VIDEO| ವಿರೋಧ ಪಕ್ಷಗಳು ದೇಶದ ಜನತೆಗಿಂತ ಅಧಿಕಾರದ ಬಗ್ಗೆ ಹೆಚ್ಚಿಗೆ ಚಿಂತಿಸುತ್ತಿವೆ: ಪ್ರಧಾನಿ ಮೋದಿ ವಾಗ್ದಾಳಿ

Narendra Modi
Published on

ನವದೆಹಲಿ: ಮಣಿಪುರದಲ್ಲಿ ಸಂಭವಿಸಿದ್ದ ಜನಾಂಗೀಯ ಘರ್ಷಣೆ ಕುರಿತು ಪ್ರಧಾನಿ ಮೋದಿ ಉತ್ತರಿಸಬೇಕು ಎಂದು ಆಗ್ರಹಿಸಿ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಕೇಂದ್ರ ಸರ್ಕಾರದ ಮೇಲೆ ಜನತೆಗೆ ವಿಶ್ವಾಸವಿದೆ. ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕೆ ವಿಪಕ್ಷಗಳಿಗೆ ಧನ್ಯವಾದಗಳು ಎಂದು ಪ್ರಧಾನಿ ಮೋದಿ ಟಾಂಗ್​ ಕೊಟ್ಟಿದ್ದಾರೆ.

ಜನತೆಯ ಆಶೀರ್ವಾದದೊಂದಿಗೆ ಹಿಂದಿನ ಎಲ್ಲಾ ದಾಖಲೆಗಳನ್ನೂ ಮುರಿದು ಬಿಜೆಪಿ ನೇತೃತ್ವದ ಎನ್​ಡಿಎ ಒಕ್ಕೂಟವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕೆಂದು ನೀವುಗಳು ನಿರ್ಧರಿಸಿರುವುದನ್ನು ನಾನು ನೋಡುತ್ತಿದ್ದೇನೆ. ಪ್ರತಿಯೊಬ್ಬ ಸಂಸದರ ಮಾತನ್ನು ನಾನು ಕೇಳಿದ್ದೇನೆ. ದೇಶದ ಜನತೆ ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ವಿಪಕ್ಷಗಳು ಅವಿಶ್ವಾಸ ಮಂಡಿಸಿದ್ದು ನಾನು ದೇವರ ಆಶೀರ್ವಾದ ಎಂದು ಭಾವಿಸುತ್ತೇನೆ.

ಪರೀಕ್ಷೆ ನಮಗಲ್ಲ ಅವರಿಗೆ

2018ರಲ್ಲೂ ವಿಪಕ್ಷಗಳು ಈಗೆ ಅವಿಶ್ವಾಸ ನಿರ್ಣಯವನ್ನೂ ಮಂಡಿಸಿದ್ದವು. ನಾನು ಆಗ ಸದನದಲ್ಲಿ ಒಂದು ಮಾತು ಹೇಳಿದ್ದೆ ಈ ಪರೀಕ್ಷೆ ನಮಗಲ್ಲ ಬದಲಾಗಿ ನಿಮಗೆ ಎಂದಿದ್ದೆ. ಅದರ ಪರಿಣಾಮವಾಗಿ ಅವರು ಚುನಾವಣೆಯಲ್ಲಿ ಸೋತರು. ನಿಮಗೆ ಬಡವರ ಹಸಿವಿಗಿಂತ ಅಧಿಕಾರದ ಚಿಂತೆ ಜಾಸ್ತಿಯಾಗಿದೆ. ನೀವು ದೇಶದ ಯುವ ಜನತೆಯ ಬಗ್ಗೆ ಚಿಂತಿಸುತ್ತಿಲ್ಲ ಬದಲಾಗಿ ನಿಮ್ಮ ಭವಿಷ್ಯದ ಬಗ್ಗೆ ಹೆಚ್ಚಾಗಿ ಯೋಚಿಸುತ್ತಿದ್ದೀರಾ ಎಂದು ಚಾಟಿ​ ಬೀಸಿದ್ದಾರೆ.

ಎದುರಾಳಿ ಎಷ್ಟೇ ಚೆನ್ನಾಗಿ ಫೀಲ್ಡಿಂಗ್​ ಸೆಟ್​ ಮಾಡಿದ್ದರು ಸಹ ಇಲ್ಲಿಂದ ಬೌಂಡರಿ ಹಾಗೂ ಸಿಕ್ಸರ್​ಗಳು ಹೋಗುತ್ತಿದ್ದವು. ಇತ್ತ ನಾವು ಶತಕಗಳನ್ನು ಬಾರಿಸುತ್ತಲೇ ಇದ್ದೆವು ಆದರೆ, ನಿಮ್ಮವರು ನಿರಂತರವಾಗಿ ನೋಬಾಲ್​ಗಳನ್ನು ಹಾಕುತ್ತಿದ್ದರು. ನಾವು ನಿಮಗೆ ಐದು ವರ್ಷಗಳ ಕಾಲ ತಯಾರಾಗಲು ಅವಕಾಶ ಕೊಟ್ಟಿದ್ದರು ಸಹ ನೀವು ಏನು ಮಾಡಲಿಲ್ಲವಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.

ರಕ್ತದ ಕಣಕಣದಲ್ಲೂ ಇದೇ

ವಿರೋಧ ಪಕ್ಷದವರು ದೇಶದ ಬಗ್ಗೆ ಒಳ್ಳಯದನ್ನು ಕೇಳಲು ಸಾಧ್ಯವಿಲ್ಲ. ಅವಿಶ್ವಾಸ ನಿರ್ಣಯದ ನೇತೃತ್ವವನ್ನು ವಿರೋಧ ಪಕ್ಷದ ನಾಯಕರು ವಹಿಸುತ್ತಾರೆ. ಆದರೆ, ಇಲ್ಲಿ ಅವರಿಗೆ ಮಾತನಾಡಲು ಅವಕಾಶ ನೀಡಲಾಗಿಲ್ಲ. ಅವರನ್ನು ನೋಡಿ ನನಗೆ ತುಂಬಾ ನೋವಾಗುತ್ತಿದೆ ಎಂದು ಲೋಕಸಭೆ ವಿಪಕ್ಷ ನಾಯಕ ಅಧೀರ್​ ರಂಜನ್​ ಚೌಧರಿ ಕುರಿತು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್​ ಪಕ್ಷದಲ್ಲಿ ಮೂಲವಾಗಿ ಏನು ಇಲ್ಲ ಚಿಹ್ನೆ ಹಾಗೂ ಸಿದ್ದಾಂತಗಳಿಂದ ಹಿಡಿದು ಎಲ್ಲವನ್ನೂ ಕಳ್ಳತನ ಮಾಡಲಾಗಿದೆ. ಕಾಂಗ್ರೆಸ್​ ಪಕ್ಷಕ್ಕೆ ದೇಶ ಹಾಗೂ ಜನತೆಯ ಬಗ್ಗೆ ವಿಶ್ವಾಸವಿಲ್ಲ. ಅವಿಶ್ವಾಸ ಹಾಗೂ ದುರಹಂಕಾರ ಅವರ ರಕ್ತದ ಕಣಕಣದಲ್ಲೂ ಇದೇ ಎಂದು ಪ್ರಧಾನಿ ಮೋದಿ ವಿಪಕ್ಷಗಳು ಮಂಡಿಸಿದ್ದ ನಿರ್ಣಯವನ್ನು ಉದ್ದೇಶಿಸಿ ಮಾತನಾಡುವ ವೇಳೆ ಚಾಟಿ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net