ಆಪರೇಷನ್​ ಸಿಂಧೂರ ಯಶಸ್ವಿ; ಭಾರತೀಯ ಸಶಸ್ತ್ರ ಪಡೆಗಳಿಗೆ ಗೌರವಿಸಲು ತಿರಂಗಾ ಯಾತ್ರೆಯಲ್ಲಿ ಭಾಗಿಯಾದ ಅಮಿತ್ ಶಾ | Tiranga-yatra

amit shah
Published on

ಬಿಜೆಪಿ ನಾಯಕರು ಮತ್ತು ಸಂಸದರ ಜೊತೆಗೆ, ಪಕ್ಷದ ಪ್ರಮುಖ ಅಧಿಕಾರಿಗಳು ಸಹ ದೇಶದ ವಿವಿಧ ಭಾಗಗಳಲ್ಲಿ ಈ ಯಾತ್ರೆಯನ್ನು ನಡೆಸುತ್ತಿದ್ದಾರೆ. ಇನ್ನೂ ಈ ಭೇಟಿಯ ಸಮಯದಲ್ಲಿ, ಗೃಹ ಸಚಿವರು ಭಾರತೀಯ ಸೇನೆ ಮತ್ತು ಸಶಸ್ತ್ರ ಪಡೆಗಳ ಶೌರ್ಯವನ್ನು ಶ್ಲಾಘಿಸಿದರು ಮತ್ತು ಭಾರತೀಯ ಸೇನೆಯು ಅದ್ಭುತ ಧೈರ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದೆ ಎಂದು ಹೇಳಿದರು.

ಅಹಮದಾಬಾದ್‌: ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ಸಿನ ಬಳಿಕ ಭಾರತೀಯ ಸಶಸ್ತ್ರ ಪಡೆಗಳನ್ನು ಗೌರವಿಸಲು ಇಂದು (18) ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ಹಮ್ಮಿಕೊಂಡಿದ `ತಿರಂಗಾ ಯಾತ್ರೆ’ಯಲ್ಲಿ ಭಾಗಿಯಾಗಿದ್ದರು.

ಈ ತಿರಂಗಾ ಯಾತ್ರೆಯ ಕುರಿತು ಎಕ್ಸ್‌ನಲ್ಲಿ ಅಮಿತ್ ​ಶಾ ಪೋಸ್ಟ್ ಮಾಡಿದ್ದು, ರಾಷ್ಟ್ರದ ಧೈರ್ಯಶಾಲಿ ಯೋಧರು ತಮ್ಮ ಶೌರ್ಯದಿಂದ ಆಪರೇಷನ್ ಸಿಂಧೂರವನ್ನು ಭಯೋತ್ಪಾದನೆಯ ನಿರ್ಮೂಲನೆಗಾಗಿ ಬಳಸಿದ್ದಾರೆ. ಈ ಕಾರ್ಯಾಚರಣೆಯ ಐತಿಹಾಸಿಕ ಯಶಸ್ಸಿಗಾಗಿ ಸೈನಿಕರನ್ನು ಗೌರವಿಸಲು ಇದು ಗಾಂಧಿನಗರ ಲೋಕಸಭೆಯಲ್ಲಿ ಆಯೋಜಿಸಲಾದ ತಿರಂಗಾ ಯಾತ್ರೆ ಎಂದು ಬರೆದುಕೊಂಡಿದ್ದರು.

ದೇಶಾದ್ಯಂತ ತಿರಂಗ ಯಾತ್ರೆ

ಬಿಜೆಪಿಯು ಈ ತಿರಂಗಾ ಯಾತ್ರೆಯನ್ನು ಮೇ 13ರಂದು ಆರಂಭಿಸಿದ್ದು, ಮೇ 23ರಂದು ಇದು ಕೊನೆಗೊಳ್ಳಲಿದೆ. ಆಪರೇಷನ್ ಸಿಂಧೂರ್ ಬಗ್ಗೆ ದೇಶವಾಸಿಗಳಿಗೆ ತಿಳಿಸಲು ಮತ್ತು ಭಾರತೀಯ ಸೇನೆಯನ್ನು ಗೌರವಿಸಲು ದೇಶದ ವಿವಿಧ ಭಾಗಗಳಲ್ಲಿ ತಿರಂಗ ಯಾತ್ರೆಯನ್ನು ಆಯೋಜಿಸಲಾಗುತ್ತಿದೆ. ದೆಹಲಿಯ ವಿವಿಧ ಭಾಗಗಳಲ್ಲಿ ಬಿಜೆಪಿ ತಿರಂಗ ಯಾತ್ರೆಯನ್ನೂ ನಡೆಸಿದೆ. ಭಾನುವಾರ ಗೃಹ ಸಚಿವ ಅಮಿತ್ ಶಾ ಅವರು ಅಹಮದಾಬಾದ್‌ನ ತಿರಂಗ ಯಾತ್ರೆಯಲ್ಲಿ ಭಾಗವಹಿಸಿದ್ದರು. ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ತಿರಂಗ ಯಾತ್ರೆಯಲ್ಲಿ ರಾಜ್ಯದ ಸಿಎಂ ಪುಷ್ಕರ್ ಸಿಂಗ್ ಧಾಮಿ ಭಾಗವಹಿಸಿದ್ದರು. ಇಲ್ಲಿಯವರೆಗೆ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರಿಯಾಣ, ಯುಪಿ, ಬಿಹಾರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ತಿರಂಗ ಯಾತ್ರೆ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net