

ಪಾಟ್ನಾ: ನಮ್ಮ ಸರ್ಕಾರಗಳಿರುವ ಗುಜರಾತ್, ರಾಜಸ್ಥಾನ ಮತ್ತು ಅಸ್ಸಾಂನಲ್ಲಿ ಒಳನುಸುಳುವಿಕೆ ಸಂಭವಿಸುವುದಿಲ್ಲ. ಏಕೆಂದರೆ, ಅಲ್ಲಿ ಬಿಜೆಪಿ ಸರ್ಕಾರಗಳಿವೆ. ಆದರೆ ಬಂಗಾಳ ಮತ್ತು ಜಾರ್ಖಂಡ್ನಲ್ಲಿ ಮತ ಬ್ಯಾಂಕ್ ಲಾಭಕ್ಕಾಗಿ ಒಳನುಸುಳುವವರನ್ನು (Infiltrators) ಸ್ವಾಗತಿಸಲಾಗುತ್ತದೆ ಎಂದು ಶನಿವಾರ (ಅಕ್ಟೋಬರ್,18) ವಿಪಕ್ಷಗಳ ವಿರುದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ವಾಗ್ದಾಳಿ ನಡೆಸಿದ್ದಾರೆ.
ಮಮತಾ ಸರ್ಕಾರವನ್ನು ಬಂಗಾಳದಿಂದ ತೆಗೆದುಹಾಕಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಬಂಗಾಳವು ನುಸುಳುಕೋರರಿಂದ ಮುಕ್ತವಾಗಲಿದೆ. ಅಲ್ಲದೆ, ನುಸುಳುಕೋರರನ್ನು ಪೋಷಿಸುವ ಮತ್ತು ಮತ ಬ್ಯಾಂಕ್ ಅನ್ನು ಸೃಷ್ಟಿಸುವವರಿಗೆ ವಿಶೇಷ ತೀವ್ರ ಪರಿಷ್ಕರಣೆ (SIR) ಯಿಂದ ನೋವಾಗಿದೆ. ದೇಶಾದ್ಯಂತ SIR ಅನ್ನು ಜಾರಿಗೆ ತರಬೇಕು ಮತ್ತು ನುಸುಳುಕೋರರನ್ನು ಮತದಾರರ ಪಟ್ಟಿಯಿಂದ ಅಳಿಸಬೇಕು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ ಷಾ, ರಾಹುಲ್ ಗಾಂಧಿ ಈಗ ಮತ ಕಳ್ಳತನವನ್ನು ಮರೆತಿದ್ದಾರೆ. ಬಿಹಾರದ ಜನರು ಅವರನ್ನು ಮರೆಯುವಂತೆ ಮಾಡಿದ್ದಾರೆ. ಬಹುಶಃ ಇದನ್ನೆಲ್ಲ ಈಗ ಹೇಳಬೇಡಿ ಎಂದು ರಾಹುಲ್ಗೆ ಸಲಹೆ ನೀಡಲಾಗಿದೆ. ಅಲ್ಲದೆ, ನುಸುಳುಕೋರರು ಬಿಹಾರ ಸರ್ಕಾರವನ್ನು ನಿರ್ಧರಿಸಬಹುದೇ? ನಮ್ಮ ಪ್ರಜಾಪ್ರಭುತ್ವದ ಮೂಲತತ್ವ ಚುನಾವಣೆಗಳು ಮತ್ತು ಚುನಾವಣೆಗಳೊಳಗಿನ ಮೂಲ ಘಟಕವೆಂದರೆ ಮತದಾರರ ಪಟ್ಟಿ ಮತ್ತು ಮತದಾರರಾಗಿದ್ದಾರೆ. ದೇಶದ ಪ್ರಜೆಯಲ್ಲದ ಯಾರಾದರೂ ದೇಶದ ಮತದಾರರಾಗುವುದು ಹೇಗೆ ಸಾಧ್ಯ? ಎಂದು ರಾಹುಲ್ ಗಾಂಧಿಯನ್ನು ಷಾ ಪ್ರಶ್ನಿಸಿದ್ದಾರೆ.
