ವಿಪಕ್ಷಗಳ ಪ್ರತಿಭಟನೆ ಗುಮ್ಮ, ಪೊಲೀಸ್​ ಸರ್ಪಗಾವಲು

Cm_Police
Published on

ತುಮಕೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ವಿಪಕ್ಷಗಳ ಪ್ರತಿಭಟನೆ "ಗುಮ್ಮ'ದಿಂದಾಗಿ ಪೊಲೀಸ್​ ಭದ್ರತೆ ಹೆಚ್ಚಿಸಲಾಗಿದೆ. ಸೋಮವಾರ ನಗರದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕಸ್ಥಾಪನೆ, ಸವಲತ್ತು ವಿತರಣೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಚಾಲನೆ ನೀಡಲಿದ್ದು ಈ ವೇಳೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ, 3 ಎಎಸ್ಪಿ, 12 ಡಿಎಸ್ಪಿ, 50 ಸಿಪಿಐ, 109 ಪಿಎಸ್​ಐ, 189 ಎಎಸ್​ಐ, 80 ಮಹಿಳಾ ಪೇದೆಗಳು, 5 ಡಿಎಆರ್​, 5 ಕೆಎಸ್​ಆರ್​ಪಿ ತುಕಡಿ ಸೇರಿದಂತೆ 1290 ಪೊಲೀಸರನ್ನು ಹಾಗೂ 115 ಗೃಹರಕ್ಷದಳ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ.

ಜಿಲ್ಲೆಯಲ್ಲದೆ ನೆರಯ ಕೋಲಾರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೆಜಿಎ್​ನಿಂದ ಸಹ ಪೊಲೀಸರನ್ನು ಭದ್ರತೆಗೆ ಕರೆಸಲಾಗಿದ್ದು ಭಾನುವಾರ ಸಂಜೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಬೆಳ್ಳಾವಿಗೆ ಹೆಲಿಕ್ಯಾಪ್ಟರ್​ನಲ್ಲಿ ಬಂದಿಳಿಯುವ ಸಿಎಂ ಅಲ್ಲಿಂದ ರಸ್ತೆ ಮಾರ್ಗವಾಗಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಲಿದ್ದಾರೆ. ನಂತರ ತುಮಕೂರು ವಿವಿ ಹೆಲಿಪ್ಯಾಡ್​ನಿಂದ ಬೆಂಗಳೂರಿನತ್ತ ಪಯಣ ಬೆಳೆಸುವರು. ಎಲ್ಲಿಯೂ ಸಣ್ಣಲೋಪ, ಕಾನೂನುಭಂಗಕ್ಕೆ ಅವಕಾಶವಾಗದಂತೆ ಪೊಲೀಸರು ಎಚ್ಚರಿಕೆವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net