

Online Gaming Bill: ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರ ಪ್ರತಿಭಟನೆಯ ನಡುವೆಯೂ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆಯನ್ನು ಗುರುವಾರ (ಆಗಸ್ಟ್,21) ಅಂಗೀಕರಿಸಲಾಗಿದೆ. ಈ ಪ್ರಕ್ರಿಯೆಯನ್ನು ಧ್ವನಿ ಮತದ ಮೂಲಕ ಶಾಸನವನ್ನು ಅಂಗೀಕರಿಸಲಾಯಿತು.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಪ್ರಾಯೋಗಿಕವಾಗಿ ಮಂಡಿಸಿದ ಈ ಮಸೂದೆಯು, ಇ-ಸ್ಪೋರ್ಟ್ಸ್ ಮತ್ತು ಆನ್‌ಲೈನ್ ಸಾಮಾಜಿಕ ಗೇಮಿಂಗ್ಗಳನ್ನು ಉತ್ತೇಜಿಸುವಾಗ ಎಲ್ಲಾ ರೀತಿಯ ಆನ್‌ಲೈನ್ ಹಣದ ಆಟಗಳನ್ನು ನಿಷೇಧಿಸುವ ಗುರಿಯನ್ನು ಹೊಂದಿದೆ.
ಈ ಮಸೂದೆಯ ಬಗ್ಗೆ ಸಂಸತ್ನಲ್ಲಿ ಮಾತನಾಡಿದ ಅಶ್ವಿನಿ ವೈಷ್ಣವ್, ಜನರು ಆನ್‌ಲೈನ್ ಹಣದ ಆಟದಲ್ಲಿ ತಮ್ಮ ಜೀವನದ ಉಳಿತಾಯವನ್ನು ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದರು. ಅಲ್ಲದೆ, ಈ ಮಸೂದೆಯ ಬಗ್ಗೆ ನಾವು ಮೂರು ವರ್ಷಗಳಿಂದ ಅಧ್ಯಾನ ನಡೆಸುತ್ತಿದ್ದೇವೆ. ಹಾನಿಕಾರಕ ಪರಿಣಾಮವನ್ನು ಹೇಗೆ ತಡೆಯಬಹುದು ಮತ್ತು ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ನೋಡಲು ನಾವು ಉದ್ಯಮದೊಂದಿಗೆ ಆಳವಾಗಿ ತೊಡಗಿಸಿಕೊಂಡಿದ್ದೇವೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು.
ಈ ಆ್ಯಪ್ಗಳು ಭಯೋತ್ಪಾದಕ ಸಂಘಟನೆಗಳು ಹಣ ವರ್ಗಾವಣೆ, ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ಮತ್ತು ಸಂದೇಶ ಕಳುಹಿಸುವ ಮಾರ್ಗಗಳಾಗಿಯೂ ಹಲವಾರು ವೇದಿಕೆಗಳನ್ನು ದುರುಪಯೋಗಪಡಿಸಿಕೊಂಡಿವೆ ಎಂದು ವೈಷ್ಣವ್ ಸ್ಪಷ್ಟಪಡಿಸಿದ್ದಾರೆ.
ಆನ್‌ಲೈನ್ ಗೇಮಿಂಗ್ ಮಸೂದೆಯು ಆನ್‌ಲೈನ್ ಹಣದ ಆಟಗಳ ಜಾಹೀರಾತುಗಳನ್ನು ಸಹ ನಿಷೇಧಿಸುತ್ತದೆ. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಇಂತಹ ಚಟುವಟಿಕೆಗಳಿಗೆ ಹಣವನ್ನು ಸುಗಮಗೊಳಿಸುವುದನ್ನು ಅಥವಾ ವರ್ಗಾಯಿಸುವುದನ್ನು ನಿರ್ಬಂಧಿಸುತ್ತದೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್)