ಆರೋಗ್ಯ ಸುರಕ್ಷಾ ಕಾರ್ಡ್ ನೋಂದಣಿಗೆ ಅವಕಾಶ

card
Published on

ಹೆಬ್ರಿ: ಜನಸೇವೆಗೆ ಟ್ರಸ್ಟ್ ಸ್ಥಾಪಿಸಿದ್ದೇವೆ. ಜನರ ಆರೋಗ್ಯದ ಕಡೆ ಆದ್ಯತೆ ನೀಡುವುದು ನಮ್ಮ ಉದ್ದೇಶ. ಜನವರಿ 10ರ ವರೆಗೆ ಆರೋಗ್ಯ ಸುರಕ್ಷಾ ಕಾರ್ಡ್ ನೋಂದಣಿಗೆ ಅವಕಾಶವಿದೆ ಎಂದು ಮುದ್ರಾಡಿ ಶ್ರೀ ಗುರುರಕ್ಷಾ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.

ಮುದ್ರಾಡಿಯ ಶ್ರೀ ಗುರುರಕ್ಷಾ ಚಾರಿಟೆಬಲ್ ಟ್ರಸ್ಟ್ ಕಚೇರಿಯಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಮುಖಾಂತರ ಮಾಹೆ ಮಣಿಪಾಲದ ಸಹಯೋಗದಲ್ಲಿ ಮುದ್ರಾಡಿಯ ಶ್ರೀ ಗುರುರಕ್ಷಾ ಚಾರಿಟೆಬಲ್ ಟ್ರಸ್ಟ್ ಸಹಕಾರದಲ್ಲಿ ಜಿ.ಶಂಕರ್ ಆರೋಗ್ಯ ಸುರಕ್ಷಾ ಕಾರ್ಡ್ ನೋಂದಣಿಗೆ ಚಾಲನೆ ನೀಡಿ ಮಾತನಾಡಿದರು.

ಮುದ್ರಾಡಿ ಶ್ರೀ ಗುರುರಕ್ಷಾ ಚಾರಿಟೆಬಲ್ ಟ್ರಸ್ಟ್ ಸದಸ್ಯೆ ಡಾ.ಅಕ್ಷತಾ ಎಂ. ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಜಯಂತ್ ಅಮೀನ್ ಜಿ.ಶಂಕರ್ ಆರೋಗ್ಯ ಸುರಕ್ಷಾ ಕಾರ್ಡ್‌ನ ಪ್ರಯೋಜನದ ವಿವಿರ ನೀಡಿದರು. ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ರವೀಂದ್ರ ಪುತ್ರನ್, ಹೆಬ್ರಿ ಮೊಗವೀರ ಗ್ರಾಮಸಭಾದ ಅಧ್ಯಕ್ಷ ಎಚ್.ಬಿ.ಸುರೇಶ್, ಗುರುರಕ್ಷಾ ಸೌಹಾರ್ದ ಸಹಕಾರಿ ಬ್ಯಾಂಕ್ ಮ್ಯಾನೇಜರ್ ನಾರಾಯಣ ಪೂಜಾರಿ, ರಿಕ್ಷಾ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ವಿವಿಧ ಪ್ರಮುಖರಾದ ಶುಭದರ ಶೆಟ್ಟಿ, ಶಶಿಕಲಾ ಪೂಜಾರಿ, ಸನತ್ ಕುಮಾರ್, ಸಂತೋಷ ಶೆಟ್ಟಿ, ಸತೀಶ್ ಸೇರಿಗಾರ್, ಆದರ್ಶ ಎಂ.ಪೂಜಾರಿ, ಸಂತೋಷ ಕುಮಾರ್ ಶೆಟ್ಟಿ, ವಿಶು ಕುಮಾರ್, ನಾಗಾರಾಜ ಭಂಡಾರಿ ಪ್ರಮುಖರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net