ಫೆ.14ಕ್ಕೆ ಬಾರಕೂರು ಕ್ಷೇತ್ರದ ಬ್ರಹ್ಮಕಲಶೋತ್ಸವ

bmr
Published on

ಬ್ರಹ್ಮಾವರ: ಬಾರಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫೆ.14 ರಿಂದ 20ರ ತನಕ ಬ್ರಹ್ಮಕಲಶೋತ್ಸವ, ಹಾಲುಹಬ್ಬ, ವಾರ್ಷಿಕ ಪೂಜೆ, ಗೆಂಡ ಸೇವೆ ನಡೆಯಲಿದೆ. ಜತೆಗೆ ಕುಲದೇವತಾ ಸ್ತುತಿ ಲೇಖನಯಜ್ಞ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.

ಲೇಖನ ಯಜ್ಞದ ಮಹತ್ವ ಕುರಿತು ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಸಿ.ಜಯರಾಮ್ ಶೆಟ್ಟಿಗಾರ್ ತಿಳಿಸಿದರು. ಕುಂಭಾಸಿಯ ಪಾರ್ವತಿ ಮತ್ತು ರಾಜೇಂದ್ರ ಶೆಟ್ಟಿಗಾರ್ ಸ್ತುತಿ ಯಜ್ಞದ ಪುಸ್ತಕ ಮತ್ತು ಲೇಖನಿಯನ್ನು ಸಮಾಜದ ಜನರಿಗೆ ಹಸ್ತಾಂತರಿಸಿದರು. ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಶ್ರೀನಿವಾಸ ಶೆಟ್ಟಿಗಾರ್, ಕವಿತಾ ಜೆ.ಎಸ್, ಡಾ.ಶಿವಪ್ರಸಾದ್ ಕೆ. ಲೇಖನ ಯಜ್ಞದ ಸ್ತುತಿ ಪಠಿಸಿದರು. ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net