ನಮ್ಮ ದೇಶದಲ್ಲಿ ಮುಖ್ಯಮಂತ್ರಿ ಮತ್ತು ಪ್ರಧಾನಿ ಯಾರು ಎಂದು ವಿದೇಶಿ ಪ್ರಜೆ ನಿರ್ಧರಿಸುತ್ತಾರೆಯೇ? ಚುನಾವಣಾ ಆಯೋಗವು SIR ಮೂಲಕ ಮತದಾರರ ಪಟ್ಟಿಯಿಂದ ನುಸುಳುಕೋರರನ್ನು ತೆಗೆದುಹಾಕಿದರೆ, ವಿಪಕ್ಷಗಳು ಏಕೆ ಅಶಾಂತಿ ಅನುಭವಿಸುತ್ತಿದ್ದಾರೆ? ಒಳನುಸುಳುವಿಕೆಗೆ ಅವಕಾಶ ಮಾಡಿಕೊಟ್ಟು ಮತ ಬ್ಯಾಂಕ್ ಅನ್ನು ಸೃಷ್ಟಿಸಿದ್ದರಿಂದ ವಿಪಕ್ಷ ಅಸಮಾಧಾನಗೊಂಡಿದೆ. ಈ ಆಧಾರದ ಮೇಲೆ ವಿಪಕ್ಷಗಳು ಅಧಿಕಾರದಲ್ಲಿ ಉಳಿದಿದ್ದಾರೆ. ಇಡೀ ದೇಶದಲ್ಲಿ ಎಸ್ಐಆರ್ ಅನ್ನು ಜಾರಿಗೆ ತರಬೇಕೆಂಬ ಚುನಾವಣಾ ಆಯೋಗದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ಷಾ ಭರವಸೆ ವ್ಯಕ್ತಪಡಿಸಿದ್ದಾರೆ.
ಮುಂದುವರೆದು ಮಾತನಾಡಿದ ಷಾ, ಗಡಿಯು ನೇರ ರಸ್ತೆಯಂತಿಲ್ಲ. ದೊಡ್ಡ ನದಿಗಳು, ತೊರೆಗಳು, ದಟ್ಟವಾದ ಕಾಡುಗಳು, ಎತ್ತರದ ಪರ್ವತ ಶಿಖರಗಳಿವೆ. ಇಂತಹ ಸ್ಥಳಗಳಲ್ಲಿ ಬೇಲಿ ಹಾಕುವುದು ಸಾಧ್ಯವಿಲ್ಲ. ಅಲ್ಲಿ 24 ಗಂಟೆಗಳ ಕಣ್ಗಾವಲು ಕೂಡ ಸಾಧ್ಯವಾಗುವುದಿಲ್ಲ ಎಂದು ಷಾ ಹೇಳಿದ್ದಾರೆ. ಈ ಜನರು ಲುಟ್ಯೆನ್ಸ್ ದೆಹಲಿಯಲ್ಲಿ ಕುಳಿತು ಮಾತನಾಡಲು ಬಯಸುತ್ತಾರೆ, ನೀವು ಯಾವಾಗಲಾದರೂ ಗಡಿಗೆ ಹೋದರೆ ನಿಮಗೆ ತಿಳಿಯುತ್ತದೆ. ಪ್ರವೇಶಿಸಿದ ನಂತರ, ಒಳನುಗ್ಗುವವರು ಮೊದಲು ಒಂದು ಹಳ್ಳಿಗೆ ಹೋಗುತ್ತಾರೆ. ಆ ಹಳ್ಳಿಯ ಪಟ್ವಾರಿಗೆ ಹಳ್ಳಿಗೆ ಎಷ್ಟು ಜನರು ಬಂದರು ಎಂದು ತಿಳಿದಿರುವುದಿಲ್ಲ. ಆದರೆ ಬಂಗಾಳ ಮತ್ತು ಜಾರ್ಖಂಡ್ನಲ್ಲಿ ಈ ಒಳನುಗ್ಗುವವರನ್ನು ಸ್ವಾಗತಿಸಲಾಗುತ್ತದೆ ಎಂದು ಗೃಹ ಸಚಿವ ಷಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. (ಏಜೆನ್ಸೀಸ್)