

Bikes: ಜೈಪುರದ ಮಾನಸ ಸರೋವರ ಪ್ರದೇಶದಲ್ಲಿ ಎರಡು ಬೈಕುಗಳು ಜನನಿಬಿಡ ರಸ್ತೆಯ ಮಧ್ಯದಲ್ಲಿ ಜೋಡಿ ನೃತ್ಯದಲ್ಲಿ ತೊಡಗಿಕೊಂಡಿದ್ದು, ಇಬ್ಬರು ಪುರುಷರು ತಮ್ಮ ಕೈಯಲ್ಲಿ ಕೋಲು ಹಿಡಿದು ಅವುಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಈ ದೃಶ್ಯವು ಕಾಲ್ಪಾನಿಕವಾಗಿ ಇಂಟರ್ನೆಟ್ನಲ್ಲಿ ಕಾಣಿಸಿಕೊಳ್ಳುವಂತೆ ನಿಜವಾಗಿ ರಸ್ತೆಯ ಮಧ್ಯೆದಲ್ಲಿ ಕಂಡುಬಂದಿದೆ. ಇದು ಜೋಡಿ ನೃತ್ಯವಲ್ಲದಿರಬಹುದು ಆದರೆ, ಈ ಬೈಕುಗಳು ಪ್ರದರ್ಶನ ನೀಡಲು ಸಜ್ಜಾಗಿದೆ ಎಂದು ತೋರುತ್ತದೆ. ಅದು ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಂಡು ಜನರಿಗೆ ತೊಂದರೆ ಮಾಡಿದೆ.
@jaipurkajalwa ಎಂಬ ಇನ್ಸ್ಟಾಗ್ರಾಮ್ ಬಳಕೆದಾರ ತನ್ನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ಇನ್ನು ಈ ವಿಡಿಯೋದಲ್ಲಿ ಜನನಿಬಿಡ ರಸ್ತೆಯಲ್ಲಿ ಹಲವಾರು ಪ್ರಯಾಣಿಕರು ರಸ್ತೆಯಿಂದ ಮುಂದೆ ಹೋಗಲು ಕಾಯುತ್ತಿರುವುದನ್ನು ಗಮನಿಸಬಹುದು. ಆದರೆ, ಅಲ್ಲಿ ಬೈಕ್ ಸವಾರರು ಯಾರು ಎಂಬುದು ತಿಳಿಯುತ್ತಿಲ್ಲ. ಇಲ್ಲಿ ಬೈಕ್ಗಳನ್ನು ಸಾಹಸ ಮಾಡಲು ಹೊಂದಿಸಿದಂತೆ ತೋರುತ್ತಿದ್ದು, ಪ್ರಯಾಣಿಕರಿಗೆ ಸಂಚಾರ ನಡೆಸಲು ಕಷ್ಟವಾಗಿದೆ. ಸಾಹಸವು ದೀರ್ಘಕಾಲದವರೆಗೆ ಮುಂದುವರೆದಿದ್ದು, ಇಬ್ಬರು ಯುವಕರು ಕೋಲುಗಳನ್ನು ಹಿಡಿದು ಬೈಕ್ಗಳ ಸಾಹಸವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದರು. ಇನ್ನು ಕೆಲವು ಗಂಟೆಗಳ ನಂತರ ಸಾಹಸ ನಿಂತಿದ್ದು, ಮೊದಲಿನ ರೀತಿಯಲ್ಲಿ ಪ್ರಯಾಣಿಕರು ರಸ್ತೆಯಲ್ಲಿ ಚಲಿಸಲಾರಂಭಿಸಿದರು.
ಈ ಘಟನೆಯ ಬಗ್ಗೆ ಬೈಕುಗಳ ಮಾಲೀಕ ಯಾರು? ಮಧ್ಯ ರಸ್ತೆಯಲ್ಲಿ ಈ ರೀತಿ ಮಾಡಿದ್ದು ಯಾರು ಎಂಬುದು ಇಲ್ಲಿಯವರೆಗೂ ತಿಳಿದಿಲ್ಲ.
ಈ ದೃಶ್ಯ ವೈರಲ್ ಆಗುತ್ತಿದ್ದಂತೆಯೇ ನೆಟಿಜನ್ಗಳು ಪ್ರತಿಕ್ರಿಯೆ ನೀಡಿದ್ದು, ಒಬ್ಬ ಇನ್ಸ್ಟಾಗ್ರಾಮ್ ಬಳಕೆದಾರ ಬೈಕ್ಗಳು ಪ್ರಣಯ ಕ್ಷಣದಲ್ಲಿ ತೊಡಗಿರುವ ಪ್ರೇಮಿಗಳಂತೆ ಕಾಣುತ್ತಿವೆ. ಇದು ಸೈಯಾರ ಚಿತ್ರದ ಅಡ್ಡ ಪರಿಣಾಮಗಳಿರಬಹುದು ಎಂದು ಪ್ರತಿಕ್ರಿಯಿಸಿದ್ದಾನೆ. (ಏಜೆನ್ಸೀಸ್)