ಕಿನ್ನಿಗೋಳಿ: ಕಿನ್ನಿಗೋಳಿ ಮಾರುಕಟ್ಟೆ ಕಟ್ಟಡದ ದ್ರವ ತ್ಯಾಜ್ಯ ಗುಂಡಿ ನಿರ್ಮಾಣಕ್ಕೆ ಸ್ಥಳೀಯರಾದ ಲ್ಯಾನ್ಸಿ ಡಿಸೋಜ ಎಂಬುವರು ಬುಧವಾರ ವಿರೋಧ ವ್ಯಕ್ತಪಡಿಸಿದ್ದಾರೆ. ಕಿನ್ನಿಗೋಳಿಯಲ್ಲಿ ನೂತನವಾಗಿ ಮಾರುಕಟ್ಟೆ ಕಟ್ಟಡ ನಿರ್ಮಾಣವಾಗುತ್ತಿದ್ದು, ಕೆಲ ತಿಂಗಳ ಹಿಂದೆ ದ್ರವ ತ್ಯಾಜ್ಯ ಗುಂಡಿ ನಿರ್ಮಾಣ ವಿರುದ್ಧ ಸ್ಥಳೀಯ ನಿವಾಸಿ ಲ್ಯಾನ್ಸಿ ಡಿಸೋಜ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದು ನಂತರ ಕೆಲಸ ಸ್ಥಗಿತಗೊಂಡಿತ್ತು. ಇದೀಗ ತಡೆಯಾಜ್ಞೆ ತೆರವುಗೊಂಡ ಕಾರಣ ಬುಧವಾರ ಮತ್ತೆ ದ್ರವ ತ್ಯಾಜ್ಯಕ್ಕೆ ಗುಂಡಿ ನಿರ್ಮಿಸುವ ಸಂದರ್ಭ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕಾಗಮಿಸಿದ ಮೂಲ್ಕಿ ಪೊಲೀಸರಿಗೆ ಕಿನ್ನಿಗೋಳಿ ಪಂಚಾಯಿತಿ ಮುಖ್ಯಾಧಿಕಾರಿ ತಡೆಯಾಜ್ಞೆ ತೆರವುಗೊಂಡ ಬಗ್ಗೆ ದಾಖಲೆ ನೀಡಿದ್ದು, ನಂತರ ಕಾಮಗಾರಿ ಮುಂದುವರಿಸಲಾಯಿತು.
ಬಸ್ ನಿಲ್ದಾಣ ಹೊಂಡ-ಗುಂಡಿ : ಮೂಲ್ಕಿಯಲ್ಲಿ ಪಾದಚಾರಿಗಳಿಗೆ ಕೆಸರಿನ ಸಿಂಚನ: ಕುಡುಕರ ಆಶ್ರಯ ತಾಣ
ಕಲಾ ಚಟುವಟಿಕೆಗಳಿಂದ ಉತ್ತಮ ಭವಿಷ್ಯ : ಸಂಭ್ರಮ-2025 ಉದ್ಘಾಟಿಸಿ ಕುದ್ರೋಳಿ ಗಣೇಶ್ ಹೇಳಿಕೆ