More

    ಮತದಾನದ ಹಕ್ಕು ಬಿಟ್ಟುಕೊಡದಿರಿ

    ಹೊಸಪೇಟೆ: ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮೇ.07ರಂದು ನಡೆಯುವ ಚುನಾವಣೆ ಹಬ್ಬದಲ್ಲಿ ಶೇ.100 ರಷ್ಟು ಮತದಾನ ಆಗುವಂತೆ ಸಹಕರಿಸಬೇಕೆಂದು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.

    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಕೇಂದ್ರ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸ್ಚೀಪ್ ಸಮಿತಿಯಿಂದ ನಗರದಲ್ಲಿ ಮಂಗಳವಾರ ಬೈಕ್ ರ‍್ಯಾಲಿಗೆ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಮತದಾನವು ಪ್ರತಿಯೊಬ್ಬರಿಗೂ ಸಂವಿಧಾನಬದ್ಧವಾಗಿ ಬಂದಿರುವ ಹಕ್ಕಾಗಿದೆ. ಹೀಗಾಗಿ ಪ್ರತಿಯೊಬ್ಬರು ಮತದಾನದಲ್ಲಿ ಭಾಗಿಯಾಗಬೇಕು ಎಂದರು.

    ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಸದಾಶಿವ ಬಿ.ಪ್ರಭು ಮಾತನಾಡಿರು. ಜಿ.ಪಂ. ಮುಖ್ಯ ಯೋಜನಾಧಿಕಾರಿ ಎಂ.ಜೆ.ಅನ್ನದಾನೇಶ್ವರ ಸ್ವಾಮಿ ಮತದಾನ ಜಾಗೃತಿಯ ಪ್ರತಿಜ್ಞಾವಿಧಿ ಬೋಧಿಸಿದರು.

    ಜಿಲ್ಲಾಡಳಿತ ಭವನದಿಂದ ಆರಂಭವಾದ ರ‍್ಯಾಲಿ ಸಾಯಿಬಾಬಾ ಸರ್ಕಲ್, ಬಲ್ಡೋಟಾ ಕಾಲೊನಿ, ನೆಹರೂ ಕಾಲೊನಿ, ವಾಲ್ಮೀಕಿ ಸರ್ಕಲ್, ಚಪ್ಪರದಹಳ್ಳಿ, ಬಸವೇಶ್ವರ ಬಡಾವಣೆ, ನಗರಸಭೆ ಕಚೇರಿ ಬಳಿ ಮುಕ್ತಾಯವಾಯಿತು. ರ್ಯಾಲಿಯಲ್ಲಿ ಮತದಾನಕ್ಕಿಂತ ಇನ್ನೊಂದಿಲ್ಲ ನಾನು ಖಚಿತವಾಗಿ ಮತದಾನ ಮಾಡುವೆ. ನಿಮ್ಮ ಮತ ನಿಮ್ಮ ಹಕ್ಕು, ಕಡ್ಡಾಯವಾಗಿ ಮಾತದಾನ ಮಾಡಿ ಮೂಲಕ ಜಾಗೃತಿ ಮೂಡಿಸಲಾಯಿತು.

    ಸಮಾಜ ಕಲ್ಯಾಣ ಇಲಾಖೆಯ ಡಿಡಿ ಎಚ್.ಎಸ್.ಮಂಜುನಾಥ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿಡಿ ರಾಮಚಂದ್ರಪ್ಪ, ರೇಷ್ಮೆ ಇಲಾಖೆಯ ಡಿಡಿ ಸುಧೀರ್, ಡಿಡಿಪಿಐ ಯುವರಾಜ ನಾಯ್ಕ, ಆಹಾರ ಇಲಾಖೆಯ ಡಿಡಿ ಮಲ್ಲಿಕಾರ್ಜುನ ನಾಯಕ, ತಾ.ಪಂ. ಇಒ ಹರೀಶ್, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ರವಿಕುಮಾರ, ಸಿಡಿಪಿಒ ಸಿಂದು ಯಲಿಗಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts