Operation Sindoor: ಭಾರತ ಮತ್ತು ಪಾಕಿಸ್ತಾನ ಮೇ.10 ರಂದು ಉಭಯ ದೇಶಗಳು ಜಂಟಿಯಾಗಿ ಸಹಿ ಮಾಡಿದ ಎಲ್ಲಾ ಮಿಲಿಟರಿ ಕ್ರಮಗಳ ಮೇಲೆ ಕದನ ವಿರಾಮ ಒಪ್ಪಂದವನ್ನು ವಿಸ್ತರಿಸಲು ಒಪ್ಪಿಕೊಂಡವೆ ಎಂದು ವರದಿಯಾಗಿದೆ.

ಗಡಿಯಲ್ಲಿ ಉದ್ವಿಗ್ನತೆ ಮುಂದುವರಿದಿರುವ ನಡುವೆ, ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ವಿಶ್ವಾಸ ವರ್ಧನೆ ಕ್ರಮಗಳನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಈ ಒಪ್ಪಂದವನ್ನು ಮೇ 10, 2025 ರಂದು ಡಿಜಿಎಂಒ ಮಟ್ಟದ ಮಾತುಕತೆಯಲ್ಲಿ ನಿರ್ಧಾರ ಮಾಡಲಾಯಿತು.
ಇಂಡಿಯಾ ಟುಡೇ ವರದಿಯ ಪ್ರಕಾರ, ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್, ಪಾಕಿಸ್ತಾನದ ಡಿಜಿಎಂಒ ಮೇಜರ್ ಜನರಲ್ ಕಾಶಿಫ್ ಅಬ್ದುಲ್ಲಾ ಮತ್ತು ಭಾರತೀಯ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರು ಗುರುವಾರ ಹಾಟ್‌ಲೈನ್‌ನಲ್ಲಿ ಮಾತನಾಡಿದ್ದಾರೆಂದು ಹೇಳಿಕೊಂಡ ನಂತರ, ಕದನ ವಿರಾಮವನ್ನು ಮೇ.18 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬೀದಿ ನಾಯಿ ದಾಳಿಯಿಂದ ಮೃತಪಟ್ಟ ಪ್ರೇಮಾ ಮನೆಗೆ ಶಾಸಕ ಭೇಟಿ, ಸಾಂತ್ವನ
ಪಹಲ್ಗಾಮ್ ದಾಳಿಯ ನಂತರ ಭಾರತದ ಕ್ರಮ
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಮೇ.7 ರ ಮಧ್ಯರಾತ್ರಿಯ ನಂತರ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಪ್ರಮುಖ ದಾಳಿ ನಡೆಸಿತ್ತು. ಇದರ ನಂತರ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ವೇಗವಾಗಿ ಹೆಚ್ಚಾಯಿತು. ಪಾಕಿಸ್ತಾನ ಭಯೋತ್ಪಾದಕರಿಗೆ ಬಹಿರಂಗವಾಗಿ ಬೆಂಬಲ ನೀಡಿತು ಮತ್ತು ಭಾರತೀಯ ಸೇನಾ ನೆಲೆಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿತು, ಆದರೆ ಭಾರತೀಯ ಸೇನೆಯು ಅದನ್ನು ವಿಫಲಗೊಳಿಸಿತ್ತು.(ಏಜೆನ್ಸೀಸ್)
ಮಸೂದ್ ಅಜರ್‌ಗೆ 14 ಕೋಟಿ ರೂ.ಘೋಷಣೆ: ಪಾಕಿಸ್ತಾನಕ್ಕೆ ಸಾಲ ನೀಡುವ ಬಗ್ಗೆ IMF ಮರುಪರಿಶೀಲಿಸಲಿ: ರಾಜನಾಥ್ ಸಿಂಗ್
Operation Sindoor; ಸಂಸತ್ತಿನಲ್ಲಿ ನಕಲಿ ಸುದ್ದಿ ಓದಿ ನಗೆಪಾಟಲಿಗೀಡಾದ ಪಾಕ್ ಉಪಪ್ರಧಾನಿ ಇಶಾಕ್ ದಾರ್!