

Summons: ಆನ್ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ Google, Meta ಸಂಸ್ಥೆಗಳ ಪ್ರತಿನಿಧಿಗಳು ಇಡಿ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಜು.28ಕ್ಕೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಸೋಮವಾರ 2ನೇ ಸಮನ್ಸ್ ನೀಡಿದೆ.
ಪ್ರಕರಣದ ಸಂಬಂಧ ದಾಖಲೆಯನ್ನ ಸಂಗ್ರಹಿಸಲು ಸಮಯ ಬೇಕು. ಈ ಹಿನ್ನೆಲೆ ವಿಚಾರಣೆಯನ್ನ ಒಂದು ವಾರ ಮುಂದೂಡುವಂತೆ ಎರಡೂ ಸಂಸ್ಥೆಗಳ ಪ್ರತಿನಿಧಿಗಳು ಕೋರಿದ್ದರಿಂದ ಜು.28ಕ್ಕೆ ಹಾಜರಾಗುವಂತೆ ಸಮನ್ಸ್ ಹೊರಡಿಸಲಾಗಿದೆ.
ಈ ಟೆಕ್ ಕಂಪನಿಗಳು ಬೆಟ್ಟಿಂಗ್ ಆ್ಯಪ್ಗಳಿಗೆ ಪ್ರಮುಖ ಜಾಹೀರಾತು ಸ್ಲಾಟ್‌ಗಳನ್ನು ಒದಗಿಸಿದ್ದು, ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಆ್ಯಪ್ಗಳ ಪ್ರಚಾರಕ್ಕೆ ಅವಕಾಶವನ್ನು ನೀಡಿದೆ. ಮತ್ತೆ ಇವುಗಳನ್ನು ಪ್ರಮೋಟ್ ಮಾಡುತ್ತಿದೆ ಎಂದು ಇಡಿ ತನ್ನ ನೋಟೀಸ್‌ನಲ್ಲಿ ತಿಳಿಸಿದೆ.
ಮಹದೇವ್ ಬೆಟ್ಟಿಂಗ್ ಆ್ಯಪ್, ಪೇರ್ಪ್ಲೇ ಆ್ಯಪ್ಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಅಕ್ರಮ ಹಣ ವರ್ಗಾವಣೆ, ಹವಾಲಾ ಹಣ ದಂಧೆ ಸೇರಿ ಅನೇಕ ಅಕ್ರಮ ಪ್ರಕರಣಗಳ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಟಾಲಿವುಡ್ನ ಸುಮಾರು 40ಕ್ಕೂ ಹೆಚ್ಟು ಸೆಲೆಬ್ರೆಟಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿದೆ.( ಏಜೆನ್ಸೀಸ್ )