ಪ್ರತಿಪಕ್ಷಗಳು ಆಪರೇಷನ್​ ಸಿಂಧೂರ ಯಶಸ್ಸನ್ನು ಒಪ್ಪಿಕೊಳ್ಳುತ್ತಿಲ್ಲ: ಇಂಡಿಯಾ ಮೈತ್ರಿಕೂಟದ ವಿರುದ್ಧ ಗುಡುಗಿದ ಮೋದಿ | Narendra Modi

PM Narendra Modi
Published on

Narendra Modi: ಕಾಂಗ್ರೆಸ್​ ಮತ್ತು ವಿರೋಧ ಪಕ್ಷಗಳು ಆಪರೇಷನ್​ ಸಿಂಧೂರ ಯಶಸ್ಸನ್ನು ಕಡಿಮೆ ಮಾಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಾರಣಾಸಿಯಲ್ಲಿ ಶನಿವಾರ ಮಾತನಾಡಿದ ಮೋದಿ, ಅನ್ಯಾಯ ಮತ್ತು ಭಯೋತ್ಪಾದನೆ ಎದುರಿಗೆ ಇದ್ದಾಗ, ಮಹಾದೇವ ತನ್ನ 'ರುದ್ರ ರೂಪ'ವನ್ನು ಅಲಂಕರಿಸುತ್ತಾನೆ. ಆಪರೇಷನ್ ಸಿಂಧೂರ ಸಮಯದಲ್ಲಿ ಜಗತ್ತು ಭಾರತದ ರುದ್ರ ರೂಪವನ್ನು ಕಂಡಿದೆ. ಭಾರತದೊಂದಿಗೆ ಚೆಲ್ಲಾಟವಾಡುವ ಯಾರನ್ನೂ ಸಹ 'ಪತಾಳ ಲೋಕ'ದಲ್ಲಿದ್ದರು ನಾವು ಬಿಡಲ್ಲ ಎಂದು ಉಗ್ರರಿಗೆ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳಿಗೆ ಕಾರ್ಯಾಚರಣೆಯ ಯಶಸ್ಸನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಭಾರತ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದೆ ಎಂಬ ಅಂಶವನ್ನು ಕಾಂಗ್ರೆಸ್ ಮತ್ತು ಅದರ ಅನುಯಾಯಿಗಳಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮೋದಿ ತೀವ್ರ ವಾಗ್ದಾಳಿ ನಡೆಸಿದರು.

​ನಮ್ಮ ರಕ್ಷಣಾ ಪಡೆಗಳ ಶೌರ್ಯವನ್ನು ಕಾಂಗ್ರೆಸ್ ನಿರಂತರವಾಗಿ ಅವಮಾನಿಸುತ್ತಿದೆ. ಆಪರೇಷನ್​ ಸಿಂಧೂರವನ್ನು ಕಾಂಗ್ರೆಸ್ ಒಂದು​ ತಮಾಷೆ ಎಂದು ಕರೆದಿದೆ ಎಂದಿದ್ದಾರೆ.

ವಿಪಕ್ಷಗಳ ವಿರುದ್ಧ ಟೀಕೆಯನ್ನು ತೀವ್ರಗೊಳಿಸಿದ ಮೋದಿ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿದ್ದು, ಸಶಸ್ತ್ರ ಪಡೆಗಳನ್ನು ದುರ್ಬಲಗೊಳಿಸುತ್ತಿವೆ ಎಂದು ಆರೋಪಿಸಿದರು. ಪಾಕಿಸ್ತಾನ ಅಳುತ್ತಿದೆ. ಜತೆಗೆ ಇಲ್ಲಿನ ವಿರೋಧ ಪಕ್ಷಗಳು ಭಯೋತ್ಪಾದಕರ ಸ್ಥಿತಿಯನ್ನು ನೋಡಿ ಅಳುತ್ತಿವೆ ಎಂದು ವ್ಯಂಗ್ಯವಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net