ಆಸ್ಕರ್ 2024: ಅತ್ಯುತ್ತಮ ನಟ, ಸಿನಿಮಾ ಸೇರಿ ಏಳು ಪ್ರಶಸ್ತಿ ಬಾಚಿಕೊಂಡ 'ಓಪನ್​ಹೈಮರ್'​!

WhatsApp Image 2024-03-11 at 9.00.30 AM
Published on

ಲಾಸ್​ ಏಜೆಂಲಿಸ್: ಆಸ್ಕರ್ ಪ್ರಶಸ್ತಿ 2024ರ ಸಮಾರಂಭವು ಇದೀಗ ಎಲ್ಲರ ಗಮನಸೆಳೆಯುತ್ತಿದ್ದು, ಯಾರ ಮುಡಿಗೆ ಪ್ರತಿಷ್ಠಿತ ಪ್ರಶಸ್ತಿಗಳು ಸೇರಲಿವೆ ಎಂಬ ನಿರೀಕ್ಷೆಗಳು ಸಿನಿಪ್ರೇಕ್ಷಕರಲ್ಲಿ ಹೆಚ್ಚಿದೆ. ಅವಾರ್ಡ್​ಗಳ ಪಟ್ಟಿ ಅನಾವರಣಗೊಳ್ಳುತ್ತಿದ್ದಂತೆ ಇದೀಗ ಒಂದೇ ಒಂದು ಸಿನಿಮಾ ಬರೋಬ್ಬರಿ ಏಳು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಸಿನಿಪ್ರಿಯರಲ್ಲಿ ಭಾರೀ ಆಶ್ಚರ್ಯ ಮೂಡಿಸಿದೆ.

ಹೆಸರಾಂತ ನಿರ್ದೇಶಕ ಕ್ರಿಸ್ಟಫರ್​ ನೋಲನ್ ನಿರ್ದೇಶನದ "ಓಪೆನ್‌ಹೈಮರ್" ಚಿತ್ರವು ಏಳು ಆಸ್ಕರ್‌ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ ಸೇರಿದಂತೆ ಇತರೆ ಅವಾರ್ಡ್​ಗಳನ್ನು ಸ್ವೀಕರಿಸಿದೆ. ಬೆಸ್ಟ್​ ಡೈರೆಕ್ಟರ್​ ಅವಾರ್ಡ್​ ಅನ್ನು ಕ್ರಿಸ್ಟೋಫರ್ ನೋಲನ್ ಪಡೆದರೆ, ಸಿಲಿಯನ್ ಮರ್ಫಿ 'ಅತ್ಯುತ್ತಮ ನಟ' ಪ್ರಶಸ್ತಿಯನ್ನು ಗೆದ್ದರು.

ಈ ಮೂಲಕ ಓಪೆನ್‌ಹೈಮರ್ 96ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಸಿನಿಮಾ ಸೇರಿ ಏಳು ಅವಾರ್ಡ್​ಗಳನ್ನು ಗೆಲ್ಲುವ ಮೂಲಕ ಪ್ರೇಕ್ಷಕ ವರ್ಗದಿಂದ ಅಪಾರ ಮನ್ನಣೆ ಗಳಿಸಿದೆ. ಇನ್ನು ಬೆಸ್ಟ್​ ಕಾಸ್ಟ್ಯೂಮ್​ ಡಿಸೈನ್ ಅವಾರ್ಡ್ ಕೊಡಲು ವೇದಿಕೆಗೆ ಬೆತ್ತಲಾಗಿ ಬಂದ ಜಾನ್ ಸೀನಾ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗುತ್ತಿದ್ದು, ಭಾರೀ ಟ್ರೋಲ್ ಕೂಡ ಆಗುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net