ಬರ ನಡುವೆ ನಡೆದಿರುವ ಚಾಟಿಂಗ್​ ದಾಖಲೆಗಳ ಪ್ರಕಾರ ತಮ್ಮ ವೈಯಕ್ತಿಕ ಮತ್ತು ಅಧಿಕೃತ ವೇಳಾಪಟ್ಟಿಗಳು ಹಾಗೂ ಸ್ಥಳಗಳನ್ನು ಯಾರೊಂದಿಗೂ ಹಂಚಿಕೊಳ್ಳುವಂತಿಲ್ಲ ಎಂಬ ನಿಯಮವಿದ್ದರೂ ಸಹ ಅವಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. (ಏಜೆನ್ಸೀಸ್​)

    ಸಲಿಂಗ ಸಂಗಾತಿಗಾಗಿ ಹೇಬಿಯಸ್​ ಕಾರ್ಪಸ್​ ಹಿಡಿದು ಕೋರ್ಟ್​ ಮೆಟ್ಟಿಲೇರಿದ್ದ ಯುವತಿಗೆ ಸಿಕ್ತು ಗುಡ್​ ನ್ಯೂಸ್​!

    KSRTC ಬಸ್​ನ ಗಾಜಿನ ಮೇಲೆ ಬಾಟೆಲ್​ ಎಸೆದ ಕಾರಿನಲ್ಲಿದ್ದ ಪುಂಡರು: ಪ್ರಶ್ನಿಸಿದ್ದಕ್ಕೆ ಚಾಲಕನ ಮೇಲೆ ಹಲ್ಲೆ!

    ನಾಪತ್ತೆಯಾಗಿದ್ದ ನಂದಿಪರ್ವತ ಆಶ್ರಮದ ಜೈನಮುನಿ ಬರ್ಬರ ಹತ್ಯೆ: ಮೃತದೇಹಕ್ಕಾಗಿ ತೀವ್ರ ಶೋಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts